ಅವಳ ಮಾತಿನ ಭಯದಲ್ಲಿ ಬದುಕುವ ಗಂಡಸರು: ಹೇಳದಿರುವ ನೋವಿನ ಕಥೆಗಳು | International Womens Day: The Silent Struggles of Men in Marriage – Ruupa Rao Writes

Karnataka

oi-Shiddalingesh S

ಪ್ರತಿ ವರ್ಷ ಬಂದಂತೆ ಈ ವರ್ಷವು ಮಹಿಳೆಯರ ದಿನಾಚರಣೆಯು ಆಚರಿಸಲಾಯಿತು. ಮಹಿಳಾ ದಿನಾಚರಣೆ ಬಂದಾಗ ನಾವು ಮಹಿಳೆಯರ ಸಾಧನೆ, ಹೋರಾಟ ಮತ್ತು ಅವರ ಎದುರಿಸುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಕುಟುಂಬದೊಳಗಿನ ಸಂಬಂಧಗಳಲ್ಲಿ ನೋವು ಅನುಭವಿಸುವವರು ಕೆಲವೊಮ್ಮೆ ಗಂಡಸರೂ ಆಗಿರುತ್ತಾರೆ. ಇದು ಹೊರಗೆ ಬರುವುದಿಲ್ಲ. ಮದುವೆ ಎಂಬ ಸಂಬಂಧಗಳಲ್ಲಿ ಒಬ್ಬರ ಮೇಲೆ ಒಬ್ಬರು ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಮನಸ್ಸುಗಳನ್ನು ಅರ್ಥಮಾಡಿಕೊಳ್ಳುಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ಗಂಡಸರು ಅನುಭವಿಸುವ ಅವಮಾನ, ಒತ್ತಡ, ಮತ್ತು ಭಯದ ವಾತಾವರಣವನ್ನು ನಾವು ಇಲ್ಲಿ ಗಮನಿಸಲೇಬೇಕು. ಅಂತಹ ನೋವಿನ ಕಥೆಗಳನ್ನು ರಾಷ್ಟ್ರೀಯತಾವಾದಿ ಮತ್ತು ಎಂಪನೇಲ್ಡ್ ಮನಶಾಸ್ತ್ರಜ್ಞರಾದ ರೂಪಾ ರಾವ್ ತಮ್ಮ ಫೇಸ್‌ಬುಕ್ ಬರಹದಲ್ಲಿ ಈ ರೀತಿ ಬಿಚ್ಚಿಟ್ಟಿದ್ದಾರೆ.

ಇವತ್ತು ಹೆಂಗಸರ ದಿನ ಆದರೆ ಒಂದಷ್ಟು ಹೆಂಗರುಳು ಹೊತ್ತ ಗಂಡಸರ ಬಗ್ಗೆ ಬರೆಯೋಣ ಅಂತ. “ಮೇಡಂ ನಾನು ಅವಳು‌ ಹೇಳಿದ್ದನ್ನು ಕೇಳಲಿಲ್ಲ ಅಂದರೆ ಜಗಳವಾಡಿದಾಗ ನಾನು ಕೋಪ ಮಾಡಿಕೊಂಡು ಕಿರುಚಿದ್ದನ್ನೆಲ್ಲಾ ರೆಕಾರ್ಡ್ ಮಾಡಿಕೊಂಡು ಪೋಲೀಸರಿಗೆ ಕಂಪ್ಲೈಂಟ್ ಕೊಡುವೆ ಎಂದು ಹೆದರಿಸುತ್ತಾಳೆ” ಎನ್ನುವವ ಒಬ್ಬ.

International Womens Day

“ಮೇಡಂ , ಮದುವೆಯಾದ ಮೂರೇ ದಿನಕ್ಕೆ ನನ್ನಿಂದ ದೂರ ಮಲಗಲಾರಂಭಿಸಿದಳು. ನಿಮ್ಮ ಮನೆಯವರನ್ನು ಬಿಟ್ಟು ದೂರ ಬಂದರೆ ಮಾತ್ರ ನನ್ನ ಪಕ್ಕದಲ್ಲಿ ಮಲಗಬಹುದು ಎಂದಳು. ನಾ ಹೇಗೆ ಅಪ್ಪ ಅಮ್ಮನನ್ನು ಬಿಡಲಿ. ಹೋಗಲಿ ನೀನು ಪಕ್ಕ ಮಲಗೋದೇ‌ ಬೇಡ ಎಂದಾಗ ನೀನು ನಿಮ್ಮ ಮನೆಯವರು ನನ್ನ ಮೇಲೆ ದೌರ್ಜನ್ಯ ನಡೆಸ್ತಿದ್ದೀರೀ ಅಂತ ಕಂಪ್ಲೈಂಟ್ ಕೊಡುವೆ ಅಂತಾಳೆ” ಎನ್ನುವ ಇನ್ನೊಬ್ಬ ‌.

” ನೀನು ತುಂಬಾ ಸಾಫ್ಟ್ ನನಗೆ ನೀನು ಇಷ್ಟ ಇಲ್ಲ, ನೋಡು ಆ ಅವನು‌ಎಷ್ಟು ಗಂಡಸಾಗಿದ್ದಾನೆ ಎಂದು ಹೀಗಳೆಯುವ ಹೆಂಡತಿಗಾಗಿ ಬದಲಾಗಲು ಪ್ರಯತ್ನಿಸಿ ಸೋಲುತ್ತಿರುವ ಒಬ್ಬ ಗಂಡು.

” ನೀನು ತುಂಬಾ ಕೋಪ ಮಾಡಿಕೊಂಡೆ ನನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಹಾಗಾಗಿ ನಾನು ನಿನ್ನ ಬಿಟ್ಟು ನನ್ನ ಮ್ಯಾನೇಜರ್ ಜೊತೆ ಇರುವೆ” ಎನ್ನುವ ಇನ್ನೊಬ್ಬಳು.

ಒಂದು ಕಾಲದಲ್ಲಿ ಗಂಡಸರೆಂದರೆ ನಖಶಿಖಾಂತ ದ್ವೇಷಿಸುತ್ತಿದ್ದೆ. ಆದರೆ ಕಾಲಾನಂತರದಲ್ಲಿ ಎಲ್ಲಾ ಗಂಡಸರೂ ದ್ವೇಷ ಮಾಡುವಷ್ಟಿಲ್ಲ ಎಂದು ತಿಳಿದುಕೊಂಡೆ. ಹಾಗೇ ಒಂದು ಕಾಲದಲ್ಲಿ ಎಲ್ಲಾ ಹೆಂಗಸರೂ ಪಾಪಾ ತುಂಬಾ ಮೃದು ಮನ‌ಸಿನವರು .. ಅವರು ಸದಾ ದೌರ್ಜನ್ಯಕ್ಕೆ ಸಿಕ್ಕಿ‌ಹಾಕಿಕೊಳ್ಳುವವರು ಎಂದುಕೊಳ್ತಿದ್ದೆ. ಆದರೆ ಕಾಲಾನಂತರದಲ್ಲಿ ಹೆಂಗಸರೂ ದೌರ್ಜನ್ಯ ಎಸಗಬಹುದು ಎಂದು ಗೊತ್ತಾಯಿತು.

ನಿಜ ಈಗಲೂ ಗಂಡನ ದೌರ್ಜನ್ಯಕ್ಕೆ ಒಳಗಾಗುವ ಹೆಂಗಸರು ಇದ್ದಾರೆ. ಅವರ ಸಂಖ್ಯೆ ಯಾರೂ ಬಹಳ‌ ಬಹಳ ಜಾಸ್ತಿ‌ ಇದೆ, ಅಂದರೆ ಒಮ್ಮೆ ಅವರು ಹೊರಗೆ ಬಂದು ಹೇಳಿಕೊಂಡರೆ ಅವರಿಗೆ ಸಹಾನುಭೂತಿ ಕನಿಕರ ,ಕಾನೂನಿನ ಸಹಾಯ‌ಹಸ್ತ ಎಲ್ಲವೂ ಸಿಗುತ್ತೆ.

ಆದರೆ ಈ ಹೆಂಗರುಳಿನ ಗಂಡಸರೂ ಸಹಾ ಗಂಡೆದೆಯ ಹೆಂಗಳೆಯರ ಬಲೆಗೆ ಸಿಕ್ಕು ಒದ್ದಾಡುತ್ತಿದ್ದಾರೆ. ಅವರಿಗೆ ಕನಿಕರ, ಸಹಾನುಭೂತಿ , ಕಾನೂನು ಏನೂ ಇಲ್ಲ. ಹೆಂಡತಿಯ ಮೇಲೆ ಕೈ‌ಮಾಡಿದ ಗಂಡು ಕ್ರೂರಿ ಎನಿಸಿಕೊಳ್ತಾನೆ. ಹೆಂಡತಿಗೆ ಅಯ್ಯೋ ಪಾಪ ಎಂಬ ಮಾತು ಸಿಗುತ್ತದೆ ಆದರೆ ಗಂಡನನ್ನು ಹಿಗ್ಗಾ‌ಮುಗ್ಗ ಹೊಡೆದು ಪರಚಿದ ಹೆಂಡತಿ ಧೈರ್ಯಸ್ಥೆ ಎನಿಸಿಕೊಳ್ತಾಳೆ. ಗಂಡು ಕೈಲಾಗದವ ಎಂಬ ಅಪಹಾಸ್ಯಕ್ಕೆ ಸಿಕ್ಕಿಹಾಕಿಕೊಳ್ತಾನೆ.

ಹೆಣ್ಣಿಗೆ ಇರುವ ಕೌಟುಂಬಿಕ ದೌರ್ಜನ್ಯ ಕಾನೂನಿನಂತಹ ರಕ್ಷಾ ಗಂಡಿಗೇಕೆ ಇಲ್ಲ ಎಂಬುದು ನನ್ನ ಪ್ರಶ್ನೆ.
ನಿಮಗೆ ಗೊತ್ತಾ ? ಹೆಂಡತಿ ಇಂದ ಈ ರೀತಿಯ ಸಮಸ್ಯೆಗೆ‌ಒಳಗಾಗುವ ಗಂಡು ಮಾನಸಿಕವಾಗಿ ಬಹಳ ಕುಗ್ಗಿ ಹೋಗುತ್ತಾನೆ, ಅವನ ಆತ್ಮ ಗೌರವ, ಸ್ವಂತಿಕೆ ಎಲ್ಲವೂ ನಶಿಸಿಹೋಗುತ್ತೆ. ಹೊರಗೆ ಹೇಳಿಕೊಳ್ಳಲಾಗದ ಒಳಗೆ ಇಟ್ಟುಕೊಳ್ಳಲಾರ. ಈಗೀಗ ಅಂತಹ‌ ಬಹಳ ಗಂಡಸರನ್ನು ಕೌನ್ಸೆಲಿಂಗ್ ಮೂಲಕ ಸಂಧಿಸುತ್ತಿರುವುದರಿಂದ ಅವರೊಳಗಾಗುವ ಆ ತುಮುಲಗಳು, ಒದ್ದಾಟಗಳು ಬಹಳ ಕಾಡುತ್ತಿವೆ‌. ಅವಳೇನು ಕೇಳಿದರೂ ಕೊಟ್ಟುಬಿಡುವೆ ನನ್ನನ್ನು ಏನಾದರೂ ಮಾಡಿಕೊಳ್ಳಲಿ ನನ್ನ ಮನೆಯವರನ್ನು ಬಿಟ್ಟು ಬಿಡಲಿ ಸಾಕು ಎಂದು ಕೈ‌ಮುಗಿಯುವ ಗಂಡಂದಿರು ಅದೆಷ್ಟೊ ಜನ‌

ಹೆಂಡತಿಯಿಂದ ಶೋಷಣೆಗೊಳಗಾಗುವ ಗಂಡಸರ ಸಂಖ್ಯೆ ಕಡಿಮೆಯೇ ನಿಜ, ಇರಲಿ ಆದರೂ ಆ ಕಡಿಮೆ ಜನರೂ ಸಹಾ ಮನುಷ್ಯರೇ ಅಲ್ಲವಾ?

ಅಷ್ಟಕ್ಕೂ ಮದುವೆ ಎಂಬ ವ್ಯವಸ್ಥೆಯಲ್ಲಿ ಶೋಷಕ ,ಶೋಷಿತ ಶೋಷಣೆ ಎಲ್ಲವೂ ಇರುವುದಾದರೂ ಏಕೆ?
ಮದುವೆಗೆ‌ ಮುಂಚೆಯೇ ನಿಮ್ಮ ನಿಮ್ಮ ಅಭಿರುಚಿಗೆ ಹೊಂದದೇmಇದ್ದರೆ ಮದುವೆ ಆಗಲೇಬೇಡಿ. ಮದುವೆ ಆದ ನಂತರ ಅಪ್ಪ ಅಮ್ಮ ಬಲವಂತ ಮಾಡಿದರು ಆದ್ದರಿಂದ ಮದುವೆ ಆದೆ , ಈಗ ನನಗೆ ನೀನು ಬೇಡ ನಾನು ನಿನಗೆ ಇಷ್ಟ ಬಂದಂತೆ ಮಾಡುವೆ ಅದಕ್ಕೆ ನೀನು ಅಡ್ಡಿ ಬರೋ ಹಾಗಿಲ್ಲ ಎಂಬೆಲ್ಲಾ ಮಾತುಗಳೇಕೆ? ಹೆಣ್ಣಾಗಲಿ ಗಂಡಾಗಲಿ ಕೇವಲ ಮದುವೆ ಆದೆ ಎಂಬ ಏಕೈಕ ಕಾರಣಕ್ಕಾಗಿ ಯಾರಿಗೂ ಯಾರನ್ನೂ ಮಾನಸಿಕವಾಗೀ ಆಗಲಿ ದೈಹಿಕವಾಗಿಯಾಗಲಿ ಹಿಂಸಿಸುವ ಹಕ್ಕು ಯಾರಿಗೂ ಇಲ್ಲ.

ಈ ಅಂತರರಾಷ್ಟ್ರೀಯ ಮಹಿಳಾ ದಿನದಂದು ಎಲ್ಲಾ ಹೆಂಗಸರಿಗೂ ಹಾಗು ಹೆಂಗರುಳು ಹೊತ್ತ ಗಂಡಸರಿಗೂ ಹೆಣ್ಣಿನ ದಿನ ಶುಭಾಶಯಗಳು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/international-womens-day-the-silent-struggles-of-men-in-marriage-ruupa-rao-writes-446443.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo