Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ | Byadgi Chilli Market Hit by Middle East War: Exports Stalled and Shipping Costs Double 3600 Dollar

Karnataka

-Shankrappa Parangi

ಹಾವೇರಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ. ಇರಾನ್-ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಯುದ್ಧ ಶಾಂತಿ ಸಂಧಾನಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇದರ ಪ್ರಭಾವವು ತೈಲ ಪೂರೈಕೆ, ಜಾಗತಿಕ ಆರ್ಥಿಕತೆ ಹಾಗೂ ಇನ್ನಿತರ ರಂಗದ ಮೇಲೆ ಬೀರಿದೆ. ಇದೀಗ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮೇಲೂ ಉಂಟಾಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಪ್ರತಿ ವರ್ಷ ಲಕ್ಷಾಂತರ ಚೀಲ ಒಣ ಮೆಣಸಿನಕಾಯಿಗಳು ಬರುತ್ತವೆ. ಇಲ್ಲಿಂದ ದೇಶ ವಿದೇಶಗಳಿಗೆ ರಫ್ತಾಗುತ್ತವೆ. ಅದರಂತೆ ಮಧ್ಯಪ್ರಾಚ್ಯದ ದುಬೈ, ಇರಾನ್, ಇಸ್ರೇಲ್‌ನಂತಹ ದೇಶಗಳಿಗೆ ರವಾನೆ ಆಗುತ್ತದೆ. ಯುದ್ಧದಿಂದಾಗಿ ಕಳೆದ ಎರಡು ವಾರದಿಂದ ರಫ್ತು ನಿಂತಿದೆ. ಅಲ್ಲಿಂದ ಬರಬೇಕಾದ ಬಾಕಿ ಕೋಟ್ಯಾಂತರ ರೂಪಾಯಿ ಹಣ ಸಹ ಬರುತ್ತಿಲ್ಲ. ಇನ್ನು ಬೇರೆ ದೇಶಗಳಿಗೆ ರಫ್ತು ಬಾಡಿಗೆ ಸಹ ಏರಿಕೆ ಆಗಿದೆ ಎಂದು ಬ್ಯಾಡಗಿ ಮಾರುಕಟ್ಟೆ ವರ್ತಕರು ತಿಳಿಸಿದ್ದಾರೆ.

Byadgi Chilli Market

ಬ್ಯಾಡಗಿ ಮೆಣಸಿನಕಾಯಿ ವಿಶ್ವ ಪ್ರಸಿದ್ಧಿ ಪಡೆದಿದೆ. ಕರ್ನಾಟಕದ ಕುಂದಗೋಳ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ ಹಾಗೂ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು ಭಾಗಗಳಿಂದಲೂ ಇಲ್ಲಿಗೆ ಮೆಣಸಿನಕಾಯಿ ಬರುತ್ತದೆ. ಈ ವರ್ಷ ಒಣಮೆಣಸಿನಕಾಯಿ ಬೆಳೆಯು ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಡಿಸೆಂಬರ್‌ನಿಂದ ಮಾರ್ಚ್ ಹೊತ್ತಿಗೆ ಮಾರುಕಟ್ಟೆಗೆ ಬರಬೇಕಿದ್ದ ಮೆಣಸಿನಕಾಯಿ ಪ್ರಮಾಣದಲ್ಲಿ ಭಾರೀ ಕುಸಿತವಾಗಿತ್ತು. ಇದರಿಂದ ಮಾರುಕಟ್ಟೆ ಬಣಗುಡುತ್ತಿತ್ತು. ಆ ಸಂಕಷ್ಟ ಬೆನ್ನಲ್ಲೆ ಮತ್ತೆ ಯುದ್ಧದ ಪರಿಣಾಮ ಬ್ಯಾಡಗಿ ಮಾರುಕಟ್ಟೆ ಮೇಲಾಗಿದ್ದು, ವಿದೇಶಿ ರಫ್ತು ವ್ಯಾಪಾರ ಅತಂತ್ರವಾಗಿದೆ.

ಮಧ್ಯಪ್ರಾಚ್ಯ ದೇಶಗಳಿಗೆ ಖಾರದ ಪುಡಿ, ಮೆಣಸಿನಕಾಯಿ ರವಾನೆ ಆಗುತ್ತದೆ. ಸುಮಾರು 15 ದಿನಗಳಿಂದ ರಫ್ತು ನಿಂತಿರುವ ಜೊತೆಗೆ ಅಲ್ಲಿಂದ ಬರಬೇಕಿದ್ದ ಸುಮಾರು 10 ಕೋಟಿ ರೂಪಾಯಿಯಷ್ಟು ಹಣ ಬಾರದೇ ಸ್ಥಗಿತವಾಗಿದೆ. ಮತ್ತೊಂದೆಡೆ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ಮುಂದೆ ಹೇಗೆ ಎಂಬ ಚಿಂತೆ ವರ್ತಕರಲ್ಲಿ ಕಾಡುತ್ತಿದೆ.

ವಿದೇಶಿ ರಪ್ತು ಬಾಡಿಗೆ ದರ ಹೆಚ್ಚಳ

ಮಸಾಲೆ ಹಾಗೂ ಸೌಂದರ್ಯವರ್ಧಕ ತಯಾರಿಕೆಗೆ ಬ್ಯಾಡಗಿ ಮೆಣಸಿನಕಾಯಿ ಬಳಕೆ ಆಗುತ್ತದೆ. ರೀತಿಯ ಬಳಕೆ ಜೊತೆಗೆ ಆಹಾರ ಪದಾರ್ಥಕ್ಕಾಗಿಯು ವಿದೇಶಕ್ಕೆ ರಫ್ತಾಗುತ್ತದೆ. ಈ ಪೈಕಿ ಸಿಂಗಾಪುರ, ಥೈಲ್ಯಾಂಡ್, ಬಾಲಿ, ಮಲೇಶೀಯಾ, ಇಂಡೋನೇಶಿಯಾ, ಇರಾನ್ ಮತ್ತು ಇಸ್ರೇಲ್ ಸೇರಿ ಅನೇಕ ರಾಷ್ಟ್ರಗಳಿಗೆ ಮೆಣಸಿನಕಾಯಿ ರಫ್ತಾಗುತ್ತದೆ. ಯುದ್ಧ ಪೀಡಿತ ದೇಶಗಳಿಗೆ ಮೆಣಸಿನಕಾಯಿ ರವಾನೆ ನಿಂತಿದೆ. ಬೇರೆ ದೇಶಗಳಿಗೆ ಮೊದಲು 1800 ಡಾಲರ್‌ನಷ್ಟಿದೆ ಬಾಡಿಗೆ ಇದೀಗ 3600 ಡಾಲರ್‌ನಷ್ಟು ಏರಿಕೆ ಆಗಿದೆ ಎಂದು ವರ್ತಕರು ಕಳವಳ ವ್ಯಕ್ತಪಡಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/byadgi-chilli-market-hit-by-middle-east-war-exports-stalled-and-shipping-costs-double-3600-dollar-011-446499.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo