
India
oi-Manohara M
ಅಡುಗೆ ಅನಿಲದ ಅಕ್ರಮ ದಾಸ್ತಾನು ತಡೆಯಲು ಮತ್ತು ಎಲ್ಲರಿಗೂ ಸಮಾನವಾಗಿ ಗ್ಯಾಸ್ ವಿತರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶೀಯ ಎಲ್ಪಿಜಿ ಸಿಲಿಂಡರ್ (LPG Cylinder) ಮರು ಬುಕಿಂಗ್ ಅವಧಿಯನ್ನು ಹೆಚ್ಚಿಸಿದೆ. ಸಿಲಿಂಡರ್ ರಿಫಿಲ್ ಬುಕ್ಕಿಂಗ್ ಮಾಡಲು ಇರುವ ಕನಿಷ್ಠ ಕಾಯುವ ಅವಧಿಯನ್ನು 21ರಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಕ್ರಮದಿಂದ ಸಿಲಿಂಡರ್ಗಳ ಅತಿಯಾದ ಬುಕ್ಕಿಂಗ್ ಹಾಗೂ ಸಂಗ್ರಹಣೆ ನಿಯಂತ್ರಣವಾಗುವ ಜೊತೆಗೆ ಎಲ್ಲಾ ಗ್ರಾಹಕರಿಗೂ ಗ್ಯಾಸ್ ಸರಬರಾಜು ಸಮನಾಗಿ ತಲುಪಲು ಸಹಾಯವಾಗಲಿದೆ.
ಈ ಹಿಂದೆ ಇದ್ದ 21 ದಿನಗಳ ಕನಿಷ್ಠ ಕಾಯುವ ಅವಧಿಯನ್ನು ಈಗ 25 ದಿನಗಳಿಗೆ ಹೆಚ್ಚಿಸಲಾಗಿದೆ. ಅಂದರೆ, ಒಂದು ಸಿಲಿಂಡರ್ ಪಡೆದ 25 ದಿನಗಳ ನಂತರವಷ್ಟೇ ಮುಂದಿನ ಸಿಲಿಂಡರ್ ಬುಕ್ ಮಾಡಲು ಅವಕಾಶವಿರುತ್ತದೆ. ಗ್ಯಾಸ್ ಸಂಗ್ರಹಣೆ ತಡೆಯುವುದು ಮತ್ತು ಪೂರೈಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ಈ ನಿರ್ಧಾರದ ಹಿಂದಿನ ಮುಖ್ಯ ಉದ್ದೇಶ ಎಂದು ಮೂಲಗಳು ತಿಳಿಸಿವೆ.

ಗೃಹ ಸಿಲಿಂಡರ್ಗೆ ಮೊದಲ ಆದ್ಯತೆ
ಈ ಹಿಂದೆ 55 ದಿನಗಳಿಗೊಮ್ಮೆ ಸಿಲಿಂಡರ್ ಕಾಯ್ದಿರಿಸುತ್ತಿದ್ದ ಗ್ರಾಹಕರು, ಈಗ ಕೇವಲ 15 ದಿನಗಳಲ್ಲೇ ಮರುಬುಕಿಂಗ್ ಮಾಡುತ್ತಿರುವ ಪ್ರಕರಣಗಳು ಕಂಡುಬಂದಿವೆ. ಇದನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿದೆ. ಎಲ್ಪಿಜಿ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವಂತೆ ತೈಲ ಸಂಸ್ಕರಣಾಗಾರಗಳಿಗೆ ಸರ್ಕಾರ ಆದೇಶಿಸಿದೆ. ವಾಣಿಜ್ಯ ಸಿಲಿಂಡರ್ ಪೂರೈಕೆಗಿಂತ ಗೃಹಬಳಕೆಯ ಎಲ್ಪಿಜಿ ಪೂರೈಕೆಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಸೂಚಿಸಿದೆ.
ಗೃಹಬಳಕೆಯ ಗ್ರಾಹಕರ ಹಿತಾಸಕ್ತಿಯೇ ನಮಗೆ ಮುಖ್ಯ ಎಂದು ತಿಳಿಸಿದೆ. ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಹೊಸ ಎಲ್ಪಿಜಿ ಪಾಲುದಾರ ರಾಷ್ಟ್ರಗಳಿಗಾಗಿ ಭಾರತ ಹುಡುಕಾಟ ನಡೆಸುತ್ತಿದೆ. ಅಲ್ಜೀರಿಯಾ, ಆಸ್ಟ್ರೇಲಿಯಾ, ಕೆನಡಾ ಮತ್ತು ನಾರ್ವೆಯಂತಹ ದೇಶಗಳು ಭಾರತಕ್ಕೆ ಎಲ್ಪಿಜಿ ಮಾರಾಟ ಮಾಡಲು ಮುಂದೆ ಬಂದಿವೆ ಎಂದು ಹೇಳಿದೆ.
ಪೆಟ್ರೋಲ್ ಬಂಕ್ಗಳಲ್ಲಿ ಇಂಧನದ ಕೊರತೆಯಿಲ್ಲ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸದ್ಯಕ್ಕೆ ಸ್ಥಿರವಾಗಿರಲಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 130 ಡಾಲರ್ ದಾಟದ ಹೊರತು ದೇಶೀಯ ಬೆಲೆಯಲ್ಲಿ ವ್ಯತ್ಯಯವಾಗದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 100 ಡಾಲರ್ ಆಸುಪಾಸಿನಲ್ಲಿದೆ. ದೇಶದ ಯಾವುದೇ ಪೆಟ್ರೋಲ್ ಬಂಕ್ಗಳಲ್ಲಿ ಇಂಧನದ ಕೊರತೆಯಿಲ್ಲ ಮತ್ತು ಪೂರೈಕೆ ಸುಗಮವಾಗಿದೆ ಎಂದು ಸರ್ಕಾರ ಭರವಸೆ ನೀಡಿದೆ. ಮಧ್ಯಪ್ರಾಚ್ಯದ ಪ್ರಮುಖ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತವು ಈಗಾಗಲೇ ಇತರ ಮಾರ್ಗಗಳಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನಯಾನ ಇಂಧನ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ಭಾರತವು ಎಟಿಎಫ್ ರಫ್ತು ಮಾಡುವ ದೇಶವಾಗಿರುವುದರಿಂದ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಂತರರಾಷ್ಟ್ರೀಯ ಸಂಘರ್ಷಗಳ ಹಿನ್ನೆಲೆಯಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಭಾರತವು ‘ಹಾರ್ಮುಜ್ ಜಲಸಂಧಿ’ಯನ್ನು ಹೊರತುಪಡಿಸಿ ಪರ್ಯಾಯ ಮಾರ್ಗಗಳ ಮೂಲಕ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಚುರುಕುಗೊಳಿಸಿದೆ. ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೂ ಭಾರತವು ಇತರ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಹಲವು ದೇಶಗಳು ಕೂಡ ಭಾರತದ ಇಂಧನ ಸಂಗ್ರಹ ಮತ್ತು ಸರಬರಾಜು ವ್ಯವಸ್ಥೆ ಬಗ್ಗೆ ಮಾಹಿತಿ ಕೇಳುತ್ತಿರುವುದಾಗಿ ವರದಿಯಾಗಿದೆ. ಇತ್ತೀಚೆಗೆ ಎಲ್ಪಿಜಿ ದರಗಳು ಭಾರೀ ಏರಿಕೆ ಕಂಡಿರುವುದು ದೇಶದಾದ್ಯಂತ ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಿಸಿದೆ.
-

LPG ಪೂರೈಕೆ ವ್ಯತ್ಯಯ: ಬೆಂಗಳೂರಿನ ಪಿಜಿಗಳಲ್ಲೂ ಆಹಾರ ಪೂರೈಕೆ ಸ್ಥಗಿತದ ಭೀತಿ, ಆತಂಕದಲ್ಲಿ 10 ಲಕ್ಷ ಮಂದಿ
-

ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ
-

ಇಸ್ರೇಲ್-ಯುಎಸ್ ಜಂಟಿ ದಾಳಿ ಅಬ್ಬರ: ಇರಾನ್ಗೆ ಉತ್ತರಾಧಿಕಾರಿ ನೇಮಕ, ಇಂದಿನ ಪ್ರಮುಖಾಂಶಗಳು ಇಲ್ಲಿವೆ
-

Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ
-

Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು
-

ಇರಾನ್ ನಾಯಕರೊಂದಿಗೆ ಸಂಪರ್ಕಕ್ಕೆ ಯತ್ನ: ಭಾರತದ ಈ ಕ್ರಮಕ್ಕೆ ಇರಾನ್ ಧನ್ಯವಾದ ಹೇಳಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್
-

Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?
-

ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ
-

ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್
-

Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್
-

Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು
-

Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ
-

“ಬೆಂಗಳೂರು ಮಲಯಾಳಿಗರ ಹಬ್” ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು
-

Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್
-

Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ
Disclaimer: This content was automatically imported from a third-party source via RSS feed. The original source is: https://kannada.oneindia.com/news/india/lpg-cylinder-booking-rule-changed-waiting-period-increased-to-25-days-by-government-of-india-446543.html. xn--babytilbehr-pgb.com does not claim ownership of this content. All rights remain with the original publisher.
