Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ | Baap Ka Maal Bhej Raha Hai Kya: Prakash Raj Reacts Report on Cabinet Rule Change and lpg price Hike

India

oi-Hitesh Y

Prakash Raj: ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಕ್ಕೆ ಅಧಿಕೃತ ಭೇಟಿ ನೀಡುವ ಸಂದರ್ಭದಲ್ಲಿ ಅಥವಾ ವಿದೇಶಿ ರಾಷ್ಟ್ರದ ಮುಖ್ಯಸ್ಥರು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸಹಿ ಹಾಕುವ ಕೆಲವು ನಿರ್ದಿಷ್ಟ ಅಂತರರಾಷ್ಟ್ರೀಯ ದಾಖಲೆಗಳಿಗೆ ಇನ್ನು ಮುಂದೆ ಸಚಿವ ಸಂಪುಟದ ಪೂರ್ವ ಅನುಮೋದನೆ ಅಗತ್ಯವಿಲ್ಲ ಎಂದು ಟ್ರಿಬ್ಯೂನ್ ವರದಿ ಮಾಡಿದೆ. ಈ ವಿಚಾರವು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದ್ದು. ಇದನ್ನು ನಟ ಪ್ರಕಾಶ್ ರಾಜ್ ಅವರು ಸಹ ಪ್ರಶ್ನೆ ಮಾಡಿದ್ದಾರೆ. ಈ ಸುದ್ದಿಯನ್ನು ಹಂಚಿಕೊಂಡಿರುವ ನಟ ಪ್ರಕಾಶ್ ರಾಜ್ ಅವರು, Baap Ka Maal Bhej raha hai kya ?? What Nonsense is this ಎಂದು ಪ್ರಶ್ನೆ ಮಾಡಿದ್ದಾರೆ.

ಮಹತ್ವದ ಒಪ್ಪಂದಗಳನ್ನು ಬಹಿರಂಗಪಡಿಸುವ ಅವಶ್ಯಕತೆ ಇಲ್ಲ ಎನ್ನುವ ಸುದ್ದಿಯನ್ನು ಹಂಚಿಕೊಂಡಿರುವ ನಟ ಪ್ರಕಾಶ್ ರಾಜ್ ಅವರು, ಅಪ್ಪನ ಮನೆ ಆಸ್ತಿ ಮಾರಾಟ ಮಾಡುತ್ತಿದ್ದಾರೆಯೇ ಏನಿದು ಮೂರ್ಖತನ ಎಂದು ಕೇಳಿದ್ದಾರೆ. ಇನ್ನು ಸಂಪುಟ ಸಚಿವಾಲಯವು ಭಾರತ ಸರ್ಕಾರ (ವ್ಯವಹಾರ ವಹಿವಾಟು) ನಿಯಮಗಳು, 1961 ರ ಅಡಿಯಲ್ಲಿ ಎಲ್ಲಾ ಕೇಂದ್ರ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಸೂಚನೆಗಳನ್ನು ನೀಡಲಾಗುತ್ತದೆ. ಇದು ಪೂರ್ವ ಅನುಮೋದನೆ, ವಾಸ್ತವಿಕ ಅನುಮೋದನೆ ಅಥವಾ ಮಾಹಿತಿಗಾಗಿ ಯಾವ ವಿಷಯಗಳನ್ನು ಸಂಪುಟದ ಮುಂದೆ ತರಬೇಕು ಎಂಬುದನ್ನು ನಿರ್ದಿಷ್ಟವಾಗಿ ಮೊದಲೇ ನಿರ್ಧರಿಸಲಾಗಿರುತ್ತದೆ. ಇದೀಗ ಈ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.

Prakash Raj

ಅಂತರರಾಷ್ಟ್ರೀಯ ದಾಖಲೆಗಳಲ್ಲಿ ಒಪ್ಪಂದಗಳು, ಸಮಾವೇಶಗಳು, ಪ್ರೋಟೋಕಾಲ್‌ಗಳು, ತಿಳವಳಿಕೆಯ ಜ್ಞಾಪಕ ಪತ್ರಗಳು (MoUಗಳು), ಜಂಟಿ ಉದ್ದೇಶದ ಘೋಷಣೆಗಳು, ಉದ್ದೇಶದ ಹೇಳಿಕೆಗಳು, ಸಹಕಾರದ ಜ್ಞಾಪಕ ಪತ್ರಗಳು ಮತ್ತು ವಿದೇಶಗಳೊಂದಿಗೆ ಮಾಡಿಕೊಂಡ ಪತ್ರಗಳು ಸೇರಿವೆ ಎಂದು ಹೇಳಲಾಗಿದೆ.

ನಟ ಪ್ರಕಾಶ್‌ರಾಜ್ ಸರಣಿ ಟ್ವೀಟ್

ಇನ್ನು ನಟ ಪ್ರಕಾಶ್ ರಾಜ್ ಅವರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿದ್ದಾರೆ. ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದ ಭಾರೀ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಿಯ ನಾಗರಿಕರೇ, ನಾವು ನೋಡುವಂತೆ ಮನೆಗಳು.. ಹೋಟೆಲ್‌ಗಳು ಮತ್ತು ಸ್ಮಶಾನಗಳು ಮೇಲೂ ಸಹ ಪರಿಣಾಮ ಬೀರಿವೆ. ಗೋಭಿ ಭಕ್ತರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನೋಡೋಣ #justasking ಎಂದು ಹೇಳಿದ್ದಾರೆ.

ಈಗಿನ ರಾಜಿ ಸನ್ನಿವೇಶದಲ್ಲಿ.. ಯಾವುದು ಚೆನ್ನಾಗಿ ಕೇಳಿಸುತ್ತದೆ. ವಿಶ್ವಗುರು ಅಥವಾ ವಿಶ್ವಗುಲಮಾ ದಯವಿಟ್ಟು ಹೇಳಿ. #justasking ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ನೆಟ್ಟಿಗರು ಹೇಳಿದ್ದೇನು ?

ಇನ್ನು ಈ ಬೆಳವಣಿಗೆಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ . ನಮ್ಮ ರಫ್ತುದಾರರೊಂದಿಗೆ ನಿರಂತರ ಯುದ್ಧ ನಡೆಯುತ್ತಿರುವಾಗ ಬೆಲೆಗಳು ಹೇಗೆ ಕಡಿಮೆಯಾಗುತ್ತವೆ ಎಂದು ನೀವು ನಿರೀಕ್ಷಿಸುತ್ತೀರಿ ಎಂದು ನೆಟ್ಟಿಗರೊಬ್ಬರು ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇರಾನ್ – ಇಸ್ರೇಲ್ ಯುದ್ಧದಿಂದಾಗಿ ಜಗತ್ತಿನಲ್ಲಿ (ಯುರೋಪ್, ರಷ್ಯಾ, ಚೀನಾ ಇತ್ಯಾದಿ) ಎಲ್‌ಪಿಜಿ ಮತ್ತು ತೈಲದ ಕೊರತೆಯಿದೆ. ಭಾರತ ಚಂದ್ರನ ಮೇಲೆ ಇಲ್ಲ, ಆದ್ದರಿಂದ ಅದು ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವ ಕಾಮೆಂಟ್‌ಗಳು ಬಂದಿವೆ.

ಕುರುಡು ನಂಬಿಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ನೋಡೋಣವೇ, ಅವರಿಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಈ ರೀತಿಯ ಕಾಮೆಂಟ್ ಮಾಡುತ್ತಿರುವವರಿಗೆ ನೆಟ್ಟಿಗರೊಬ್ಬರು ಹೇಳಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/baap-ka-maal-bhej-raha-hai-kya-prakash-raj-reacts-report-on-cabinet-rule-change-and-lpg-price-hike-446553.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo