ಡಾ. ಪುನೀತ್ ರಾಜ್‌ಕುಮಾರ್ ಗೌರವಾರ್ಥ ‘ಅಪ್ಪು ಉತ್ಸವ’: ಮಾರ್ಚ್ 15ಕ್ಕೆ ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ | Appu Utsava 2026 in Bengaluru: Cultural Sinchana Event in Memory of Puneeth Rajkumar on March 15

Entertainment

oi-Shiddalingesh S

ಬೆಂಗಳೂರು: ನಿಮ್ಮ ವಾಹಿನಿ ಕಲಾ ವೇದಿಕೆ(ರಿ) ಮಂಗಳವಾರ ಮಾರ್ಚ್‌ 10ರಂದು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ “ಅಪ್ಪು ಉತ್ಸವ” ಮತ್ತು 21ನೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ನೀಡಿದೆ. ದಂತಕಥೆ ದಿವಂಗತ ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಹೃತ್ಫೂರ್ವಕ ಗೌರವವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ಕಲೆ ಮತ್ತು ಸಮುದಾಯ ಗುರುತಿಸುವಿಕೆಯ ಮೂಲಕ ಅವರ ನಿರಂತರ ಪರಂಪರೆಯನ್ನು ಆಚರಿಸುವ ಗುರಿಯನ್ನು ಹೊಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಘಟಕರು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಾರಿ ಉತ್ಸವಕ್ಕೆ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ನೆನಪಿರಲಿ ಪ್ರೇಮ ಅವರು ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಪ್ರೇಮ ಪೋಸ್ಟರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಅಪ್ಪು ಸರ್ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಭಾಗವಾಲು ನನಗೆ ಹೆಮ್ಮೆ ಎನಿಸುತ್ತಿದೆ. ಸಾಂಪ್ರದಾಯಿಕ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಭರತನಾಟ್ಯ ಕಲಾವಿದರನ್ನು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಈ ವೇದಿಕೆಯಲ್ಲಿ ಗೌರವಿಸುತ್ತಿರುವುದು ಶ್ಲಾಘನೀಯ” ಎಂದು ಸಂತಸ ವ್ಯಕ್ತಪಡಿಸಿದರು.

Appu Utsava 2026

ಕಾರ್ಯಕ್ರಮದ ವಿವರಗಳು:

ಮಂಬರುವ ಭಾನುವಾರ ಮಾರ್ಚ್ 15, 2026 ರಂದು ಬೆಂಗಳೂರಿನ ರಾಮಮೂರ್ತಿ ನಗರದ ನಾಟ್ಯ ಪ್ರಿಯಾ ಸಭಾಂಗಣದಲ್ಲಿ ಈ ಸಾಂಸ್ಕೃತಿಕ ಹಬ್ಬ ಜರುಗಲಿದೆ.

ಗಣ್ಯರು ಭಾಗಿ

ಅಧ್ಯಕ್ಷತೆ: ಖ್ಯಾತ ನಟ ಮತ್ತು ನಿರ್ಮಾಪಕರಾದ ಗಂಡಸಿ ಸದಾನಂದ ಸ್ವಾಮಿ ಅವರು ಕಾರ್ಯಕ್ರದ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳು: ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಸೇರಿದಂತೆ ಚಲನಚಿತ್ರ ಮತ್ತು ಕಾನೂನು ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

ಸಂಘಟನೆ: ವೇದಿಕೆಯ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಕೆ.ವಿ. ಅವರು ಕಾರ್ಯಕ್ರಮದ ಸಂಪೂರ್ಣ ಸಿದ್ದತೆಗಳ ಜವಾಬ್ದಾರಿಯನ್ನು ವಹಿಸಿಕೊಂಡದ್ದಾರೆ. ಈ ಉತ್ಸವವು ಕೇವಲ ಒಂದು ಸಮಾರಂಭವಲ್ಲ ಇದು ನಮ್ಮ ನಿಮ್ಮೆಲರ ನೆಚ್ಚಿನ ಅಪ್ಪು ಅವರ ಕಲಾ ಬದುಕಿಗೆ ಹಾಗೂ ಕರ್ನಾಟಕದ ಸಾಂಸ್ಕೃತಿಕ ಶ್ರಿಮಂತಿಕೆಗೆ ಸಲ್ಲಿಸುವ ನಮನ. ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ಸಂಘಟನಾ ಸಮಿತಿಯ ಕಿಶೋರ್ ಕುಮಾರ್ ಕೆ.ವಿ. ತಿಳಿಸಿದರು.

ಸ್ಥಳ: ನಾಟ್ಯ ಪ್ರಿಯಾ ಸಭಾಂಗಣ, ರಾಮಮೂರ್ತಿ ನಗರ.

ದಿನಾಂಕ: ಮಾರ್ಚ್ 15, 2026.

ವಿಶೇಷತೆ: ಭರತನಾಟ್ಯ ಕಲಾವಿದರಿಗೆ ಗೌರವ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ.

ಚಲನಚಿತ್ರ ರಂಗ, ಸಾಂಸ್ಕೃತಿಕ ಲೋಕ ಮತ್ತು ಸಾಮಾಜಿಕ ಕ್ಷೇತ್ರದ ಗಣ್ಯರನ್ನು ಒಂದೇ ವೇದಿಕೆಯಲ್ಲಿ ತರುತ್ತಿರುವ ಈ ‘ಸಾಂಸ್ಕೃತಿಕ ಸಿಂಚನ’ವು ನಗರದ ಕಲಾಪ್ರೇಮಿಗಳಿಗೆ ರಸದೌತಣ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/appu-utsava-2026-in-bengaluru-cultural-sinchana-event-in-memory-of-puneeth-rajkumar-on-march-15-446557.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo