Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು | Sayali Surve Miss India Earth Winner Returns to Hinduism After Alleged Harassment Who is Sayali Surve

India

oi-Hitesh Y

Sayali Surve: ಮಿಸ್ ಇಂಡಿಯಾ ಅರ್ಥ್ 2019 ವಿಜೇತೆ ಸಯಾಲಿ ಸುರ್ವೆ ಅವರು ತಮ್ಮ ವೈಯಕ್ತಿಕ ಜೀವನದ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದು, ಈ ವಿಷಯವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಉದ್ಯಮಿ ಆತಿಫ್ ತಾಸೆ ಅವರೊಂದಿಗೆ ವಿವಾಹವಾದ ನಂತರ ತಮ್ಮ ಮೇಲೆ ನಿರಂತರವಾಗಿ ಕಿರುಕುಳ ನಡೆದಿತ್ತು ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆ ಅವರು ಮತ್ತೆ ಹಿಂದೂ ಧರ್ಮಕ್ಕೆ ಮರಳಿರುವುದಾಗಿಯೂ ತಮ್ಮ ಹೆಸರನ್ನು ಆದ್ಯಾ ಸರ್ವೆ ಎಂದು ಬದಲಿಸಿಕೊಂಡಿರುವುದಾಗಿಯೂ ಹೇಳಿದ್ದಾರೆ. ಪಿಂಪ್ರಿ-ಚಿಂಚ್ವಾಡ್‌ನಲ್ಲಿ ನಡೆದ ಶುದ್ಧೀಕರಣ ವಿಧಿಯ ನಂತರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

2019ರ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ ಅವರು ಇಸ್ಲಾಂ ಧರ್ಮದಿಂದ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರವಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಆಗಿರುವ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಉದ್ಯಮಿ ಆತಿಫ್ ತಾಸೆ ಅವರೊಂದಿಗಿನ ವಿವಾಹದ ಸಮಯದಲ್ಲಿ ಕಿರುಕುಳವಾಗಿದ್ದರಿಂದ ಅವರು ಹಿಂದೂ ಧರ್ಮಕ್ಕೆ ಮರಳಿರುವುದಾಗಿ ಹೇಳಿಕೊಂಡಿದ್ದಾರೆ. ಹಿಂದೂ ಶುದ್ಧೀಕರಣದ ನಂತರ ಅವರು ತಮ್ಮ ಹೆಸರನ್ನು ಆದ್ಯ ಸುರ್ವೆ ಎಂದು ಬದಲಾಯಿಸಿಕೊಂಡಿದ್ದಾರೆ.

Sayali Surve

Sayali Surve: ಯಾರು ಈ ಸಯಾಲಿ ಸುರ್ವೆ

ಮುಂಬೈನಲ್ಲಿ ಜನಿಸಿ ಪುಣೆಯಲ್ಲಿ ಬೆಳೆದ ಸಯಾಲಿ ಸರ್ವೆ ಏವಿಯೇಷನ್‌ನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದಾರೆ. 2019ರಲ್ಲಿ ಮೀರಾ-ಭಯಂದರ್ ಮೂಲದ ಉದ್ಯಮಿ ಆತಿಫ್ ತಾಸೆ ಅವರನ್ನು ಕುಟುಂಬದ ವಿರೋಧದ ನಡುವೆಯೂ ಇವರು ಮದುವೆಯಾಗಿದ್ದರು. ಉದ್ಯಮಿಯನ್ನು ಮದುವೆಯ ನಂತರ ಅವರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಅಲ್ಲದೆ ತಮ್ಮ ಹೆಸರನ್ನು ಅತೇಜಾ ತಾಸೆ ಎಂದು ಬದಲಿಸಿಕೊಂಡಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಮಾನಸಿಕ ಮತ್ತು ಭಾವನಾತ್ಮಕ ಕಿರುಕುಳವನ್ನು ಪತಿ ನೀಡುತ್ತಿದ್ದರು. ಹಲವು ಬಾರಿ ಪೊಲೀಸ್ ಸಹಾಯ ಕೇಳಿದರೂ ಸಮರ್ಪಕ ಸಹಾಯ ಸಿಗಲಿಲ್ಲ ಎಂದೂ ಅವರು ಇದೇ ಸಂದರ್ಭದಲ್ಲಿ ದೂರಿದ್ದಾರೆ.

ಪರಿಸ್ಥಿತಿ ಹೆಚ್ಚು ವಿಷಮವಾಗುತ್ತಿದ್ದಂತೆಯೇ ಏಕಾಂಗಿತನ ಅನುಭವಿಸಿದೆ. ನಂತರ ಕೆಲವು ಹಿಂದೂ ಸಂಘಟನೆಗಳ ಸಹಾಯದಿಂದ ಮತ್ತೆ ತಮ್ಮ ಮೂಲ ಧರ್ಮಕ್ಕೆ ಮರಳಲು ನಿರ್ಧರಿಸಿದೆ. ಪಿಂಪ್ರಿ-ಚಿಂಚ್ವಾಡ್‌ನಲ್ಲಿ ಹವನ ಮತ್ತು ಮಂತ್ರೋಚ್ಚಾರಣೆಯೊಂದಿಗೆ ವಿಧಿ ವಿಧಾನಗಳನ್ನು ನೆರವೇರಿಸಿ ಹಿಂದೂ ಧರ್ಮಕ್ಕೆ ಮರಳಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಮೌನವಾಗಿರಬೇಡಿ ಎಂದು ಸಲಹೆ ನೀಡಿದ ಸಯಾಲಿ ಸುರ್ವೆ

ಮಹಿಳೆಯರು ಈ ರೀತಿಯ ಕಿರುಕುಳಗಳ ಎದುರಾದರೆ ಸುಮ್ಮನೆ ಇರಬೇಡಿ ಎಂದು ಸಯಾಲಿ ಅವರು ಸಲಹೆ ನೀಡಿದ್ದಾರೆ. ಇಂತಹ ಕಿರುಕುಳ ಅನುಭವಿಸುತ್ತಿರುವವರು ಮೌನವಾಗಿ ಸಹಿಸಿಕೊಳ್ಳಬೇಡಿ. ದೇವರು ನಮಗೆ ಇಂತಹ ಜೀವನಕ್ಕಾಗಿ ಜನ್ಮ ನೀಡಿಲ್ಲ. ನಾನು ನನ್ನ ನಾಲ್ಕು ಮಕ್ಕಳಿಗಾಗಿ ಹಲವು ವರ್ಷ ಸಹಿಸಿಕೊಂಡಿದ್ದೆ. ಆದರೆ ಒಂದು ಹಂತದ ನಂತರ ಮಕ್ಕಳ ಭವಿಷ್ಯಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದೂ ಅವರು ಹೇಳಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/sayali-surve-miss-india-earth-winner-returns-to-hinduism-after-alleged-harassment-who-is-sayali-surv-446707.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo