
International
oi-Shankrappa Parangi
ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಜಂಟಿಯಾಗಿ ನಡೆಸುತ್ತಿರುವ ದಾಳಿಗಳು, ಅದಕ್ಕೆ ಇರಾನಿನ ಪ್ರತಿದಾಳಿಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿವೆ. ಥಾಯ್ಲೆಂಡ್ ಹಡಗಿನ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಒಟ್ಟು ತೈಲ ಸರಬರಾಜಿನ ಪೈಕಿ ಶೇ. 20ರಷ್ಟನ್ನು ಹಾರ್ಮುಜ್ ಜಲಸಂಧಿಯಲ್ಲಿ ಮೂಲಕ ಸಾಗಿಸಲಾಗುತ್ತಿದೆ. ಈ ಮಾರ್ಗ ನಿರ್ಬಂಧಿಸಿದ ಮತ್ತು ಯುಎಸ್ ಮಾತು ಕೇಳದ ಇರಾನ್ ಮೇಲೆ ನಿರಂತರ ವೈಮಾನಿಕ ದಾಳಿ ಮುಂದುವರಿದಿದೆ. ಈ ಕೊಲ್ಲಿಯ ನೀರಿನಾಳದ ಬಾಂಬ್ ಅಳವಡಿಸಿದ್ದರ ಬಗ್ಗೆ ವರದಿ ಆಗಿದೆ. ಮಾರ್ಚ್ 11ರ ದಾಳಿಯಲ್ಲಿ ಇರಾನ್ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ. ಇಂದಿನ ಯುದ್ಧದ ಪ್ರಮುಖಾಂಶಗಳು ಇಲ್ಲಿವೆ.
ಯುದ್ಧದ ಇಂದಿನ ಪ್ರಮುಖಾಂಶಗಳು ಹೀಗಿವೆ
* ಥಾಯ್ಲೆಂಡ್ ಧ್ವಜ ಹೊತ್ತ ಬೃಹತ್ ಥಾಯ್ ಸರಕು ಸಾಗಣೆ ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ಸ್ಪೋಟಕಗಳಿಂದ ಡಿಕ್ಕಿ ಹೊಡೆಸಲಾಗಿದೆ. ಈ ದಾಳಿಯಿಂದ ಎಂಜಿನ್ ಕೋಣೆಯಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಡಿದೆ. ಈ ಘಟನೆಯಿಂದ ಯುಎಸ್ ಕೆರಳಿ ಕೆಂಡವಾಗಿದೆ. ಕೂಡಲೇ ದಾಳಿಗೆ ಒಳಗಾದ ನೌಕೆ ಸಿಬ್ಬಂದಿಯನ್ನು ಸ್ಥಳಾಂತರಿಸಲಾಯಿತು. ಒಮಾನಿ ನೌಕಾಪಡೆಯು 20 ನಾವಿಕರನ್ನು ರಕ್ಷಿಸಿದ್ದು, ಮೂವರು ಕಾಣೆಯಾಗಿದ್ದಾರೆ.

* ಹಾರ್ಮುಜ್ ಜಲಸಂಧಿಯಲ್ಲಿ ಜಾಗತಿಕ ತೈಲ ರಫ್ತುಗಳನ್ನು ನಿರ್ಬಂಧಿಸಲು ಇರಾನ್ ಗಣಿ ಹಡಗುಗಳನ್ನು ನಿಯೋಜಿಸಲು ಪ್ರಾರಂಭಿಸಿದೆ. ಯುಎಸ್ ಮಿಲಿಟರಿ ಪಡೆ ದಾಳಿ ನಡೆಸಿ ಇರಾನಿನ 16 ಹಡಗುಗಳನ್ನು ಧ್ವಂಸ ಮಾಡಿದೆ. ಈ ಹಡಗಿನಲ್ಲಿ ಸಾಕಷ್ಟು ತೈಲವಿತ್ತು ಎಂದು ವರದಿ ಅಗಿದೆ. ಇಂತಹ ಘಟನೆ, ದಾಳಿಗಳು ಹೆಚ್ಚಾದರೆ ತೈಲ ಅಭಾವ ಮತ್ತಷ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ.
* “ಆಪರೇಷನ್ ಎಪಿಕ್ ಫ್ಯೂರಿ” ಹೆಸರಿನಲ್ಲಿ ಆರಂಭವಾದ ದಾಳಿ ಬಳಿಕ ಇರಾನ್ ದೇಶದಲ್ಲಿ ಸುಮಾರು 5,500 ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ಮಾಡಿದ್ದೇವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ದೃಢಪಡಿಸಿದೆ. ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ಉತ್ಪಾದನೆ ಮತ್ತು ವಿದ್ಯುತ್ ಪ್ರಕ್ಷೇಪಣ ಸಾಮರ್ಥ್ಯಗಳನ್ನು ಕೆಡವಲು ಮಂಗಳವಾರದಿಂದ (ಮಾ.10) ಯುಎಸ್ ದಾಳಿ ನಡೆಸುತ್ತಿದೆ.
* ಯುಎಸ್-ಇಸ್ರೇಲ್ ದಾಳಿಗೆ ಬಗ್ಗ ಇರಾನ್ ದೇಶವು ನೆರೆಯ ರಾಷ್ಟ್ರಗಳ ವಿರುದ್ಧ ಪ್ರತೀಕಾರವಾಗಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರಿಸಿದೆ. ಪ್ರಿನ್ಸ್ ಸುಲ್ತಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಸೌದಿ ಅರೇಬಿಯಾ ಏಳು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಒಂಬತ್ತು ಡ್ರೋನ್ಗಳನ್ನು ತಡೆದರೆ, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಎರಡು ಡ್ರೋನ್ಗಳಿಂದ ದಾಳಿ ನಡೆಸಿದೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.
* ಇರಾನ್ ಇಸ್ರೇಲ್ ಯುದ್ಧ ಬಳಿಕ, ಪ್ರತೀಕಾರವೆಂಬಂತೆ ಇರಾನ್ ಹಾರ್ಮುಜ್ ಜಲಸಂಧಿಯ ತೈಲ ಮಾರ್ಗವನ್ನು ಬಂದ್ ಮಾಡಿತು. ಯಾವುದೇ ಹಡಗು ಈ ಮಾರ್ಗವಾಗಿ ಸಾಗಿದರೂ ದಾಳಿ ಮಾಡುವ ಎಚ್ಚರಿಕೆ ಕೊಟ್ಟಿತ್ತು. ಕೊಲ್ಲಿ ಮೇಲಿನ ನಿರ್ಬಂಧ ಮುಂದುವರಿದ ಬೆನ್ನಲ್ಲೆ ‘ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ)’ ಏರುತ್ತಿರುವ ಜಾಗತಿಕ ಬೆಲೆಗಳನ್ನು ಸ್ಥಿರಗೊಳಿಸಲು ನಿಕ್ಷೇಪಗಳಿಂದ 40 ಕೋಟಿ ಬ್ಯಾರೆಲ್ ಕಚ್ಚಾ ತೈಲವನ್ನು ದಾಖಲೆಯ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಒಪ್ಪಿದೆ.
* ಆಯತೊಲ್ಲಾ ಅಲಿ ಖಮೇನಿ ನಿಧನ ಬಳಿಕ ಇರಾನ್ನ ಹೊಸದಾಗಿ ನೇಮಕಗೊಂಡ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಬುಧವಾರ (ಮಾ.11) ರಂದು ನಡೆದ ವೈಮಾನಿಕ ದಾಳಿಗಳಲ್ಲಿ ಗಾಯಗೊಂಡಿದ್ದಾರೆ. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಅವರು ಸದೃಢವಾಗಿದ್ದಾರೆ ಯಾವುದೇ ತೊಂದರೆ ಇಲ್ಲ ಎಂದು ಇರಾನ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
* ಇರಾನ್ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಆರ್ಥಿಕ ಕೇಂದ್ರಗಳು, ಪ್ರಾದೇಶಿಕ ಬ್ಯಾಂಕ್ಗಳು ಮತ್ತು ಪ್ರಮುಖ ಮೈಕ್ರೋಸಾಫ್ಟ್, ಗೂಗಲ್ ಸೇರಿ ಇನ್ನಿತರ ಯುಎಸ್ ತಂತ್ರಜ್ಞಾನ ಸಂಸ್ಥೆಗಳನ್ನು ಗುರಿ ಮಾಡಿಕೊಂಡು ದಾಳಿ ಎಚ್ಚರಿಕೆ ನೀಡಿದೆ. ಇಲ್ಲಿರುವ ಯುಎಸ್ ಅಥವಾ ಇಸ್ರೇಲ್ಗೆ ಸೇರಿದ ಸಿಬ್ಬಂದಿ, ನಾಗರಿಕರು ಹಣಕಾಸು ಸಂಸ್ಥೆಗಳಿಂದ ಕನಿಷ್ಠ 1,000 ಮೀಟರ್ ದೂರದಲ್ಲಿರುವಂತೆ ಸೂಚಿಸಿದೆ. ಇಂದು ಬುಧವಾರ ರಾತ್ರಿ ಈ ಪ್ರದೇಶಗಳ ಮೇಲೆ ದಾಳೆ ನಡೆಯುವ ಸಾಧ್ಯತೆ ಇದೆ.
-

ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ
-

Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ
-

War Updates: ಇರಾನ್ಗೆ ಟ್ರಂಪ್ ವಾರ್ನಿಂಗ್: ತೈಲ ಮಾರ್ಗ ಬಂದ್ ಮಾಡಿದರೆ ದೇಶವೇ ಸರ್ವನಾಶ, ಇಂದಿನ ಪ್ರಮುಖಾಂಶಗಳು
-

ಇಸ್ರೇಲ್-ಯುಎಸ್ ಜಂಟಿ ದಾಳಿ ಅಬ್ಬರ: ಇರಾನ್ಗೆ ಉತ್ತರಾಧಿಕಾರಿ ನೇಮಕ, ಇಂದಿನ ಪ್ರಮುಖಾಂಶಗಳು ಇಲ್ಲಿವೆ
-

Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ – ಡೀಸೆಲ್ ಬೆಲೆ 20 – 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ
-

LPG Gas: ದೇಶದಲ್ಲಿ’ಅಡುಗೆ ಅನಿಲ ತುರ್ತು ಪರಿಸ್ಥಿತಿ’ ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ
-

Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?
-

Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು
-

ಇರಾನ್ ನಾಯಕರೊಂದಿಗೆ ಸಂಪರ್ಕಕ್ಕೆ ಯತ್ನ: ಭಾರತದ ಈ ಕ್ರಮಕ್ಕೆ ಇರಾನ್ ಧನ್ಯವಾದ ಹೇಳಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್
-

LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ
-

ಮಧ್ಯಪ್ರಾಚ್ಯ ಯುದ್ಧ: ಗ್ಯಾಸ್ ಸಿಲಿಂಡರ್, ಪೆಟ್ರೋಲ್ – ಡಿಸೇಲ್ ಸೇರಿದಂತೆ ಪ್ರಮುಖ ವಸ್ತುಗಳ ಬಗ್ಗೆ ಕೇಂದ್ರದಿಂದ ಮಹತ್ವದ ಆದೇಶ
-

ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್
-

Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ
-

Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ
-

Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ
Disclaimer: This content was automatically imported from a third-party source via RSS feed. The original source is: https://kannada.oneindia.com/news/international/iran-supreme-leader-injured-in-us-israel-strikes-400m-barrels-of-oil-released-amid-global-crisis-446757.html. xn--babytilbehr-pgb.com does not claim ownership of this content. All rights remain with the original publisher.
