Ganga Expressway: ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ಹೆದ್ದಾರಿ ಯೋಜನೆಯಿಂದ ಪ್ರಾದೇಶಿಕ ಅಭಿವೃದ್ಧಿಗೆ ಹೊಸ ವೇಗ | Ganga Expressway: Driving Growth In Uttar Pradesh With The India’s Largest Greenfield Project

Business

-Malathesha M

ಭಾರತದ ಮಹತ್ವಾಕಾಂಕ್ಷಿ ಮೂಲಸೌಕರ್ಯ ಯೋಜನೆ ಪೈಕಿ ಒಂದಾದ ಗಂಗಾ ಎಕ್ಸ್‌ಪ್ರೆಸ್‌ವೇ, ದೇಶದ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಿದೆ. ವಿಶ್ವದ ಅತ್ಯಂತ ಸಸ್ಯಶ್ಯಾಮಲ ಹಾಗೂ ಜನಸಾಂದ್ರತೆ ಹೆಚ್ಚಿರುವ ಪ್ರದೇಶಕ್ಕೆ ಜೀವನಾಡಿ ಆಗಿರುವ ಗಂಗಾ ನದಿ ಹೆಸರನ್ನು ಹೆದ್ದಾರಿಗೆ ನಾಮಕರಣ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಿಸಿ ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಇದರ ಜೊತೆಗೆ ಉದ್ಯಮಗಳ ಅಭಿವೃದ್ಧಿ ಮತ್ತು ಸರಕು ಸಾಗಣೆ ಜೊತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಹೆದ್ದಾರಿ ಪ್ರಮುಖ ಬೆಂಬಲ ನೀಡಲಿದೆ.

ಬರೋಬ್ಬರಿ 594 ಕಿಲೋ ಮೀಟರ್ ಉದ್ದದ ಮಹತ್ವಾಕಾಂಕ್ಷಿ ಯೋಜನೆಯು, ಮೀರತ್ ಮೂಲಕ ಸಾಗಿ ಪ್ರಯಾಗರಾಜ್‌ ತನಕ ಸಂಪರ್ಕ ಬೆಸೆಯಲಿದೆ. ಈ ಮೂಲಕ ಬರೋಬ್ಬರಿ 594 ಕಿ.ಮೀ. ಉದ್ದದ ಮಾರ್ಗ ಕೋಟಿ ಕೋಟಿ ಜನರಿಗೆ ನೆರವಾಗಲಿದೆ. ಉತ್ತರ ಪ್ರದೇಶದ 12 ಜಿಲ್ಲೆಗಳು & 519 ಗ್ರಾಮ ಸಂಪರ್ಕಕ್ಕೂ ಇದು ಕೊಂಡಿಯಾಗಲಿದೆ. ಈ ಯೋಜನೆಯಿಂದ ಸುಮಾರು 8 ಕೋಟಿ ಜನರಿಗೆ ನೇರ ಪ್ರಯೋಜನ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿಯೇ ಸುಮಾರು 36,000 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚ ಮಾಡಲಾಗುತ್ತಿದ್ದು, ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಆಗಿ ಹೊರಹೊಮ್ಮಲಿದೆ. ಇದೇ ವೇಳೆ ಇದು ದೇಶದ ಅತಿದೊಡ್ಡ ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್ (BOT) ಮಾದರಿ ರಸ್ತೆ ಯೋಜನೆ ಆಗಿದ್ದು, ಒಟ್ಟು 30 ವರ್ಷದ ಕಾನ್ಸೆಷನ್ ಅವಧಿಯಲ್ಲಿ ಸಂಚಾರದ ಅಪಾಯವನ್ನು ಅಭಿವೃದ್ಧಿಪಡಿಸುವ ಹೊಣೆ ಕಂಪನಿಯೇ ಹೊರುತ್ತದೆ.

Ganga Expressway

ಅದಾನಿ ಗ್ರೂಪ್ ಮಹತ್ವದ ಪಾತ್ರ

ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆ ಬಹುಪಾಲು ಕೆಲಸವನ್ನು ಅದಾನಿ ಗ್ರೂಪ್ ಕೈಗೆತ್ತಿಕೊಂಡಿದ್ದು, ಒಟ್ಟಾರೆ ಮಾರ್ಗದ ಸುಮಾರು 464 ಕಿಲೋ ಮೀಟರ್ ಎಂದರೆ ಸುಮಾರು ಶೇಕಡಾ 80 ಭಾಗ ಅದಾನಿ ರೋಡ್ ಟ್ರಾನ್ಸ್‌ಪೋರ್ಟ್ ಲಿಮಿಟೆಡ್ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಇದು **Adani Enterprises Ltd. (AEL)**ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಆಗಿದೆ. ಇನ್ನುಳಿದ 130 ಕಿ.ಮೀ ಮಾರ್ಗವನ್ನು IRB Infrastructure Developers ಅಭಿವೃದ್ಧಿಪಡಿಸುತ್ತಿದೆ.

ಅದಾನಿ ಎಂಟರ್‌ಪ್ರೈಸಸ್‌ಗಾಗಿ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆ ಭಾರತದಲ್ಲಿ ಸಮಗ್ರ ಸಾರಿಗೆ & ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ನಿರ್ಮಿಸುವ ಪ್ರಮುಖ ಹೆಜ್ಜೆಯಾಗಿದೆ. ಕಂಪನಿಯ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮೂಲಕ ರಸ್ತೆ ಮೂಲಸೌಕರ್ಯ ಅಭಿವೃದ್ಧಿಪಡಿಸಿ ದೇಶದ ಉತ್ಪಾದಕತೆಯನ್ನ ಹೆಚ್ಚಿಸುವ ಉದ್ದೇಶವನ್ನ ಈ ಯೋಜನೆ ಮೂಲಕ ಹೊಂದಲಾಗಿದೆ.

ಲಾಜಿಸ್ಟಿಕ್ಸ್ ವೆಚ್ಚ ಕಡಿಮೆ ಮಾಡುವ ಗುರಿ

ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚವು ಒಟ್ಟು ಜಿಡಿಪಿಯ ಸುಮಾರು ಶೇಕಡಾ 14 ರಷ್ಟಿದ್ದು, ಇದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕಾ, ಚೀನಾ ಹಾಗೂ ಜರ್ಮನಿಯ ಶೇ. 8 ರಿಂದ 9 ರಷ್ಟು ಮಟ್ಟಕ್ಕಿಂತ ಬಹಳ ಹೆಚ್ಚು ಎನ್ನಬಹುದು.

ಹೆದ್ದಾರಿ, ಬಂದರು, ವಿಮಾನ ನಿಲ್ದಾಣ ಮತ್ತು ಲಾಜಿಸ್ಟಿಕ್ಸ್ ಪಾರ್ಕ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಈ ವೆಚ್ಚ ಕಡಿಮೆ ಮಾಡುವುದು, ಸರಕು ಮತ್ತು ಜನರ ವೇಗವಾದ ಸಂಚಾರವನ್ನು ಸಾಧ್ಯವಾಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

ಲಾಜಿಸ್ಟಿಕ್ಸ್ ಮತ್ತು ವಿಮಾನಯಾನ ಕ್ಷೇತ್ರದಲ್ಲೂ ವಿಸ್ತರಣೆ

ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆ ಮಾದರಿಯನ್ನ ಅದಾನಿ ಗ್ರೂಪ್ ಈಗಾಗಲೇ Adani Ports and Special Economic Zone ಮೂಲಕ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇನ್ನು 2007ರಲ್ಲಿ ಪ್ರತ್ಯೇಕ ಸಂಸ್ಥೆ ಆಗಿ ಹೊರಬಂದ ಈ ಕಂಪನಿ ಇಂದು ಭಾರತದ ಬಂದರು ಸರಕು ಸಾಗಣೆಯ ಸುಮಾರು ಶೇಕಡ 27 ಭಾಗವನ್ನ ನಿರ್ವಹಿಸುತ್ತಿದೆ. ಇದಕ್ಕೆ 12 ಬಹುಮಾಧ್ಯಮ ಲಾಜಿಸ್ಟಿಕ್ಸ್ ಪಾರ್ಕ್‌ಗಳು, ಸಮರ್ಪಿತ ರೈಲು ಸಂಪರ್ಕ ಸೇರಿ ವಿಸ್ತರಿಸುತ್ತಿರುವ ಲಾಜಿಸ್ಟಿಕ್ಸ್ ಜಾಲ ಸಹಕಾರಿ ಆಗಿದೆ.

ಇದೇ ವೇಳೆ Adani Airports Holdings Ltd. ಮೂಲಕ ಅದಾನಿ ಗ್ರೂಪ್ ವಿಮಾನಯಾನ ಕ್ಷೇತ್ರದಲ್ಲೂ ವೇಗವಾಗಿ ವಿಸ್ತರಿಸುತ್ತಿದೆ. ಪ್ರಸ್ತುತ ಭಾರತದಲ್ಲಿ ಎಂಟು ಪ್ರಮುಖ ವಿಮಾನ ನಿಲ್ದಾಣಗಳನ್ನು ಈ ಕಂಪನಿ ನಿರ್ವಹಿಸುತ್ತಿದ್ದು, ದೇಶೀಯ ಪ್ರಯಾಣಿಕರ ಸಂಚಾರದ ಸುಮಾರು ಶೇಕಡಾ 25 ಹಾಗೂ ದೇಶೀಯ ಏರ್ ಕಾರ್ಗೋದ ಶೇಕಡಾ 31ರಷ್ಟು ಭಾಗವನ್ನು ನಿರ್ವಹಿಸುತ್ತಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/business/ganga-expressway-driving-growth-in-uttar-pradesh-with-the-india-s-largest-greenfield-project-011-446789.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo