LPG: ಮನೆಯಲ್ಲೇ ಕುಳಿತು ಎಲ್‌ಪಿಜಿ ಇ-ಕೆವೈಸಿ ಮಾಡುವುದು ಹೇಗೆ? ಇಲ್ಲಿವೆ ಸರಳ ವಿಧಾನಗಳು | LPG New Rules: e-KYC Mandatory for Domestic Cylinder Consumers, 25-Day Gap for Booking: Know details

Karnataka

oi-Madhusudhan KR

LPG Gas: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಈಗಾಗಲೇ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರವು ಎಲ್‌ಪಿಜಿ ವಿತರಣೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಎಲ್ಲಾ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಗ್ರಾಹಕರು ಇ-ಕೆವೈಸಿ ಮಾಡಿಸುವುದು ಈಗ ಕಡ್ಡಾಯವಾಗಿದೆ. ಇದು ಗ್ರಾಹಕರನ್ನು ಗುರುತಿಸಲು ಮತ್ತು ದುರುಪಯೋಗ ಆಗುವುದನ್ನು ತಡೆಯಲು ಸಹಕಾರಿ ಆಗಲಿದೆ. ಹಾಗಾದ್ರೆ, ಮನೆಯಲ್ಲೇ ಕುಳಿತು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಹೊಸ ಮಾರ್ಗಸೂಚಿಯ ಪ್ರಕಾರ, ಒಂದು ಸಿಲಿಂಡರ್ ಬುಕ್ ಮಾಡಿದ ನಂತರ ಮುಂದಿನ ಬುಕಿಂಗ್‌ಗೆ ಕನಿಷ್ಠ 25 ದಿನಗಳ ಅಂತರ ಇರಬೇಕಾಗುತ್ತದೆ. ಅಡುಗೆ ಅನಿಲದ ಕೊರತೆ ಆಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ‘ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ’ಯನ್ನು (ESMA) ಜಾರಿಗೊಳಿಸಿದೆ. ಇದರಿಂದಾಗಿ ದೇಶೀಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದ್ದರಿಂದ ಇದೀಗ ಗ್ರಾಹಕರಿಗೆ ಇ-ಕೆವೈಸಿ ಕಡ್ಡಾಯಗೊಳಿಸಿದೆ.

LPG New Rules e-KYC Mandatory for Domestic Cylinder Consumers 25-Day Gap for Booking Know details

ಇ-ಕೆವೈಸಿ ಮಾಡಿಸುವ ವಿಧಾನಗಳು

ಇಂಧನ ಏಜೆನ್ಸಿಯ ಮೂಲಕ ಇ-ಕೆವೈಸಿ: ನಿಮ್ಮ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಪಾಸ್‌ಬುಕ್ ಅನ್ನು ತೆಗೆದುಕೊಂಡು ಹತ್ತಿರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ. ಅಲ್ಲಿ ಬಯೋಮೆಟ್ರಿಕ್ ಯಂತ್ರದ ಮೂಲಕ ದೃಢೀಕರಣ ಪೂರ್ಣಗೊಳಿಸಿ.

ಮೊಬೈಲ್ ಆ್ಯಪ್ ಮೂಲಕ ಇ-ಕೆವೈಸಿ

ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ (ಉದಾಹರಣೆಗೆ: IndianOil One, BharatGas ಅಥವಾ HP Pay). ಜೊತೆಗೆ ಪ್ಲೇಸ್ಟೋರ್‌ನಿಂದ ‘Aadhaar Face RD’ ಆ್ಯಪ್ ಅನ್ನು ಕೂಡ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಬಳಿಕ ಗ್ಯಾಸ್ ಆ್ಯಪ್‌ನಲ್ಲಿ ಲಾಗಿನ್ ಆಗಿ ‘e-KYC’ ಆಯ್ಕೆ ಮಾಡಿ Facial recognition ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಸಬ್ಸಿಡಿ ಪಡೆಯಲು ಅಥವಾ ಸಿಲಿಂಡರ್ ಬುಕಿಂಗ್ ಮಾಡಲು ತೊಂದರೆ ಆಗಬಹುದು. ಈ ನಿಯಮವು ಪ್ರಸ್ತುತ ಕೇರಳ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಅಧಿಕೃತ ವೆಬ್‌ಸೈಟ್ www.pmuy.gov.in/e-kyc.htmlಗೆ ಭೇಟಿ ನೀಡಬಹುದು.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/lpg-new-rules-e-kyc-mandatory-for-domestic-cylinder-consumers-25-day-gap-for-booking-know-details-446851.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo