ಕಚ್ಚಾತೈಲ ಬೆಲೆ 12,000 ರೂಪಾಯಿ ದಾಟುವ ಸಾಧ್ಯತೆ, ಶುರುವಾಯ್ತು ಹೊಸ ಆತಂಕ | Operation Roaring Lion | Operation Roaring Lion Against Iran And Crude Oil Price May Reach To More High Level For This Reason

International

oi-Malathesha M

ಇರಾನ್ ವಿರುದ್ಧ ಶುರುವಾಗಿರುವ ಭೀಕರ ಯುದ್ಧದ ಪರಿಣಾಮ ಈಗಾಗಲೇ ಪೆಟ್ರೋಲ್ & ಡೀಸೆಲ್ ಬೆಲೆ ಪ್ರಪಂಚದ ಬಹುತೇಕ ದೇಶಗಳಲ್ಲಿ ಮುಗಿಲು ಮುಟ್ಟಿದೆ. ಹೀಗೆ ಆಕಾಶ ತಲುಪಿರುವ ಇಂಧನದ ಬೆಲೆ ಬಡವರ ಹೊಟ್ಟೆ ಉರಿಯುವಂತೆ ಮಾಡಿದ್ದು, ಜೀವನ ನಡೆಸುವುದೇ ಕಷ್ಟಕರ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲಿ ಎಲ್ಲಾ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತಾ ಇರುವುದು & ಇದರ ಪರಿಣಾಮ ಸಾಮಾನ್ಯ ಜನರು ಜೀವನ ನಡೆಸುವುದಕ್ಕೂ ಪರದಾಡುತ್ತಿರುವುದು ಹೆಚ್ಚಾಗುತ್ತಿದೆ. ಈ ಸಮಯದಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.

ಇರಾನ್ ತಮ್ಮ ಮಾತು ಕೇಳುತ್ತಿಲ್ಲ, ಪರಮಾಣು ಬಾಂಬ್ ವಿಚಾರದಲ್ಲಿ ಇರಾನ್ ತಪ್ಪು ಹೆಜ್ಜೆಯನ್ನ ಇಡುತ್ತಿದೆ ಎಂದು ಅಮೆರಿಕ ಹಾಗೂ ಇಸ್ರೇಲ್ ಒಟ್ಟಾಗಿ ಯುದ್ಧ ಆರಂಭ ಮಾಡಿದ್ದವು. ಹೀಗೆ ಇರಾನ್ ಮೇಲೆ ಇಬ್ಬರೂ ಸೇರಿ ಯುದ್ಧ ಶುರು ಮಾಡಿ ಈಗಾಗಲೇ 13 ದಿನ ಕಳೆದು ಹೋಗಿದ್ದು, 2 ವಾರದಲ್ಲೇ ಈ ಯುದ್ಧವು ಜಗತ್ತಿನ ಆರ್ಥಿಕತೆ ಪಾತಾಳ ಸೇರುವಂತೆ ಮಾಡಿದೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತಕಾರಿ ಚರ್ಚೆ ಶುರುವಾಗಿದೆ. ಹಾಗಾದರೆ ತೈಲ ಬೆಲೆ ಎಷ್ಟು ಹೆಚ್ಚಾಗಲಿದೆ? ಬಡವರ ಬದುಕು ಮುಂದೆ ಏನು? ಪ್ರಪಂಚದ ಯಾವ ಯಾವ ದೇಶಗಳು ಇದರ ಪರಿಣಾಮ ಎದುರಿಸಬಹುದು? ಮುಂದೆ ಓದಿ.

Operation Roaring Lion

ಕಚ್ಚಾ ತೈಲ ಬೆಲೆ 12,000 ರೂಪಾಯಿ?

ಅದು ಏನೆಂದರೆ ಈಗ 100 ಡಾಲರ್ ಮೀರಿ ಹೋಗಿರುವ ಕಚ್ಚಾ ತೈಲ ಬೆಲೆ, ಇನ್ನೇನು ಪ್ರತಿ ಬ್ಯಾರಲ್‌ಗೆ ಬರೋಬ್ಬರಿ 130 ಡಾಲರ್ ತಲುಪಬಹುದು ಎಂಬ ಶಾಕಿಂಗ್ ಚರ್ಚೆ ಜೋರಾಗಿದೆ. ಅಕಸ್ಮಾತ್ ಹೀಗೆ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 130 ಡಾಲರ್ ತಲುಪಿದರೆ, ಆಗ ಭಾರತದ ರೂಪಾಯಿ ಬೆಲೆಯಲ್ಲಿ ಬರೋಬ್ಬರಿ 12,000 ರೂಪಾಯಿ ಕೊಡಬೇಕಾಗಿ ಬರಲಿದೆ. ಇರಾನ್ ಸೇನೆ ತನ್ನ ಬಳಿ ಇರುವ ಸಾವಿರಾರು ಕ್ಷಿಪಣಿಗಳ ಮೂಲಕ ದೊಡ್ಡ, ದೊಡ್ಡ ದಾಳಿ ನಡೆಸುತ್ತಾ ಅರಬ್ ದೇಶಗಳ ತೈಲ ಘಟಕಗಳನ್ನು ನಾಶ ಮಾಡುತ್ತಿದೆ.

ಇನ್ನೊಂದು ಕಡೆ ಹೊರ್ಮುಜ್ ಜಲಸಂಧಿ ಕೂಡ ಬಂದ್ ಆಗಿರುವ ಕಾರಣ ಭಾರಿ ಪ್ರಮಾಣದಲ್ಲಿ ಕಚ್ಚಾ ತೈಲ ಅಲ್ಲೇ ನಿಂತು ಹೋಗಿದೆ. ಈ ಎಲ್ಲಾ ಬೆಳವಣಿಗೆಗಳು ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಏರಿಕೆಯ ಭೀತಿ ಹುಟ್ಟುಹಾಕಿದೆ. ಇನ್ನು ಪ್ರಮುಖವಾಗಿ ತೈಲ ಆಮದು ಮಾಡಿಕೊಳ್ಳುವ ದೇಶಗಳು ಈ ಬೆಳವಣಿಗೆ ನಂತರ ಒದ್ದಾಡುವ ಸನ್ನಿವೇಶ ನಿರ್ಮಾಣ ಆಗಬಹುದು. ಅದರಲ್ಲೂ ಕೆಲವೇ ದಿನಗಳಲ್ಲಿ ಆಫ್ರಿಕಾದ ದೇಶಗಳು ಹಾಗೂ ಏಷ್ಯಾದ ಬಡ ದೇಶಗಳಲ್ಲಿ ತೈಲ ಬೆಲೆ ಮುಗಿಲು ಮುಟ್ಟಿದರೂ ಅಚ್ಚರಿ ಪಡಬೇಕಿಲ್ಲ. ಇದೇ ಕಾರಣಕ್ಕೆ ಚಿಂತಾಕ್ರಾಂತ ಸ್ಥಿತಿ ನಿರ್ಮಾಣ ಆಗಿದ್ದು, ಪಾಪಿ ಪಾಕಿಸ್ತಾನದ ರಾಜಕೀಯ ನಾಯಕರು ಅಲ್ಲಿ ಈಗಾಗಲೇ ತೈಲ ಬೆಲೆಯನ್ನು ಮುಗಿಲು ಮುಟ್ಟಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/operation-roaring-lion-against-iran-and-crude-oil-price-may-reach-to-more-high-level-for-this-reason-446871.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo