
India
oi-Madhusudhan KR
LPG Gas: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಎಲ್ಪಿಜಿ (ಅಡುಗೆ ಅನಿಲ) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕದ ನಡುವೆಯೇ, ಸರ್ಕಾರವು ದೇಶೀಯ ಗ್ಯಾಸ್ ರಿಫಿಲ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಹಾಗೂ ಅನಿಲ ವಿತರಣೆಯಲ್ಲಿನ ದೂರುಗಳನ್ನು ಸಲ್ಲಿಸಲು ಸಹಾಯವಾಣಿಗಳನ್ನು ಬಿಡುಗಡೆ ಮಾಡಿದೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ತೈಲ ಮತ್ತು ಅನಿಲ ಪೂರೈಕೆಯ ಮಾರ್ಗಗಳಿಗೆ ಅಡ್ಡಿ ಉಂಟಾಗಿದ್ದು, ರೆಡ್ ಸೀ (ಕೆಂಪು ಸಮುದ್ರ) ಮತ್ತು ಹೋರ್ಮುಜ್ ಜಲಸಂಧಿಯಂತಹ ಪ್ರಮುಖ ಇಂಧನ ಕಾರಿಡಾರ್ಗಳ ಮೂಲಕ ಹಡಗುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಈ ಉದ್ವಿಗ್ನತೆಯು ಎಲ್ಪಿಜಿ ಬೆಲೆ ಏರಿಕೆಗೆ ಕಾರಣವಾಗಿದ್ದು, ಭಾರತದಲ್ಲಿ ಅನಿಲದ ಕೊರತೆ ಆಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ. ಆದಾಗಿಯೂ, ಸಾಕಷ್ಟು ಪೂರೈಕೆ ಲಭ್ಯವಿದೆ ಎಂದು ಸರ್ಕಾರ ಭರವಸೆ ನೀಡಿದೆ.

ಪ್ರಮುಖ ಬದಲಾವಣೆಗಳು
* ಅನಿಲ ಪೂರೈಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅಕ್ರಮ ದಾಸ್ತಾನನ್ನು ತಡೆಯಲು, ಸರ್ಕಾರವು ಎಲ್ಪಿಜಿ ಸಿಲಿಂಡರ್ ಬುಕಿಂಗ್ ನಡುವಿನ ಕಡ್ಡಾಯ ಕಾಯುವ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿದೆ.
* ಅಧಿಕೃತ ಇನ್ವಾಯ್ಸ್ನಲ್ಲಿ ನಮೂದಿಸಿರುವುದಕ್ಕಿಂತ ಹೆಚ್ಚಿನ “ಡೆಲಿವರಿ ಶುಲ್ಕ” ಕೇಳುವ ಅಥವಾ ಸಿಲಿಂಡರ್ ವಿತರಿಸಲು ನಿರಾಕರಿಸುವ ವಿತರಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಸಿದೆ.
ದೂರು ಸಲ್ಲಿಸುವುದು ಹೇಗೆ?
ನೀವು ಎಲ್ಪಿಜಿ ಬುಕ್ ಮಾಡಿದ ನಂತರ ಸಿಲಿಂಡರ್ ವಿತರಣೆಯಲ್ಲಿ ವಿಳಂಬವಾದರೆ ಅಥವಾ ವಿತರಕರು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರೆ, ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದೆ. ಅಕ್ರಮ ದಾಸ್ತಾನನ್ನು ತಡೆಗಟ್ಟಲು, ಗೃಹಬಳಕೆಯ ಎಲ್ಪಿಜಿ ಪೂರೈಕೆಯು ಜನಸಾಮಾನ್ಯರಿಗೆ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದೆ.
ಇಂಡೇನ್ ಗ್ಯಾಸ್ (Indane Gas) ಸಹಾಯವಾಣಿ
* ಟೋಲ್-ಫ್ರೀ ಸಂಖ್ಯೆ: 1800-2333-555
* ತುರ್ತು ಸಹಾಯವಾಣಿ (ಗ್ಯಾಸ್ ಸೋರಿಕೆ): 1906 (24×7)
* ದೂರು ಸಲ್ಲಿಸುವ ವಿಧಾನಗಳು
ಗ್ರಾಹಕರು ಇಂಡಿಯನ್ ಆಯಿಲ್ನ ಕುಂದುಕೊರತೆ ನಿವಾರಣಾ ಪೋರ್ಟಲ್ (Grievance Portal)ನಲ್ಲಿ ಆನ್ಲೈನ್ ಮೂಲಕ ದೂರುಗಳನ್ನು ಕೂಡ ದಾಖಲಿಸಬಹುದು. ಇದಕ್ಕಾಗಿ “ರಿಫಿಲ್ ಮನೆಗೆ ತಲುಪಿಲ್ಲ” (Refill Not Delivered At Home), “ರಿಫಿಲ್ ಪೂರೈಕೆಯಲ್ಲಿ ವಿಳಂಬ” (Delay In Refill Supply), “ಕ್ಯಾಶ್ ಮೆಮೊ ನೀಡಿಲ್ಲ” (Cash Memo Not Given) ಅಥವಾ “ರಿಫಿಲ್ ಬುಕಿಂಗ್ ರದ್ದಾಗಿದೆ” (Refill Booking Cancelled) ಎಂಬ ಆಯ್ಕೆಗಳನ್ನು ನೀಡಲಾಗುತ್ತದೆ.
ಭಾರತ್ ಗ್ಯಾಸ್ (Bharat Gas) ಸಹಾಯವಾಣಿ
* ಗ್ರಾಹಕ ಸೇವಾ ಸ್ಮಾರ್ಟ್ಲೈನ್: 1800 22 4344 (ಇದು 24×7 ತುರ್ತು ಸಹಾಯವಾಣಿಯೂ ಆಗಿದೆ).
ಹೆಚ್.ಪಿ. ಗ್ಯಾಸ್ (HP Gas) ಸಹಾಯವಾಣಿ
* ಸಹಾಯವಾಣಿ ಸಂಖ್ಯೆ: 1800 233 3555
* ಹೆಚ್.ಪಿ. ಗ್ಯಾಸ್ ಆನ್ಲೈನ್ ಪೋರ್ಟಲ್ ಮೂಲಕ ಆನ್ಲೈನ್ ದೂರು ಸಲ್ಲಿಕೆ ಮಾಡಬಹುದು.
ಉಜ್ವಲ ಯೋಜನೆ ಬಳಕೆದಾರರಿಗೆ ಸಹಾಯವಾಣಿ
* ಟೋಲ್-ಫ್ರೀ ಸಹಾಯವಾಣಿ: 1800-233-3555
* ಉಜ್ವಲ ಸಹಾಯವಾಣಿ: 1800-266-6696
ಪ್ರಸ್ತುತ ಅಡುಗೆ ಅನಿಲ (LPG) ಪೂರೈಕೆಯಲ್ಲಿನ ನಿರ್ಬಂಧಗಳ ನಡುವೆ, ಗೃಹಬಳಕೆಯ ಎಲ್ಪಿಜಿಗೆ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವಾಣಿಜ್ಯ ಬಳಕೆಗೆ ಉದ್ದೇಶದಿಂದ ಆಮದು ಮಾಡಿಕೊಂಡ ಎಲ್ಪಿಜಿಯನ್ನು ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಅಗತ್ಯ ವಲಯಗಳಿಗೆ ನೀಡಲಾಗುತ್ತದೆ. ಅನಿಲದ ಕೊರತೆಯಿಂದ ಸಂಕಷ್ಟಕ್ಕೀಡಾಗಿರುವ ಉದ್ಯಮಗಳ ಮನವಿಗಳನ್ನು ಪರಿಶೀಲಿಸಲು, ತೈಲ ಮಾರುಕಟ್ಟೆ ಕಂಪನಿಗಳ ಮೂವರು ಕಾರ್ಯನಿರ್ವಾಹಕ ನಿರ್ದೇಶಕರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ರೆಸ್ಟೋರೆಂಟ್ಗಳು, ಹೋಟೆಲ್ಗಳು ಮತ್ತು ಇತರ ಕೈಗಾರಿಕೆಗಳಿಂದ ಬರುವ ಅನಿಲ ಪೂರೈಕೆಯ ಬೇಡಿಕೆಗಳನ್ನು ಪರಿಶೀಲಿಸಲಿದೆ ಎಂದು ತಿಳಿದುಬಂದಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/lpg-refill-rules-government-extends-booking-gap-to-25-days-releases-helpline-numbers-for-complaints-446899.html. xn--babytilbehr-pgb.com does not claim ownership of this content. All rights remain with the original publisher.
