Government Employees: 8ನೇ ವೇತನ ಆಯೋಗದಡಿ ನೌಕರರ ಮೂಲ ವೇತನ 46,000 ರೂ.ಗೆ ಹೆಚ್ಚಳ? ಸಂಭವ | 8th Pay Commission: Minimum Salary May Rise from rs 18000 to Rs 46,000 for Central Govt Employees

India

oi-Shankrappa Parangi

ನವದೆಹಲಿ: ಕೇಂದ್ರ ಸರ್ಕಾರವು ಎಂಟನೇ ವೇತನ ಆಯೋಗವನ್ನು (8th Pay commission) ಅಧಿಕೃತಗೊಳಿಸಿದೆ. ನೌಕರರ ವೇತನ, ಭತ್ಯೆ ಹೆಚ್ಚಳ ಬೇಡಿಕೆ ಈಡೇರಿಕೆ ಸಂಬಂಧ ಈಗಾಗಲೇ ಸಮಾಲೋಚನೆಗಳನ್ನು ಭಾರತ ಸರ್ಕಾರ ಆರಂಭಿಸಿದೆ. ಶಿಫಾರಸುಗಳು ಒಪ್ಪಿದಲ್ಲಿ ಕೇಂದ್ರ ಸರ್ಕಾರಿ ನೌಕರರ ಭವಿಷ್ಯದ ಸಂಬಳ, ಪಿಂಚಣಿ ಮತ್ತು ಭತ್ಯೆಗಳು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನೌಕರರ ಸಂಘಟನೆಗಳ ಒಕ್ಕೂಟವು ಇತ್ತೀಚೆಗೆ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿ ಬೇಡಿಕೆಗಳ ವರದಿ ರೂಪಿಸಿದ್ದವು.

ಹಣಕಾಸು ಸಚಿವಾಲಯವು ಆಯೋಗ ಜಾರಿಗೆ ಸಂಬಂಧಿಸಿದಂತೆ ನೌಕರರು, ಪಿಂಚಣಿದಾರರು ಮತ್ತವರ ಸಂಘಗಳು ಮತ್ತು ಇತರ ಪಾಲುದಾರರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಆನ್‌ಲೈನ್‌ನಲ್ಲಿ ಸಲಹೆಗಳ ಸಲ್ಲಿಕೆಗೆ 2026 ಏಪ್ರಿಲ್ 30ರವರೆಗೆ ಅವಕಾಶ ಇದೆ. ಇನ್ನೂ ಸರ್ಕಾರಕ್ಕೆ ಶಿಫಾರಸು ಸಲ್ಲಿಸಲು ಒಟ್ಟು 18 ತಿಂಗಳುಗಳ ಕಾಲಾವಕಾಶ ನೀಡಲಾಗಿದೆ. ನೌಕರರ ಸಂಘಟನೆಗಳು, ಪ್ರತಿನಿಧಿಗಳು ನೀಡುವ ಶಿಫಾರಸು ವರದಿ ಅಂಗೀಕರಿಸಿದರೆ
ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಹಾಗೂ ಸುಮಾರು 69 ಲಕ್ಷ ಪಿಂಚಣಿದಾರರಿಗೆ ಪಿಂಚಣಿ ಹೆಚ್ಚಳ ಸೌಲಭ್ಯ ಸಿಗುತ್ತದೆ.

8th Pay Commission

ಮೊದಲ ವೇತನ ಆಯೋಗ ಜಾರಿಯಾದ 1946ರಿಂದಲೂ ಕಾಲ ಕಾಲಕ್ಕೆ ವೇತನ, ಭತ್ಯೆ ಹೆಚ್ಚಿಸುತ್ತಾ ಬರಲಾಗಿದೆ. ಇಂದಿನ ದುಬಾರಿ ಕಾಲದಲ್ಲಿ ಹೆಚ್ಚಿನ ಫಿಟ್‌ಮೆಂಟ್ ಅಂಶ ಪರಿಗಣಿಸಿ ಅದರ ಆಧಾರದಲ್ಲಿ ವೇತನ, ಭತ್ಯೆ ಹೆಚ್ಚಿಸಿದರೆ ಅನುಕೂಲ ಎಂದು ನೌಕರರು, ಪಿಂಚಣಿದಾರರು ಬೇಡಿಕೆ ಇಟ್ಟಿದ್ದಾರೆ. 2016 ರಲ್ಲಿ ಜಾರಿಯಾದ 7ನೇ ವೇತನ ಆಯೋಗದಡಿ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ರೂ.18,000 ಕ್ಕೆ ಹೆಚ್ಚಿಸಲಾಯಿತು. ಗರಿಷ್ಠ ಮೂಲ ವೇತನವನ್ನು ತಿಂಗಳಿಗೆ ರೂ 2.5 ಲಕ್ಷಕ್ಕೆ ನಿಗದಿ ಮಾಡಲಾಯಿತು.

ಮೂಲ ವೇತನ 18,000 ರಿಂದ 46,000 ರೂ.ಗೆ ಹೆಚ್ಚಳ?

ಸದ್ಯ ಎಂಟನೇ ವೇತನ ಅಯೋಗಡಿ ನೌಕರರ ವೇತನ ಎಷ್ಟು ಹೆಚ್ಚಾಗಲಿದೆ ಎಂಬ ಕುತೂಹಲ ಇದೆ. ಹೆಚ್ಚಿನ ಫಿಟ್‌ಮೆಂಟ್ ಅಂಶ (3.0ರ-3.25) ಪರಿಗಣಿಸಬೇಕೆಂಬುದು ನೌಕರರ ಬೇಡಿಕೆಯಾಗಿದೆ. ಇದನ್ನು ಅಂಗೀಕರಿಸಿದಲ್ಲಿ ಕನಿಷ್ಠ ಮೂಲ ವೇತನವು ಪ್ರಸ್ತುತ 18,000 ರೂ.ನಿಂದ 46,000 ರೂಪಾಯಿಗೆ ಗಣನೀಯವಾಗಿ ಏರಿಕೆ ಆಗಲಿದೆ. ಸದ್ಯ ಹಲವು ಬೇಡಿಕೆಗಳ ನಡುವೆ ಕೇಂದ್ರವು ವೇತನ ಮಟ್ಟ, ಅನುಷ್ಠಾನ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ.

ನೌರರ ಬೇಡಿಕೆಗಳು, ಶಿಫಾರಸುಗಳ ವರದಿಯನ್ನು ವೇತನ ಆಯೋಗ ಸಲ್ಲಿಸಿದ ನಂತರ ಮತ್ತು ಅದರ ಶಿಫಾರಸುಗಳನ್ನು ಅನುಮೋದಿಸಿದ ನಂತರವೇ ಹೊಸ ವೇತನ ರಚನೆಗೆ ಹಣಕಾಸಿನ ನಿಬಂಧನೆ ಹೊರಡಿಸಲಿದೆ. ಈ ಸಂಬಂಧ ಸಲಹೆ, ಶಿಫಾರಸು ಆಹ್ವಾನಿಸಲಾಗಿದೆ. ನೌಕರರ ಬೇಡಿಕೆಗಳನ್ನು ಒಪ್ಪುವ ಮತ್ತು ಈ ಬಾರಿ ಕೇಂದ್ರದಿಂದ ಉದ್ಯೊಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಗುವ ವಿಶ್ವಾಸವಿದೆ.

ಹಿಂದೆ ಹೆಚ್ಚಿಸಿದ್ದ ಮೂಲ ವೇತನ ವಿವರ

5ನೇ ವೇತನ ಆಯೋಗ (1996) ಜಾರಿ ಇದ್ದಾಗ ಸಂಕುಚಿತ ಅನುಪಾತ 1:10.2 ಅಡಿಯಲ್ಲಿ ನೌಕರರ ಕನಿಷ್ಠ ಮೂಲ ಸಂಬಳ 2,550 ರೂಪಾಯಿ ಮತ್ತು ಗರಿಷ್ಠ ಮೂಲ ವೇತನ 26,000 ರೂ.ಗೆ ಹೆಚ್ಚಿಸಲಾಯಿತು. 6ನೇ ವೇತನ ಆಯೋಗ (2006) ಅಡಿ ಸಂಕುಚಿತ ಅನುಪಾತ (1:11.4) ಆಧಾರದಲ್ಲಿ ಮೂಲ ವೇತನ ಕನಿಷ್ಠ 7,000 ರೂ. ಹಾಗೂ ಗರಿಷ್ಠ 80,000 ರೂಪಾಯಿಗೆ ಹೆಚ್ಚಿಸಲಾಗಿತ್ತು. ಕಳೆದ ಬಾರಿ ಏಳನೇ ವೇತನ ಆಯೋಗದಡಿ (1:13.9) ಕನಿಷ್ಠ ಮೂಲ ವೇತನ 18,000 ರೂ. ಮತ್ತು ಗರಿಷ್ಠ 2,50,000 ರೂ. ಹೆಚ್ಚಿಸಲಾಗಿತ್ತು.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/8th-pay-commission-minimum-salary-may-rise-from-rs-18000-to-rs-46-000-for-central-govt-employees-446961.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo