Ajith Kumar: ನಟ ಅಜಿತ್‌ ಕುಮಾರ್‌ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ | Ajith Kumar Gets Mahindra BE 6 Formula E Edition Electric Racing Car Features That Impress Fans

Entertainment

oi-Manohara M

ತಮಿಳು ಚಿತ್ರರಂಗದ ಸ್ಟಾರ್‌ ನಟ, “ಥಲಾ” ಅಜಿತ್ ಕುಮಾರ್ ಅವರು ಮಹೀಂದ್ರಾ ಕಂಪನಿಯ ಬಹುನಿರೀಕ್ಷಿತ ಮಹೀಂದ್ರಾ BE 6 ಫಾರ್ಮುಲಾ E ಆವೃತ್ತಿ (Mahindra BE 6 Formula E Edition) ಎಲೆಕ್ಟ್ರಿಕ್ ಕಾರನ್ನು ಖರೀದಿ ಮಾಡಿದ್ದಾರೆ. ಮಹೀಂದ್ರಾ ಕಂಪನಿಯ ಆಟೋಮೋಟಿವ್ ಟೆಕ್ನಾಲಜಿ ಮತ್ತು ಪ್ರಾಡಕ್ಟ್ ಡೆವಲಪ್‌ಮೆಂಟ್ ವಿಭಾಗದ ಅಧ್ಯಕ್ಷರಾದ ವೇಲುಸಾಮಿ ಅವರು ಅಜಿತ್ ಅವರಿಗೆ ಕಾರಿನ ಕೀ ಹಸ್ತಾಂತರಿಸಿದರು.

ಮೋಟಾರ್ ಸ್ಪೋರ್ಟ್ಸ್ ಪ್ರೇಮಿ ಅಜಿತ್

ನಟ ಅಜಿತ್ ಕುಮಾರ್ ಕೇವಲ ಸಿನಿಮಾಗಳಿಗೆ ಸೀಮಿತರಾದವರಲ್ಲ. ಅವರು ವೃತ್ತಿಪರ ರೇಸರ್ ಕೂಡ ಹೌದು. ಇತ್ತೀಚೆಗಷ್ಟೇ ಅವರು ತಮ್ಮದೇ ಆದ ‘ಅಜಿತ್ ಕುಮಾರ್ ರೇಸಿಂಗ್’ ತಂಡವನ್ನು ಪ್ರಾರಂಭಿಸಿ ಯುವ ರೇಸರ್‌ಗಳಿಗೆ ವೇದಿಕೆ ಕಲ್ಪಿಸುತ್ತಿದ್ದಾರೆ. ಸ್ವತಃ ಎಫ್-2 (F2) ರೇಸರ್ ಆಗಿರುವ ಅಜಿತ್, ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನದತ್ತ ಒಲವು ತೋರಿರುವುದು ಸ್ಯಾಂಡಲ್‌ವುಡ್ ಮತ್ತು ಕಾಲಿವುಡ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮೋಟಾರ್ ಸ್ಪೋರ್ಟ್ಸ್ ತಂತ್ರಜ್ಞಾನದ ಹಿನ್ನೆಲೆಯಿರುವ ಅವರಿಗೆ ಫಾರ್ಮುಲಾ ಇ ಮಾದರಿಯ ಈ ಕಾರು ಅತ್ಯಂತ ಸೂಕ್ತವಾಗಿದೆ.

Ajith Kumar

ಕಾರಿನ ವಿಶೇಷತೆ ಏನು?

ಇದು ಮಹೀಂದ್ರಾದ ಇತ್ತೀಚಿನ ಎಲೆಕ್ಟ್ರಿಕ್ ವಾಹನ ಶ್ರೇಣಿಯಲ್ಲೇ ಅತ್ಯಂತ ವಿಶೇಷವಾದ ಆವೃತ್ತಿಯಾಗಿದೆ. ಫಾರ್ಮುಲಾ ಇ ರೇಸಿಂಗ್ ಕಾರುಗಳಿಂದ ಸ್ಫೂರ್ತಿ ಪಡೆದ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಇದು ಹೊಂದಿದೆ. ಶೂನ್ಯದಿಂದ ನೂರು ಕಿ.ಮೀ ವೇಗವನ್ನು ಕೆಲವೇ ಸೆಕೆಂಡುಗಳಲ್ಲಿ ತಲುಪುವ ಸಾಮರ್ಥ್ಯ ಇದರಲ್ಲಿದೆ. ಅಜಿತ್ ಅವರು ವೇಲುಸಾಮಿ ಅವರೊಂದಿಗೆ ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ಚರ್ಚಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮಹೀಂದ್ರಾ ಕಂಪನಿಯು ಜಾಗತಿಕ ಮಟ್ಟದ ಫಾರ್ಮುಲಾ ಇ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಇದೇ ತಂತ್ರಜ್ಞಾನ ಮತ್ತು ವಿನ್ಯಾಸದ ಸ್ಫೂರ್ತಿಯಿಂದ ತಯಾರಾದ BE 6 Formula E Edition, ವೇಗ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನದಿಂದ ಕೂಡಿದೆ. ಭಾರತದ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಯಲ್ಲಿ ಮಹೀಂದ್ರಾ ಭದ್ರವಾಗಿ ನೆಲೆಯೂರಿದೆ. ಕಂಪನಿಯು ಈಗಾಗಲೇ ಹಲವು ಮಾದರಿಗಳನ್ನು ಪರಿಚಯಿಸಿದೆ.

ಮಹೀಂದ್ರಾ BE 6 ವಿಶೇಷತೆಗಳು

ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ. ಮಹೀಂದ್ರಾ ತನ್ನ ಫಾರ್ಮುಲಾ ಇ ರೇಸಿಂಗ್ ಪರಂಪರೆಯನ್ನು ಈ ಆವೃತ್ತಿಯಲ್ಲಿ ಮುಂದುವರಿಸಿದೆ. ರೇಸಿಂಗ್ ಕಾರುಗಳ ಮಾದರಿಯಲ್ಲೇ ಈ ಕಾರಿನ ಹೊರಭಾಗದಲ್ಲಿ ಆಕರ್ಷಕ ವಿನ್ಯಾಸವಿದೆ. ಕಾರಿನ ಅಂದವನ್ನು ಹೆಚ್ಚಿಸುವ ಪ್ರತ್ಯೇಕ ಗ್ರಾಫಿಕ್ಸ್ ಮತ್ತು ಸ್ಟಿಕ್ಕರ್‌ಗಳನ್ನು ಇಲ್ಲಿ ಬಳಸಲಾಗಿದೆ. ಕಾರಿನ ಒಳಗೂ ರೇಸಿಂಗ್ ಕಾರ್ ಅನುಭವ ನೀಡುವಂತಹ ವಿಶಿಷ್ಟ ವಿನ್ಯಾಸದ ಆಕ್ಸೆಂಟ್‌ಗಳನ್ನು ಅಳವಡಿಸಲಾಗಿದೆ. ಕೇವಲ ವಿನ್ಯಾಸ ಮಾತ್ರವಲ್ಲದೆ, ತಾಂತ್ರಿಕವಾಗಿಯೂ ಈ ಕಾರು ಬಲಿಷ್ಠವಾಗಿದೆ.

ಚಾಲಕರಿಗೆ ಸ್ಮಾರ್ಟ್ ಫೋನ್ ಮೂಲಕ ಕಾರಿನ ಮಾಹಿತಿ ನೀಡುವ ಕನೆಕ್ಟೆಡ್ ತಂತ್ರಜ್ಞಾನವಿದೆ. ಇದರಲ್ಲಿರುವ ದೊಡ್ಡ ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಗಳು ಅತ್ಯುತ್ತಮ ಡ್ರೈವಿಂಗ್ ರೇಂಜ್ ನೀಡುತ್ತವೆ, ಇದರಿಂದ ದೂರದ ಪ್ರಯಾಣ ಸುಲಭವಾಗಲಿದೆ. ರೇಸಿಂಗ್ ಟ್ರ್ಯಾಕ್‌ನಲ್ಲಿ ಬಳಸುವ ಸುಧಾರಿತ ಏರೋಡೈನಾಮಿಕ್ಸ್ ಮತ್ತು ವೇಗದ ತಂತ್ರಜ್ಞಾನವನ್ನು ಸಾಮಾನ್ಯ ಬಳಕೆದಾರರಿಗೂ ತಲುಪಿಸುವ ಪ್ರಯತ್ನವನ್ನು ಈ “BE 6 Formula E Edition” ಮೂಲಕ ಮಾಡಿದೆ.

Ajith Kumar

ಈ ಸ್ಪೆಷಲ್ ಎಡಿಷನ್ ಕಾರು ಸಾಮಾನ್ಯ ಮಾದರಿಗಿಂತ ಭಿನ್ನವಾಗಿ ಕಾಣಲು ಹಲವು ವಿಶೇಷ ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಹೊಸ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಅಳವಡಿಸಲಾಗಿದ್ದು, ಇವು ರಾತ್ರಿ ಸಂಚಾರಕ್ಕೆ ಉತ್ತಮ ಬೆಳಕು ನೀಡುತ್ತವೆ. ಕಾರಿನಲ್ಲಿ ಬ್ರ್ಯಾಂಡಿಂಗ್ ಹೊಂದಿರುವ ಫಾರ್ಮುಲಾ ಇ ರೇಸಿಂಗ್ ಶೈಲಿಯ ಸೀಟುಗಳಿವೆ. ಕಾರಿಗೆ ಅಗ್ರೆಸಿವ್ ಲುಕ್ ನೀಡುವ ವಿಶಿಷ್ಟ ವಿನ್ಯಾಸದ ಬಂಪರ್‌ಗಳು ಮತ್ತು ಫಾರ್ಮುಲಾ ಇ ಸ್ಫೂರ್ತಿಯ ಗ್ರಾಫಿಕ್ಸ್ ನೀಡಲಾಗಿದೆ. ಕಾರಿನ ಸ್ಪೋರ್ಟಿ ಲುಕ್ ಹೆಚ್ಚಿಸಲು ಬ್ರೇಕ್ ಕ್ಯಾಲಿಪರ್‌ಗಳಿಗೆ ವಿಶೇಷ ಕಲರ್ ಆಕ್ಸೆಂಟ್ ನೀಡಲಾಗಿದೆ. ಈ ಆವೃತ್ತಿಯ ವಿಶೇಷತೆಯನ್ನು ಸಾರಲು ಕಾರಿನ ಮೇಲೆ ‘ಸ್ಪೆಷಲ್ ಬ್ಯಾಡ್ಜ್’ ಅಳವಡಿಸಲಾಗಿದೆ. ಕಾರನ್ನು ಸ್ಟಾರ್ಟ್, ಸ್ಟಾಪ್ ಮಾಡಲು ವಿಶಿಷ್ಟವಾದ ಫ್ಲಿಪ್ ಕ್ಯಾಪ್ ಹೊಂದಿರುವ ಸ್ವಿಚ್ ನೀಡಲಾಗಿದೆ, ಇದು ರೇಸಿಂಗ್ ಕಾರ್ ಅನುಭವ ನೀಡುತ್ತದೆ.

ಈ ಕಾರಿನಲ್ಲಿ ಬಲಿಷ್ಠವಾದ 79 kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ಕಂಪನಿಯು ಗರಿಷ್ಠ 683 ಕಿ.ಮೀ ರೇಂಜ್ ಕ್ಲೈಮ್ ಮಾಡಿದೆ. ಆದರೆ ವಾಸ್ತವಿಕ ರಸ್ತೆ ಪರಿಸ್ಥಿತಿಗಳಲ್ಲಿ ಸುಮಾರು 550 ಕಿ.ಮೀ ಮೈಲೇಜ್ ನಿರೀಕ್ಷಿಸಬಹುದು. ಈ ಸ್ಪೆಷಲ್ ಎಡಿಷನ್ Pack FE2 ಮತ್ತು Pack FE3 ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ. ಎವರೆಸ್ಟ್ ವೈಟ್, ಟ್ಯಾಂಗೋ ರೆಡ್, ಸ್ಟೆಲ್ತ್ ಬ್ಲ್ಯಾಕ್ ಮತ್ತು ಫೈರ್‌ಸ್ಟಾರ್ಮ್ ಆರೆಂಜ್ ಎಂಬ ಆಕರ್ಷಕ ಬಣ್ಣಗಳಲ್ಲಿ ಈ ಕಾರು ದೊರೆಯಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/ajith-kumar-gets-mahindra-be-6-formula-e-edition-electric-racing-car-features-that-impress-fans-447037.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo