Karan Adani: ಆರ್ಥಿಕ ಬೆಳವಣಿಗೆಗೆ ದಕ್ಷ ಮೂಲಸೌಕರ್ಯ ಹಾಗೂ ಸಾರಿಗೆ ಅತ್ಯಗತ್ಯ- ಕರಣ್ ಅದಾನಿ ಪ್ರತಿಪಾದನೆ | Karan Adani Said That Resilient Infrastructure Critical for Tackling Global Supply Chain Disruptions

Business

-Malathesha M

ಜಾಗತಿಕ ಸರಬರಾಜು ಸರಪಳಿಯು ಪದೇ, ಪದೇ ವ್ಯತ್ಯಯ ಸಮಸ್ಯೆ ಎದುರಿಸುತ್ತಿರುವ ಈ ಪರಿಸ್ಥಿತಿಯಲ್ಲಿ ಆರ್ಥಿಕ ಬೆಳವಣಿಗೆಗೆ ದಕ್ಷ ಮೂಲಸೌಕರ್ಯ ಜೊತೆಗೆ ಬಲಿಷ್ಠ ಸಾರಿಗೆಯ ಜಾಲ ಅತ್ಯಗತ್ಯ ಎಂದು ಕರಣ್ ಅದಾನಿ ಅವರು ಪ್ರತಿಪಾದಿಸಿದರು. ರಾಜಧಾನಿ ನವದೆಹಲಿಯಲ್ಲಿ ಮಾಧ್ಯಮ ಸಂಸ್ಥೆಯೊಂದರ ವಾರ್ಷಿಕ ನಾಯಕತ್ವ ಸಮಾವೇಶದಲ್ಲಿ ಮಾತನಾಡಿದ ಅದಾನಿ ಪೋರ್ಟ್ಸ್ ಹಾಗೂ ವಿಶೇಷ ಆರ್ಥಿಕ ವಲಯದ ಎಂಡಿ ಕರಣ್ ಅದಾನಿ ಅವರು, ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಬದಲಾಗುತ್ತಿರುವ ವ್ಯಾಪಾರ ಮಾರ್ಗ ಜಾಗತಿಕ ವ್ಯಾಪಾರ ವ್ಯವಸ್ಥೆಯಲ್ಲಿರುವ ದೌರ್ಬಲ್ಯ ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳು ಪ್ರಮುಖ ಸಮುದ್ರ ಮಾರ್ಗಗಳ ಭದ್ರತೆ ಕುರಿತು ಆತಂಕವನ್ನ ಮತ್ತಷ್ಟು ಹೆಚ್ಚಿಸಿವೆ ಎಂದು ಅವರು ಹೇಳಿದರು. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಮತ್ತು ಸೂಯೆಜ್ ಕಾಲುವೆ, ಮಲಕ್ಕಾ ಜಲಸಂಧಿ ಸೇರಿದಂತೆ ಹಲವು ಸಮುದ್ರ ಮಾರ್ಗಗಳಲ್ಲಿ ಉಂಟಾಗುವ ವ್ಯತ್ಯಯಗಳು ಜಾಗತಿಕ ಸರಬರಾಜು ಸರಪಳಿ ಮೇಲೆ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆ, ಆಯಾ ದೇಶದ ಆಡಳಿತ ವ್ಯವಸ್ಥೆ ಸಾರಿಗೆ ಮೂಲಸೌಕರ್ಯ ಬಲಪಡಿಸುವ ಜೊತೆ ವ್ಯಾಪಾರ ಮಾರ್ಗವನ್ನ ವೈವಿಧ್ಯಗೊಳಿಸುವುದು ಅಗತ್ಯವೆಂದು ಅವರು ಉದ್ಯಮಿ ಕರಣ್ ಅದಾನಿ ಸಲಹೆ ನೀಡಿದರು.

Karan Adani

ಕೋವಿಡ್ ಕಾಲದ ಸಮಸ್ಯೆ ಉಲ್ಲೇಖ

ಭಾರತದ ಅತಿದೊಡ್ಡ ಸಂಸ್ಥೆಗಳ ಪೈಕಿ ಒಂದಾಗಿರುವ ಅದಾನಿ ಪೋರ್ಟ್ಸ್ ಹಾಗೂ ವಿಶೇಷ ಆರ್ಥಿಕ ವಲಯದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಕರಣ್ ಅದಾನಿ ಅವರು, ಅದಾನಿ ಗ್ರೂಪ್ ನಿರ್ಮಿಸಿರುವ ಮೂಲಸೌಕರ್ಯ ವೇದಿಕೆ ದೇಶದ ವ್ಯಾಪಾರ, ಲಾಜಿಸ್ಟಿಕ್ಸ್ ಹಾಗೂ ಇಂಧನ ಭದ್ರತೆಯನ್ನು ಬೆಂಬಲಿಸುವ ರಾಷ್ಟ್ರೀಯ ಆಸ್ತಿಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂದರು. 2020ರ ನಂತರದಲ್ಲಿ, ಜಾಗತಿಕ ಸರಬರಾಜು ಸರಪಳಿ ಹಲವು ಆಘಾತ ಎದುರಿಸಿವೆ ಎಂದು ಅಭಿಪ್ರಾಯಪಟ್ಟರು. ಕೋವಿಡ್ ಸಾಂಕ್ರಾಮಿಕ ಕಾಲಘಟ್ಟ ಸೇರಿ ವಿವಿಧ ಭೌಗೋಳಿಕ ರಾಜಕೀಯ ಸಂಘರ್ಷವು ವಿಶ್ವದ ವ್ಯಾಪಾರ ಮಾದರಿಗಳು ಹಾಗೂ ಸರಬರಾಜು ತಂತ್ರಗಳನ್ನು ಮರು ರೂಪುಗೊಳಿಸಿವೆ ಎಂದರು.

ಈ ಬದಲಾದ ಪರಿಸ್ಥಿತಿಯಲ್ಲಿ ದೇಶಗಳು ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಬಲಿಷ್ಠ ಲಾಜಿಸ್ಟಿಕ್ಸ್ ವ್ಯವಸ್ಥೆ ನಿರ್ಮಾಣದ ಮೇಲೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ಕರಣ್ ಅದಾನಿ ಅವರು ಪ್ರಮುಖ ಸಲಹೆ ನೀಡಿದ್ದಾರೆ. ಬಂದರು, ಲಾಜಿಸ್ಟಿಕ್ಸ್, ಇಂಧನ & ವಿಮಾನ ನಿಲ್ದಾಣಗಳ ಕ್ಷೇತ್ರಗಳಲ್ಲಿ ವಿಸ್ತರಣೆ ಮಾಡುವ ಮೂಲಕ ಭಾರತದಲ್ಲಿ ವ್ಯಾಪಾರ, ಉತ್ಪಾದನೆ & ಆರ್ಥಿಕ ವಿಸ್ತರಣೆಗೆ ಅಗತ್ಯವಾದ ಸಾಮರ್ಥ್ಯ ಹೆಚ್ಚಿಸುವುದು ಕಂಪನಿಯ ಗುರಿಯಾಗಿದೆ ಎಂದರು.

ಭಾರತದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆ ಬಗ್ಗೆ ಸಂಸ್ಥೆಗೆ ಪೂರ್ಣ ವಿಶ್ವಾಸವಿದೆ ಎಂದು ತಿಳಿಸಿರುವ ಕರಣ್ ಅದಾನಿ ಅವರು, ಇದೀಗ ನಿರ್ಮಿಸಲಾಗುತ್ತಿರುವ ಮೂಲಸೌಕರ್ಯ ಸಂಪತ್ತುಗಳು ಭವಿಷ್ಯದಲ್ಲಿ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಲಿವೆ ಎಂದು ಅವರು ಅಭಿಪ್ರಾಯಪಟ್ಟರು. ದೇಶದಲ್ಲಿ ಅತ್ಯಂತ ದಕ್ಷ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಾಗುವುದರ ಜೊತೆಗೆ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಕೂಡ ಉತ್ಪಾದಿಸುವ ಪ್ರಮುಖ ಸಂಸ್ಥೆಯಾಗಿ ಬೆಳೆಯುವುದು ಸಂಸ್ಥೆಯ ದೀರ್ಘಕಾಲೀನ ಗುರಿ ಆಗಿದೆ ಎಂದರು.

ಲಾಜಿಸ್ಟಿಕ್ಸ್ ವೆಚ್ಚ ಕಡಿಮೆ ಮಾಡುವುದು ಪ್ರಮುಖ ಆದ್ಯತೆ ಆಗಿದ್ದು, ಬಂದರು, ಸಾರಿಗೆ ಜಾಲ, ವಿಮಾನ ನಿಲ್ದಾಣಗಳು ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಗಳ ನಡುವಿನ ಉತ್ತಮ ಸಮನ್ವಯವು ಸರಬರಾಜು ಸರಪಳಿಯ ಕಾರ್ಯಕ್ಷಮತೆ ಗಮನಾರ್ಹವಾಗಿ ಹೆಚ್ಚಿಸಬಹುದು ಎಂದು ಕರಣ್ ಅದಾನಿ ಅವರು ತಿಳಿಸಿದ್ದಾರೆ.

ಬಲವಾದ ಮೂಲಸೌಕರ್ಯ ನಿರ್ಮಾಣವಾದಾಗ ಅದರ ಹಿಂದೆ ವ್ಯಾಪಾರ ಹಾಗೂ ಆರ್ಥಿಕ ಚಟುವಟಿಕೆ ಸಹಜವಾಗಿ ಬೆಳೆಯುತ್ತದೆ ಎಂದರು. ದೀರ್ಘಕಾಲಿನ ದೃಷ್ಟಿಕೋನ ಸಾಧಿಸಲು ಮುಂದಿನ 5 ವರ್ಷಗಳಲ್ಲಿ ಪ್ರತಿ ವರ್ಷ ಸುಮಾರು 2 ಲಕ್ಷ ಕೋಟಿ ಹೂಡಿಕೆ ಮಾಡಲು ಅದಾನಿ ಗ್ರೂಪ್ ಯೋಜನೆಯನ್ನು ರೂಪಿಸಿದೆ ಎಂದರು. ಈ ಹೂಡಿಕೆ ಗ್ರೀನ್‌ಫೀಲ್ಡ್ ಮೂಲಸೌಕರ್ಯ ಯೋಜನೆಗಳಿಗೆ ವಿನಿಯೋಗ ಆಗಲಿದೆ ಎನ್ನುವ ಮಾಹಿತಿ ನೀಡಿದರು. ನವೀಕರಿಸಬಹುದಾದ ಶಕ್ತಿ, ವಿದ್ಯುತ್ ಪ್ರಸರಣ, ವಿಮಾನ ನಿಲ್ದಾಣ, ಲಾಜಿಸ್ಟಿಕ್ಸ್ ಜಾಲ ಹಾಗೂ ಡೇಟಾ ಸೆಂಟರ್‌ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

ನವೀಕರಿಸಬಹುದಾದ ಇಂಧನ ಕ್ಷೇತ್ರ ಅದಾನಿ ಗ್ರೂಪ್‌ನ ಪ್ರಮುಖ ಕೇಂದ್ರೀಯ ಕ್ಷೇತ್ರವಾಗಿದ್ದು, ಬ್ಯಾಟರಿ ಸಂಗ್ರಹಣೆ ಸೇರಿ ಹೊಸ ತಂತ್ರಜ್ಞಾನಗಳತ್ತ ಕೂಡ ಕಂಪನಿ ಗಮನ ಹರಿಸುತ್ತಿದೆ. ಇದರ ಜೊತೆಗೆ ಸಿಮೆಂಟ್ ಹಾಗು ಅಲ್ಯೂಮಿನಿಯಂ, ತಾಮ್ರ ಮತ್ತು ರಕ್ಷಣಾ ಉತ್ಪಾದನೆ ಕ್ಷೇತ್ರದಲ್ಲು ವಿಸ್ತರಣೆ ನಡೆಯುತ್ತಿದೆ ಎಂಬ ಬಗ್ಗೆ ತಿಳಿಸಿದ ಅವರು, ಇವು ದೊಡ್ಡ ಮಟ್ಟದ ಮೂಲಸೌಕರ್ಯ ಅಭಿವೃದ್ಧಿಗೆ ಕೂಡ ಬೆಂಬಲ ನೀಡುವ ಕ್ಷೇತ್ರಗಳಾಗಿವೆ. ವಿಮಾನಯಾನ ಕ್ಷೇತ್ರದಲ್ಲಿ 2030 ಒಳಗೆ ವಿಮಾನ ನಿಲ್ದಾಣ ಜಾಲದಲ್ಲಿ ಪ್ರಯಾಣಿಕರನ್ನ ನಿರ್ವಹಿಸುವ ಸಾಮರ್ಥ್ಯ 100 ಮಿಲಿಯನ್‌ನಿಂದ ಸುಮಾರು 200 ಮಿಲಿಯನ್‌ಗೆ ಹೆಚ್ಚಿಸುವ ಯೋಜನೆ ಸಂಸ್ಥೆ ಹೊಂದಿದೆ ಎಂದು ತಿಳಿಸಿದರು.

Disclaimer: This content was automatically imported from a third-party source via RSS feed. The original source is: https://kannada.oneindia.com/news/business/karan-adani-said-that-resilient-infrastructure-critical-for-tackling-global-supply-chain-disruptions-011-447069.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo