
Sports
oi-Madhusudhan KR
Robin Uthappa: ಅಂಡರ್ 19 ವಿಶ್ವಕಪ್ 2026 ಗೆಲುವಿನ ಸೂತ್ರದಾರ ಯುವ ಸ್ಟಾರ್ ಬ್ಯಾಟರ್ ವೈಭವರ್ ಸೂರ್ಯವಂಶಿ ಅವರು ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ ಪರ ಕಣಕ್ಕಿಳಿಯಲಿದ್ದು, ಇದೀಗ ಅಭ್ಯಾಸದಲ್ಲಿ ಕಾರ್ಯನಿರತರಾಗಿದ್ದಾರೆ. ಈ ನಡುವೆಯೇ ಐಪಿಎಲ್ ಆರಂಭಕ್ಕೆ ಮುನ್ನ, ವೈಭವ್ಗೆ ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಎಚ್ಚರಿಕೆಯ ಸಲಹೆಯನ್ನು ನೀಡಿದ್ದಾರೆ. ಇದು ಭಾರೀ ವೈರಲ್ ಆಗುತ್ತಿದೆ.
ಕಳೆದ ಐಪಿಎಲ್ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವೈಭವ್ ಸೂರ್ಯವಂಶಿ, ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಉತ್ತಪ್ಪ ಅವರ ಪ್ರಕಾರ, ಈ ಬಾರಿ ಆಟಗಾರನಿಗೆ ಸವಾಲುಗಳು ಹೆಚ್ಚಾಗಲಿವೆ. “ಕಳೆದ 12 ತಿಂಗಳುಗಳ ಕಾಲ (ಒಂದು ವರ್ಷ) ವೈಭವ್ ಸೂರ್ಯವಂಶಿ ಅವರ ಆಟವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ಪ್ರತಿಭಾವಂತರೇ, ಆದರೆ ಅವರ ಬ್ಯಾಟಿಂಗ್ನಲ್ಲಿ ಈಗಲೂ ಸ್ವಲ್ಪ ಮಟ್ಟಿಗೆ ಅದೃಷ್ಟ ಕೆಲಸ ಮಾಡುತ್ತಿದೆ,” ಎಂದು ಕರ್ನಾಟಕದ ಕೊಡಗಿನ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

‘ಎದುರಾಳಿ ಬೌಲರ್ಗಳ ಕಣ್ಣು ವೈಭವ್ ಮೇಲೆ’
“ಕಳೆದ ಸೀಸನ್ನಲ್ಲಿ ವೈಭವ್ ಹೊಸಬರಾಗಿದ್ದರಿಂದ ಎದುರಾಳಿ ಬೌಲರ್ಗಳಿಗೆ ಅವರ ಬಲಹೀನತೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆದರೆ, ಈ ಬಾರಿ ತಂಡಗಳು ವೈಭವ್ ಅವರ ಆಟವನ್ನು ವಿಶ್ಲೇಷಣೆ ಮಾಡಿದ್ದು, ಅವರನ್ನು ಕಟ್ಟಿಹಾಕಲು ಹೊಸ ತಂತ್ರಗಳನ್ನು ರೂಪಿಸುತ್ತಿವೆ. ವೈಭವ್ಗೆ ಕೇವಲ ಇನ್ನೊಂದು ಸೀಸನ್ ಅಷ್ಟೇ ಅಲ್ಲ, ಇದು ಅವರ ವೃತ್ತಿಜೀವನದ ದೃಷ್ಟಿಯಿಂದ ಒಂದು ಪ್ರಮುಖ ಕಲಿಕಾ ಹಂತವಾಗಲಿದೆ,” ಎಂದು ಉತ್ತಪ್ಪ ಹೇಳಿದ್ದಾರೆ.
ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ
ಹೀಗೆ ವೈಭವ್ ಸೂರ್ಯವಂಶಿ ಈ ಬಾರಿ ರನ್ ಗಳಿಸುವುದು ಖಚಿತವಾದರೂ, ಕಳೆದ ಬಾರಿಯಂತೆ ಸುಲಭವಾಗಿ ರನ್ ಗಳಿಸಲು ಸಾಧ್ಯ ಆಗುವುದಿಲ್ಲ. ವಿರೋಧಿ ತಂಡಗಳ ಬೌಲಿಂಗ್ ದಾಳಿಯನ್ನು ಎದುರಿಸುವ ಮೂಲಕ ಅವರು ತಮ್ಮ ಆಟವನ್ನು ಮತ್ತಷ್ಟು ಸುಧಾರಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ ನೀಡಿದ್ದಾರೆ.
-

ಐಸಿಸಿ ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿರುವ ಗೌತಮ್ ಗಂಭೀರ್ಗೆ ‘ದಾದಾ’ ಸೌರವ್ ಗಂಗೂಲಿ ಎಚ್ಚರಿಕೆ
-

ಐಪಿಎಲ್ ಆರಂಭಕ್ಕೂ ಮುನ್ನವೇ ಆರ್ಸಿಬಿಗೆ ಗಾಯದ ಬಿಸಿ; ಸ್ಟಾರ್ ವೇಗಿ ಹೇಜಲ್ವುಡ್ ಆಡುವುದು ಅನುಮಾನ
-

ಭಾರತ ವಿಶ್ವಕಪ್ ಗೆದ್ದ ಬೆನ್ನಲ್ಲೇ ಶುಭ್ಮನ್ ಗಿಲ್ ವಿರುದ್ಧ ಸಂಜು ಸ್ಯಾಮ್ಸನ್ ಫೋಟೋ ಎಡಿಟ್ ಆರೋಪ: ಇಲ್ಲಿದೆ ಅಸಲಿ ಸತ್ಯ
-

ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ
-

Hardik Pandya: ರಾಷ್ಟ್ರಧ್ವಜ ಹೊದ್ದುಕೊಂಡು ಪ್ರೇಯಸಿ ಜೊತೆ ಮಲಗಿದ್ದ ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲು
-

Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ
-

Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು
-

ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ
-

Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್
-

Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ
-

ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion
-

ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/robin-uthappa-issues-warning-for-vaibhav-suryavanshi-ahead-of-ipl-2026-know-complete-details-447099.html. xn--babytilbehr-pgb.com does not claim ownership of this content. All rights remain with the original publisher.
