RCB Yash Dayal Marriage: ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್‌ಸಿಬಿ ಸ್ಟಾರ್ ಯಶ್ ದಯಾಳ್: ಫೋಟೋಗಳು ವೈರಲ್ | RCB Star Yash Dayal Marries Content Creator Shweta Pundir in Private Ceremony: Photos huge Viral

Sports

oi-Madhusudhan KR

RCB Yash Dayal Marriage: ಇನ್ನೂ ಕೆಲವೇ ದಿನಗಳಲ್ಲಿ ಐಪಿಎಲ್‌ 2026 ಹಬ್ಬ ಆರಂಭವಾಗಲಿದೆ. ಇದಕ್ಕೂ ಮುನ್ನ
ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬೌಲರ್ ಯಶ್ ದಯಾಳ್ ಅವರು ಕಂಟೆಂಟ್ ಕ್ರಿಯೇಟರ್ ಶ್ವೇತಾ ಪುಂಡಿರ್ ಅವರೊಂದಿಗೆ ಸದ್ದಿಲ್ಲದೆ ದಾಂಪತ್ಯೆ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಫೆಬ್ರವರಿ 4, 2026ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ವಿವಾಹವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಮದುವೆಯಲ್ಲಿ ಕೇವಲ ಕುಟುಂಬದವರು ಮತ್ತು ಆಪ್ತ ಸಂಬಂಧಿಗಳು ಮಾತ್ರ ಭಾಗವಹಿಸಿದ್ದರು. ಯಶ್ ದಯಾಳ್ ಅವರು ಈವರೆಗೆ ಮದುವೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ಶ್ವೇತಾ ಪುಂಡಿರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದಯಾಳ್‌ ಅವರೊಂದಿಗಿನ ರೀಲ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.

RCB Star Yash Dayal Marries Content Creator Shweta Pundir in Private Ceremony Photos huge Viral

ಯಶ್ ದಯಾಳ್ ಪತ್ನಿ ಶ್ವೇತಾ ಪುಂಡಿರ್ ಯಾರು?

ಶ್ವೇತಾ ದೆಹಲಿಯ ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮತ್ತು ವ್ಲಾಗರ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಗೆ 5,87,000ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಶ್ವೇತಾ ಅವರು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೆ, ವೃತ್ತಿಪರವಾಗಿಯೂ ಗುರುತಿಸಿಕೊಂಡಿದ್ದಾರೆ. ಇವರು ‘ಇಂಟರ್‌ನ್ಯಾಷನಲ್ ಲೆಜೆಂಡ್ಸ್ ಲೀಗ್‌ನಲ್ಲಿ ಬ್ರಾಡ್‌ಕಾಸ್ಟರ್ ಆಗಿ ಕೆಲಸ ಮಾಡಿದ್ದಾರೆ.

ಯಶ್ ದಯಾಳ್ ಅವರು 2025ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಆರ್‌ಸಿಬಿ ತಂಡದ ಪ್ರಮುಖ ಭಾಗವಾಗಿದ್ದರು. ಈ ವರ್ಷವೂ ಅವರು ಆರ್‌ಸಿಬಿ ಪರ ಕಣಕ್ಕಿಳಿಯಲಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ದಯಾಳ್ ಮತ್ತು ಶ್ವೇತಾ ಇಬ್ಬರೂ ತಮ್ಮದೇ ಕ್ಷೇತ್ರಗಳಲ್ಲಿ ಯಶಸ್ಸನ್ನು ಕಂಡಿರುವ ಜೋಡಿಯಾಗಿದ್ದಾರೆ. ಈ ಜೋಡಿಯ ಮದುವೆಯ ಸುದ್ದಿಯು ಆರ್‌ಸಿಬಿ ಅಭಿಮಾನಿಗಳಲ್ಲಿ ಮತ್ತು ಕ್ರೀಡಾ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

ಆರ್‌ಸಿಬಿ ಖರೀದಿಸಲು ಮುಂದೆ ಬಂದ ಮತ್ತೊಂದು ಸಂಸ್ಥೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸುವ ರೇಸ್‌ನಲ್ಲಿ ಈಗ ಒಂದು ಹೊಸ ಮತ್ತು ಪ್ರಬಲ ಸಂಸ್ಥೆಯ ಹೆಸರು ಕೇಳಿಬರುತ್ತಿದೆ. ಸ್ವೀಡನ್‌ನ ಖಾಸಗಿ ಇಕ್ವಿಟಿ ಸಂಸ್ಥೆಯಾದ ‘EQT ಗ್ರೂಪ್’ ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸಲು ಆಸಕ್ತಿ ತೋರಿದೆ. ಮೂಲಗಳ ಪ್ರಕಾರ, ಈ ಸಂಸ್ಥೆಯು ಸುಮಾರು $2 ಶತಕೋಟಿ ಅಮೆರಿಕನ್ ಡಾಲರ್‌ನಿಂದ $2.1 ಶತಕೋಟಿ ಡಾಲರ್ (ಭಾರತೀಯ ರೂಪಾಯಿಯಲ್ಲಿ ಸುಮಾರು 16,500 ಕೋಟಿ – 17,500 ಕೋಟಿ ರೂ.ಗಳಿಗೂ ಹೆಚ್ಚು) ಮೌಲ್ಯದ ಬಿಡ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳಿಮದ ತಿಳಿದುಬಂದಿದೆ.

ಈ ಮೊತ್ತವು ಅಬ್ರಾಂ ಗ್ಲೇಜರ್ ನೇತೃತ್ವದ ‘ಲ್ಯಾನ್ಸರ್ ಕ್ಯಾಪಿಟಲ್’ ಸಲ್ಲಿಸಿದ್ದ ಸುಮಾರು $1.8 ಬಿಲಿಯನ್ ಮೌಲ್ಯದ ಬಿಡ್‌ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಮಾರಾಟ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಬಿಡ್‌ಗಳನ್ನು ಸಲ್ಲಿಸಲು ಮಾರ್ಚ್ 16, 2026 ಅಂತಿಮ ಗಡುವಾಗಿದೆ. ಆರ್‌ಸಿಬಿ ಫ್ರಾಂಚೈಸಿಯು ಪ್ರಸ್ತುತ ‘ಡಿಯಾಜಿಯೊ’ನ ಭಾರತೀಯ ಅಂಗಸಂಸ್ಥೆಯಾದ ‘ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್’ ಒಡೆತನದಲ್ಲಿದೆ. 2025ರ ನವೆಂಬರ್‌ನಲ್ಲಿ, ಕಂಪನಿಯು ತನ್ನ ಬಂಡವಾಳದ ಕಾರ್ಯತಂತ್ರದ ವಿಮರ್ಶೆಯ ಭಾಗವಾಗಿ ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟಕ್ಕಿಟ್ಟಿದೆ. ಈ ಮಾರಾಟ ಪ್ರಕ್ರಿಯೆಯಲ್ಲಿ ಆರ್‌ಸಿಬಿಯ ಪುರುಷರ ತಂಡ ಮತ್ತು ಮಹಿಳಾ ತಂಡ ಎರಡು ಸೇರಿವೆ. ಒಟ್ಟಾರೆಯಾಗಿ, ಮಾರ್ಚ್ 31, 2026ರೊಳಗೆ ಈ ಸಂಪೂರ್ಣ ಪ್ರಕ್ರಿಯೆಯು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಫ್ರಾಂಚೈಸಿ ಮಾರಾಟಗಳಲ್ಲಿ ಒಂದಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rcb-star-yash-dayal-marries-content-creator-shweta-pundir-in-private-ceremony-photos-huge-viral-447201.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo