KD Song Controversy: ಸೆರಗ ಸರ್ಸೆ ಹಾಡು ವಿವಾದ: ಪ್ರೇಮ್‌ ವಿರುದ್ಧ ದೂರು, ನೋಟಿಸ್‌ ಬೆನ್ನಲ್ಲೇ ಹಿಂದಿ ಹಾಡು ಡಿಲೀಟ್‌ | Prem Sarse Song Controversy After NHRC Notice Hindi Version Deleted from Kannada KD The Devil

Entertainment

oi-Manohara M

ಸ್ಯಾಂಡಲ್‌ವುಡ್‌ ನಿರ್ದೇಶಕ ಪ್ರೇಮ್ ನಿರ್ದೇಶನದ ‘ಕೆಡಿ’ (KD-The Devil) ಸಿನಿಮಾದ ಹಾಡಿನ ವಿವಾದ ಈಗ ಕೇವಲ ಸೋಷಿಯಲ್ ಮೀಡಿಯಾಗೆ ಸೀಮಿತವಾಗಿಲ್ಲ, ಬದಲಾಗಿ ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ಧ್ರುವ ಸರ್ಜಾ ನಟನೆಯ ಮತ್ತು ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾದ “ಸರ್ಸೆ ನಿನ್ನ ಸೆರಗ ಸರ್ಸೆ” (ಹಿಂದಿಯಲ್ಲಿ ‘ಸರ್ಕೆ ಚುನರ್ ತೇರಿ ಸರ್ಕೆ’) ಹಾಡು ಈಗ ದೊಡ್ಡ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಹಾಡಿನಲ್ಲಿ ಬಳಸಲಾದ ಅಶ್ಲೀಲ ಮತ್ತು ಡಬಲ್‌ ಮೀನಿಂಗ್‌ ಸಾಹಿತ್ಯದ ವಿರುದ್ಧ ಕೇಳಿಬಂದ ಸಾರ್ವಜನಿಕ ಆಕ್ರೋಶದ ಬೆನ್ನಲ್ಲೇ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ.

ದೆಹಲಿಯಲ್ಲಿ ದೂರು ದಾಖಲು

ಈ ಹಾಡಿನಲ್ಲಿ ಮಹಿಳೆಯರನ್ನು ಅವಮಾನಿಸುವಂತಹ ಮತ್ತು ಅಶ್ಲೀಲತೆಯನ್ನು ಪ್ರಚೋದಿಸುವಂತಹ ಸಾಹಿತ್ಯ ಹಾಗೂ ದೃಶ್ಯಗಳಿವೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ಅವರು ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಹಾಡಿನಲ್ಲಿರುವ ಲೈಂಗಿಕ ಪ್ರಚೋದಕ ಸಾಹಿತ್ಯವು ಸಾರ್ವಜನಿಕ ವೀಕ್ಷಣೆಗೆ ಯೋಗ್ಯವಲ್ಲ ಮತ್ತು ಇದು ಯುವ ಪೀಳಿಗೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ದೂರಿದ್ದಾರೆ.

Prem Sarse Song Controversy

ಮಾನವ ಹಕ್ಕುಗಳ ಆಯೋಗದ ಕಠಿಣ ಸೂಚನೆ ಮತ್ತು ಜನರ ತೀವ್ರ ವಿರೋಧಕ್ಕೆ ಮಣಿದಿರುವ ಕೆಡಿ ಚಿತ್ರತಂಡ, ಇದೀಗ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲತಾಣಗಳಿಂದ ಹಾಡಿನ ಹಿಂದಿ ಆವೃತ್ತಿಯನ್ನು ಅಧಿಕೃತವಾಗಿ ತೆಗೆದುಹಾಕಿದೆ. ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಣಿಸಿಕೊಂಡಿದ್ದ ಈ ಹಾಡಿನ ವಿರುದ್ಧ ಇಡೀ ಸ್ಯಾಂಡಲ್‌ವುಡ್ ಕೆಂಡಾಮಂಡಲವಾಗಿತ್ತು.

ರಕೀಬ್ ಆಲಂ ಬರೆದಿದ್ದ ಈ ಹಾಡಿನ ಸಾಹಿತ್ಯ ಮತ್ತು ಡಬಲ್‌ ಮೀನಿಂಗ್‌ ಸಂಭಾಷಣೆಗಳ ವಿರುದ್ಧ ನೆಟ್ಟಿಗರು ಪ್ರೇಮ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಸಿನಿಮಾ ಈಗ ಹಾಡಿನ ವಿವಾದದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸದ್ಯಕ್ಕೆ ಹಾಡನ್ನು ತೆಗೆದುಹಾಕಿರುವ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ವಿಲ್’ ಚಿತ್ರದ ವಿವಾದಿತ ಹಾಡು “ಸರ್ಸೆ ನಿನ್ನ ಸೆರಗ ಸರ್ಸೆ” (ಹಿಂದಿಯಲ್ಲಿ ‘ಸರ್ಕೆ ಚುನರ್ ತೇರಿ ಸರ್ಕೆ’) ಬಿಡುಗಡೆಯಾದ ಕೇವಲ ಒಂದು ದಿನದಲ್ಲೇ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಹಾಡಿನಲ್ಲಿದ್ದ ಅಶ್ಲೀಲ ದೃಶ್ಯಗಳು ಮತ್ತು ಸಾಹಿತ್ಯದ ವಿರುದ್ಧ ಸಾರ್ವಜನಿಕರು ಹಾಗೂ ಕಾನೂನು ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಚಿತ್ರತಂಡ ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್ ಹಾಗೂ ಇತರ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಅಧಿಕೃತವಾಗಿ ತೆಗೆದುಹಾಕಿದೆ.

Prem Sarse Song Controversy

ಸೆನ್ಸಾರ್ ಮಂಡಳಿಗೆ ದೂರು

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಅಶ್ಲೀಲ ಸಾಹಿತ್ಯದ ಬಳಕೆಯ ಬಗ್ಗೆ ನೋಟಿಸ್ ನೀಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ, ಅಡ್ವೋಕೇಟ್ ವಿನೀತ್ ಜಿಂದಾಲ್ ಅವರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಮತ್ತು ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ದೂರು ನೀಡಿದ್ದು, ಈ ಹಾಡನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಮುಖ್ಯವಾಗಿ ಅಪ್ರಾಪ್ತ ವಯಸ್ಕರ ಮೇಲೆ ಈ ಹಾಡು ಕೆಟ್ಟ ಪರಿಣಾಮ ಬೀರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತೀವ್ರ ವಿರೋಧದ ನಡುವೆಯೂ ಹಾಡಿನ ಹಿಂದಿ ಆವೃತ್ತಿಯನ್ನು ಮಾತ್ರ ತೆಗೆದುಹಾಕಲಾಗಿದ್ದು, ಕನ್ನಡ ಆವೃತ್ತಿಯು ಸದ್ಯಕ್ಕೆ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಆದರೆ ಇಡೀ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳ ಬಗ್ಗೆ ಕನ್ನಡಿಗರು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ‘ಜೋಗಿ’ ಮತ್ತು ‘ಎಕ್ಸ್‌ಕ್ಯೂಸ್ ಮಿ’ ಅಂತಹ ಹಿಟ್ ಸಿನಿಮಾಗಳನ್ನು ನೀಡಿದ್ದ ಪ್ರೇಮ್, ಈಗ ಕೇವಲ ಪ್ರಚಾರಕ್ಕಾಗಿ ಇಂತಹ ‘ಐಟಂ ಸಾಂಗ್’ ಮತ್ತು ಅಶ್ಲೀಲ ಸಾಹಿತ್ಯಕ್ಕೆ ಮೊರೆ ಹೋಗಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಣಿಸಿಕೊಂಡಿರುವ ಈ ಹಾಡು ಸೃಜನಶೀಲತೆಗಿಂತ ಅಶ್ಲೀಲತೆಯಿಂದಲೇ ಕೂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/prem-sarse-song-controversy-after-nhrc-notice-hindi-version-deleted-from-kannada-kd-the-devil-447381.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo