Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು | Byadagi Chilli Middle East Crisis Hits Red Gold: Gulf Tensions Trigger New Trouble for Karnataka Farmers

Karnataka

oi-Hitesh Y

Byadagi Chilli: ಕೆಂಪು ಚಿನ್ನ ಎಂದೇ ಖ್ಯಾತಿ ಗಳಿಸಿರುವ ಹಾಗೂ ಭಾರತದ ವಿಶೇಷ ಬ್ಯಾಡಗಿ ಮೆಣಸಿನಕಾಯಿ ಮಾರಾಟದಲ್ಲಿ ಹೊಸ ಸಂಕಷ್ಟ ಎದುರಾಗಿದ್ದು, ರೈತರು ಕಂಗಾಲಾಗಿದ್ದಾರೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದರ ಪರಿಣಾಮ ಭಾರತದ ವಿವಿಧ ವಸ್ತುಗಳ ಮೇಲಾಗಿದ್ದು, ಇದೀಗ ಕೆಂಪು ಮೆಣಸಿನಕಾಯಿ ಮಾರಾಟಕ್ಕೂ ಸಂಕಷ್ಟ ಶುರುವಾಗಿದೆ.

ಅಮೆರಿಕ, ಇಸ್ರೇಲ್ Vs ಇರಾನ್ ಯುದ್ಧದಿಂದಾಗಿ ಕಚ್ಚಾ ತೈಲ ಗ್ಯಾಸ್ ಸಿಲಿಂಡರ್ ಮಾತ್ರವಲ್ಲ ವಿವಿಧ ವಸ್ತುಗಳ ಖರೀದಿ ಹಾಗೂ ಮಾರಾಟದ ಮೇಲೆ ಭಾರೀ ಪರಿಣಾಮ ಎದುರಾಗಿದೆ. ಮಧ್ಯಪ್ರಾಚ್ಯದ ಯುದ್ಧವು ಗಲ್ಫ್ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ದೊಡ್ಡ ಕಂಟೇನರ್ ಹಡಗುಗಳನ್ನು ಬಹುತೇಕ ನಿಂತಲ್ಲೇ ನಿಂತಿವೆ. ಇದರಿಂದ ಕರ್ನಾಟಕದ ಹಾವೇರಿ ಜಿಲ್ಲೆಯ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿಯ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇದೇ ಕೃಷಿಯನ್ನು ನಂಬಿಕೊಂಡಿದ್ದ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈ ಮತ್ತು ಚೆನ್ನೈ ಬಂದರುಗಳಲ್ಲಿ ಕೆಲವು ಕಂಟೇನರ್‌ಗಳು ಸಿಲುಕಿಕೊಂಡಿದ್ದು, ನೂರಾರು ಕೋಟಿ ಮೌಲ್ಯದ ಮೆಣಸಿನಕಾಯಿ ಸರಬರಾಜು ಆಗಿಲ್ಲ. ಹೀಗಾಗಿ, ಮಾರುಕಟ್ಟೆಯಲ್ಲಿ ನಕಾರಾತ್ಮಕ ಪರಿಣಾಮ ಎದುರಾಗಿದೆ.

Byadagi Chilli

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮದಿಂದಾಗಿ ಇರಾನ್‌ನ ಬ್ಯಾಡಗಿ ವ್ಯಾಪಾರಿಗಳಿಗೆ ಕೋಟಿಗಟ್ಟಲೆ ಬಾಕಿ ಹಣವನ್ನು ಪಾವತಿಸಲು ಸಾಧ್ಯವಾಗಿಲ್ಲ. ಇದು ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿಗಳಿಗೆ ಸಂಕಷ್ಟವನ್ನು ತಂದೊಡ್ಡಿದೆ. ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿಯನ್ನು ಗಲ್ಫ್ ದೇಶಗಳಿಗೆ ರಫ್ತು ಮಾಡುವುದು ಸಂಪೂರ್ಣವಾಗಿ ನಿಂತುಹೋಗಿದೆ, ಆದರೆ ಇತರ ದೇಶಗಳಿಗೆ ಮೆಣಸಿನಕಾಯಿ ರಫ್ತು ಮಾಡುವ ವೆಚ್ಚ ಹೆಚ್ಚಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವು ಪರೋಕ್ಷವಾಗಿ ಗಲ್ಫ್‌ರಾಷ್ಟ್ರಗಳ ಮೇಲೂ ಸಹ ಆಗಿದೆ. ಗಲ್ಫ್‌ ರಾಷ್ಟ್ರಗಳು ಈ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿಲ್ಲ, ಅಲ್ಲದೆ ಯುದ್ಧಕ್ಕೆ ಸಂಬಂಧಿಸಿದಂತೆ ಯಾರಿಗೂ ಬೆಂಬಲವನ್ನೂ ಸಹ ಸೂಚಿಸಿಲ್ಲ. ಆದರೆ, ಗಲ್ಫ್‌ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ತೀವ್ರ ದಾಳಿಯನ್ನು ಮುಂದುವರಿಸಿದೆ. ಇದರ ಪರಿಣಾಮವು ಬ್ಯಾಡಗಿ ಮೆಣಸಿನಕಾಯಿಯ ಮೇಲೂ ಆಗಿದೆ.

ಬ್ಯಾಡಗಿ ಮೆಣಸಿನಕಾಯಿಯನ್ನು ಸಾಂಬಾರು ಪದಾರ್ಥಗಳು ಮತ್ತು ಸೌಂದರ್ಯವರ್ಧಕಗಳ ತಯಾರಿಕೆಗೂ ಸಹ ಬಳಕೆ ಮಾಡಲಾಗುತ್ತದೆ. ಹೀಗಾಗಿ, ಬ್ಯಾಡಗಿ ಮೆಣಸಿನ ಕಾಯಿಯನ್ನು ಮಲೇಷ್ಯಾ, ಇಂಡೋನೇಷ್ಯಾ, ಬಾಲಿ, ಥೈಲ್ಯಾಂಡ್ ಹಾಗೂ ಸಿಂಗಾಪುರ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಇರಾನ್, ಇಸ್ರೇಲ್ ಮತ್ತು ಅಮೆರಿಕಗೆ ಮೆಣಸಿನಕಾಯಿ ರಫ್ತು ಮಾಡಲು ಕಂಟೇನರ್‌ಗಳನ್ನು ಬಾಡಿಗೆಗೆ ಪಡೆಯುವ ವೆಚ್ಚವು ಯುದ್ಧದ ನಂತರ ದುಬಾರಿ ಆಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮೆಣಸಿನಕಾಯಿಯ ಬೆಲೆ ಕಡಿಮೆ ಆಗುವ ಆತಂಕ ವ್ಯಾಪಾರಿಗಳಲ್ಲಿ ಎದುರಾಗಿದೆ. ಪ್ರತಿ ತಿಂಗಳು ಸಾವಿರಾರು ಟನ್ ಮೆಣಸಿನ ಪುಡಿಯನ್ನು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಕಳೆದ 15 ದಿನಗಳಿಂದ ರಫ್ತು ಸ್ಥಗಿತಗೊಂಡಿದೆ.

Byadagi Chilli: ಬ್ಯಾಡಗಿ ಮೆಣಸಿನಕಾಯಿ ಬೆಳೆಗಾರರಿಗೆ ತಪ್ಪದ ಸಂಕಷ್ಟ

ಇನ್ನು ಹಾವೇರಿಯ ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿಗಳಿಗೆ ಸಂಕಷ್ಟ ಮುಂದುವರಿದಿದೆ. ಕಳೆದ ಬಾರಿ ಅತಿಯಾದ ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಪೂರೈಕೆ ಹೆಚ್ಚಾಗಿ, ಬೆಲೆ ಕುಸಿತ ಮತ್ತು ಗುಣಮಟ್ಟ ಕುಸಿದಿತ್ತು. ಈ ವರ್ಷ, ಮೆಣಸಿನಕಾಯಿ ರೈತರು ಕಡಿಮೆ ಮೆಣಸಿನಕಾಯಿ ಬೆಳೆದರು, ಮತ್ತು ಆರಂಭದಲ್ಲಿ ಅದು ಉತ್ತಮ ಬೆಲೆ ಸಿಕ್ಕಿತ್ತು. ಆದರೆ ಕಳೆದ ವರ್ಷ ನಷ್ಟ ಅನುಭವಿಸಿದ ಅನೇಕ ರೈತರು ಇತರ ಬೆಳೆಗಳಿಗೆ ಬದಲಾಯಿಸಿದ್ದು. ಇದೀಗ ಈ ಬಾರಿ ಮಧ್ಯಪ್ರಾಚ್ಯ ಯುದ್ಧವು ಸಂಕಷ್ಟವನ್ನು ತಂದೊಡ್ಡಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/byadagi-chilli-middle-east-crisis-hits-red-gold-gulf-tensions-trigger-new-trouble-for-karnataka-far-447411.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo