
Entertainment
oi-Hitesh Y
Nora Fatehi: ಬಾಲಿವುಡ್ ನಟಿ ನೋರಾ ಫತೇಹಿ ಅವರು ಅಭಿನಯಿಸಿರುವ ಸರ್ಸೆ ನಿನ್ನ ಸೆರಗ ಹಾಡು ಇದೀಗ ದೇಶದಾದ್ಯಂತ ವಿವಾದಕ್ಕೆ ಕಾರಣ ಆಗಿದೆ. ಹಾಡು ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ನೋರಾ ಫತೇಹಿ ಅವರು ವಿಡಿಯೋದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನನಗೆ ಹೇಳಿದ್ದು ಒಂದು, ಮಾಡಿದ್ದು ಇನ್ನೊಂದು: ನನ್ನನ್ನು ನಂಬಿ ಪ್ಲೀಸ್ ಎಂದ ನೋರಾ ಫತೇಹಿ ಅವರು ಹೇಳಿದ್ದಾರೆ.
ನಿರ್ದೇಶಕ ಪ್ರೇಮ್ ಅವರು ನಿರ್ದೇಶಿಸಿರುವ ಕೆಡಿ ಸಿನಿಮಾದ ಸರ್ಸೆ ನಿನ್ನ ಸೆರಗ ಹಾಡು ಇದೀಗ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಹಾಡಿನ ಬಗ್ಗೆ ನಟಿ ನೋರಾ ಫತೇಹಿ ಅವರು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ಹಾಡಿನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಸಾಹಿತ್ಯ ಬರೆಯಲಾಗಿದೆ ಎನ್ನುವ ವಿಚಾರವು ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಹಿಂದಿ ವರ್ಷನ್ (Sarke Chunar Teri Sarke) ಹಾಡನ್ನು ಭಾರೀ ವಿರೋಧ ವ್ಯಕ್ತವಾದ ಕೂಡಲೇ ಡಿಲೀಟ್ ಮಾಡಲಾಗಿದೆ. ಕನ್ನಡದಲ್ಲೂ ಈ ಹಾಡಿನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಲವರು ಪ್ರೇಮ್ ಅವರಿಂದ ಈ ರೀತಿಯ ಹಾಡು, ಸಾಹಿತ್ಯ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದರು. ಇದೀಗ ಬಿಡುಗಡೆ ಆಗಿರುವ ಹಾಡಿನಲ್ಲಿ ಇಷ್ಟೊಂದು ಕೆಟ್ಟದಾದ ಸಾಹಿತ್ಯ ಇದೆ ಎನ್ನುವ ವಿಚಾರವೇ ನನಗೆ ಗೊತ್ತಿರಲಿಲ್ಲ ಎಂದು ನೋರಾ ಫತೇಹಿ ಅವರು ಇನ್ಸಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿದ್ದಾರೆ.

ಇದೀಗ ನಟಿ ನೋರಾ ಫತೇಹಿ ಅವರ ಸ್ಪಷ್ಟನೆ ವಿಡಿಯೋವು ವೈರಲ್ ಆಗುತ್ತಿದ್ದು ಸಾರ್ವಜನಿಕರಿಂದ ಈ ವಿಡಿಯೋಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Nora Fatehi: ನನಗೆ ಹಾಡಿನ ಅರ್ಥ ಗೊತ್ತಿರಲಿಲ್ಲ
ನಿರ್ದೇಶಕ ಪ್ರೇಮ್ ಅವರು ನಿರ್ದೇಶಿಸಿರುವ ಕೆಡಿ ಸಿನಿಮಾದ ಸರ್ಸೆ ನಿನ್ನ ಸೆರಗ ಹಾಡು ಭಾರೀ ವಿವಾದ ಸ್ವರೂಪವನ್ನು ಪಡೆದುಕೊಂಡಿದೆ. ಇದೀಗ ಈ ವಿಚಾರವಾಗಿ ರಿಯಾಕ್ಟ್ ಮಾಡಿರುವ ನೋರಾ ಅವರು ನನಗೆ ಹಾಡಿನ ಅರ್ಥವೇ ಗೊತ್ತಿರಲಿಲ್ಲ. ನನ್ನ ಅನುಮತಿ ಇಲ್ಲದೆ ಎಐ ಇಮೇಜ್ ಬಳಸಿಕೊಂಡಿದ್ದಾರೆ. ಜನ ನಟಿಯರನ್ನು ದೂರುವುದು ತಪ್ಪು. ಚಿತ್ರ ನಿರ್ಮಾಣ ತಂಡವನ್ನೇ ಇದಕ್ಕೆ ಹೊಣೆ ಮಾಡಬೇಕು. ಇನ್ನು ಸರ್ಕಾರದ (ನಿಷೇಧ) ನಿರ್ಧಾರವು ಸ್ವಾಗತಾರ್ಹವಾಗಿದೆ. ನಾನು ಇನ್ಮುಂದೆ ಹೆಚ್ಚು ಎಚ್ಚರವಾಗಿರುತ್ತೇನೆ ಎಂದೂ ಅವರು ಈ ವಿಡಿಯೋದಲ್ಲಿ ಹೇಳಿದ್ದಾರೆ.
ಕೆಲವು ವಿಷಯಗಳನ್ನು ಈ ಸಂದರ್ಭದಲ್ಲಿ ನಾನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ನಾನು ಈ ಹಾಡನ್ನು 3 ವರ್ಷಗಳ ಹಿಂದೆಯೇ ಕನ್ನಡ ಭಾಷೆಯಲ್ಲಿ ಚಿತ್ರೀಕರಿಸಿದ್ದೆ. ಸಂಜಯ್ ದತ್ ಅವರಂತಹ ದೊಡ್ಡ ಕಲಾವಿದರು ಇರುವ ದೊಡ್ಡ ಸಿನಿಮಾ ಎನ್ನುವ ಕಾರಣಕ್ಕೆ ನಾನು ಈ ಸಿನಿಮಾದ ಹಾಡಿಗೆ ಒಪ್ಪಿಕೊಂಡಿದ್ದೆ. ಕನ್ನಡ ಭಾಷೆ ನನಗೆ ಗೊತ್ತಿಲ್ಲ. ಶೂಟಿಂಗ್ ಮಾಡುವಾಗ ಹಾಡಿನ ಅರ್ಥ ತಿಳಿದುಕೊಳ್ಳುವ ವಿಚಾರದಲ್ಲಿ ನಾನು ಚಿತ್ರತಂಡದವರ ಮೇಲೆಯೇ ಅವಲಂಬಿತಳಾಗಿದ್ದೆ. ಅವರು ಭಾಷಾಂತರ ಮಾಡಿ ಹೇಳಿದಾಗ ನನಗೆ ಯಾವುದೂ ಅಸಭ್ಯ ಎಂದು ಅನಿಸಿರಲಿಲ್ಲ ಎಂದೂ ನೋರಾ ಫತೇಹಿ ಹೇಳಿದ್ದಾರೆ.
ಹಿಂದಿಯಲ್ಲಿ ತುಂಬಾ ಆಕ್ಷೇಪಾರ್ಹವಾಗಿದೆ
ಇನ್ನು ಇದೀಗ ಹಾಡು ಹಿಂದಿಗೆ ಭಾಷಾಂತರ ಮಾಡಲಾಗಿದ್ದು ತುಂಬಾ ಆಕ್ಷೇಪಾರ್ಹವಾಗಿದೆ. ಈ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ನನ್ನ ಅನುಮತಿಯನ್ನು ಸಹ ಚಿತ್ರತಂಡದವರು ತೆಗೆದುಕೊಂಡಿಲ್ಲ. ಹಾಡು ಬಿಡುಗಡೆಗೆ ನನ್ನನ್ನು ಕರೆದಾಗ ನನ್ನ ಫೋಟೋಗಳನ್ನು ಬಳಸಿಕೊಂಡಿರುವ ರೀತಿಯೂ ನನಗೆ ಬೇಸರ ತರಿಸಿತ್ತು. ನನ್ನ ಮತ್ತು ಸಂಜಯ್ ದತ್ ಅವರ ಫೋಟೋಗಳನ್ನು ಎಐ ಮೂಲಕ ಸೃಷ್ಟಿಸಿ ಮಾಡಿ ಬಳಕೆ ಮಾಡಲಾಗಿದೆ. ಅದನ್ನು ಸಹ ನಾನು ವಿರೋಧಿಸುತ್ತೇನೆ. ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲೇ ನನಗೆ ತುಂಬಾ ಕಿರಿಕಿರಿ ಆಗಿತ್ತು ಎಂದೂ ಅವರು ಹೇಳಿಕೊಂಡಿದ್ದಾರೆ.
ನಾನು ಅಲ್ಲಿ (ಕರ್ನಾಟಕದಲ್ಲಿ) ಎಲ್ಲರ ಎದುರು ಗೌರವಯುತವಾಗಿ ನಡೆದುಕೊಳ್ಳಬೇಕಿತ್ತು. ಹಿಂದಿ ವರ್ಷನ್ ಹಾಡು ಬಂದಾಗಲೇ ನನಗೆ ಸಂಪೂರ್ಣ ಸಾಹಿತ್ಯ ಮನವರಿಕೆ ಆಯಿತು. ಇದು ವಿವಾದ ಆಗುತ್ತೆ ಎನ್ನುವುದು ಗೊತ್ತಾಯಿತು. ಯಾಕೆಂದರೆ ನನಗೆ ಹಿಂದಿ ಅರ್ಥವಾಗುತ್ತದೆ. ಇದು ಸರಿ ಅಲ್ಲ ಎಂದು ನಾನು ಆಗಲೇ ನಿರ್ದೇಶಕರಿಗೆ ಎಚ್ಚರಿಸಿದ್ದೆ ಎಂದೂ ಅವರು ಹೇಳಿದ್ದಾರೆ. ಅಲ್ಲದೆ ನಾನು ಸಿನಿಮಾದಿಂದ ಹೊರಗೆ ಬರುತ್ತೇನೆ. ನಾವು ಯಾವುದೇ ಕಾರಣಕ್ಕೂ ಇದನ್ನು ಪ್ರಚಾರ ಮಾಡುವುದಕ್ಕೆ ಹೋಗಲ್ಲ. ಈ ಹಾಡಿನಿಂದ ನನ್ನ ಘನತೆಗೆ ಧಕ್ಕೆ ಆಗಿದೆ ಎಂದು ನೋರಾ ಹೇಳಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/nora-fatehi-on-sarse-ninna-seraga-row-i-was-told-one-thing-something-else-happened-447553.html. xn--babytilbehr-pgb.com does not claim ownership of this content. All rights remain with the original publisher.
