
Business
oi-Malathesha M
ಷೇರು ಮಾರುಕಟ್ಟೆ ಇಂದು ಕೂಡ ಮಕಾಡೆ ಮಲಗಿದೆ, ಕಳೆದ ಕೆಲವು ದಿನಗಳಿಂದ ಸತತವಾಗಿ ಬಿದ್ದು ಭಯ ಹುಟ್ಟಿಸಿದ್ದ ಭಾರತದ ಷೇರುಪೇಟೆ ನಿನ್ನೆ ಎಂದರೆ ಮಾರ್ಚ್ 18 ಬುಧವಾರ ಒಂದಷ್ಟು ಚೇತರಿಕೆ ಕಂಡು ಹೊಸ ಹುಮ್ಮಸ್ಸು ಮೂಡಿಸಿತ್ತು. ಇದೇ ಕಾರಣಕ್ಕೆ ರೀಟೇಲ್ ಹೂಡಿಕೆದಾರರು ಇಂದು ಮತ್ತೆ ಭಾರತೀಯ ಷೇರು ಮಾರುಕಟ್ಟೆ ಏರಿಕೆ ಕಾಣುವ ಆಸೆಯಲ್ಲಿ ಇದ್ದರು. ಹೀಗಾಗಿ ಹೂಡಿಕೆ ಮಾಡುತ್ತಾ ಕಾಯುತ್ತಿದ್ದರು, ಆದರೆ ಇಂದು ಆಗಿದ್ದೇ ಬೇರೆ. ಅಮೆರಿಕ ಸೇರಿದಂತೆ ಜಗತ್ತಿನ ದೊಡ್ಡ ದೊಡ್ಡ ಷೇರು ಪೇಟೆಗಳು ಇರಾನ್ ಯುದ್ಧದ ಕಾರಣಕ್ಕೆ ಅಲ್ಲಾಡಿ ಹೋಗಿರುವ ಸಮಯದಲ್ಲೇ ಮತ್ತೆ ಭಾರತೀಯ ಷೇರು ಮಾರುಕಟ್ಟೆ ಐತಿಹಾಸಿಕ ಕುಸಿತ ಕಂಡಿದೆ.
ಹೌದು, ಇರಾನ್ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ಘನಘೋರ ಕಾಳಗ ಜಗತ್ತಿನ ಆರ್ಥಿಕತೆ ನಾಶವಾಗುವ ರೀತಿ ಮಾಡುತ್ತಿದೆ. ಮಧ್ಯಪ್ರಾಚ್ಯ ಇರಾನ್ ಯುದ್ಧದ ಕಾರಣಕ್ಕೆ ನರಕವಾಗಿದ್ದು, ಇದೇ ಕಾರಣಕ್ಕೆ ಹೂಡಿಕೆದಾರರು ಭಯಪಟ್ಟು ತಮ್ಮ ಹೂಡಿಕೆಯ ಬಂಡವಾಳ ವಾಪಸ್ ಪಡೆಯುತ್ತಿದ್ದಾರೆ. ಹೀಗಿದ್ದಾಗ ಸಹಜವಾಗಿ ಮಾರುಕಟ್ಟೆ ಸೂಚ್ಯಂಕಗಳು ಕುಸಿತ ಕಾಣುತ್ತಿವೆ ಎನ್ನಲಾಗಿದ್ದು, ಭಾರತೀಯ ಷೇರುಪೇಟೆ ಮೇಲೆ ಕೂಡ ದೊಡ್ಡ ಪರಿಣಾಮ ಉಂಟು ಮಾಡುತ್ತಿದೆ ಈ ಯುದ್ಧ. ಇನ್ನೊಂದು ಕಡೆ ಇರಾನ್ ಯುದ್ಧದ ಕಾರಣ ಕಚ್ಚಾತೈಲ ಬೆಲೆ ಏರಿಕೆ ಹಾಗೂ ಯುದ್ಧ ಇನ್ನಷ್ಟು ಜೋರಾಗುವ ಎಲ್ಲಾ ಸೂಚನೆ ಇರುವ ಕಾರಣಕ್ಕೆ ಸ್ಟಾಕ್ ಮಾರ್ಕೆಟ್ ಕ್ರಾಶ್ ಆಗಿದೆ.

13,00,000 ಕೋಟಿ ರೂಪಾಯಿ ನಷ್ಟ
ಭಾರತೀಯ ಷೇರುಪೇಟೆ ಪ್ರಮುಖ ಸೂಚ್ಯಂಕ, ನಿಫ್ಟಿ-50 ಬರೋಬ್ಬರಿ 775 ಅಂಕ ಎಂದರೆ ಶೇಕಡಾ 3.26 ರಷ್ಟು ಪ್ರಮಾಣದಲ್ಲಿ ಒಂದೇ ದಿನ ಕುಸಿದು ಬಿದ್ದಿದೆ. ಹಾಗೇ ಸೆನ್ಸೆಕ್ಸ್ ಕೂಡ ಭಾರಿ ದೊಡ್ಡದಾಗಿ ಕುಸಿದಿದ್ದು, 2,496 ಅಂಕ ಕುಸಿತ ಕಾಣುವ ಮೂಲಕ ಅದು ಕೂಡ ಶೇಕಡಾ 3.26 ರಷ್ಟು ಪ್ರಮಾಣದ ಮೌಲ್ಯ ಕಳೆದುಕೊಂಡಿದೆ. ಈ ಮೂಲಕ ಹೂಡಿಕೆದಾರರಿಗೆ ಭಾರಿ ದೊಡ್ಡ ನಷ್ಟವಾಗಿದೆ, ಇನ್ನೊಂದು ಕಡೆ ವಿದೇಶಿ ಹೂಡಿಕೆದಾರರು ತಮ್ಮ ಬಂಡವಾಳ ವಾಪಸ್ ಪಡೆಯಲು ಆತುರಪಡುತ್ತಿದ್ದಾರೆ. ಹೀಗೆ ಷೇರು ಮಾರುಕಟ್ಟೆ ದೊಡ್ಡದಾಗಿ ಕುಸಿಯುತ್ತಿದ್ದು, ಇಂದು ಒಂದೇ ದಿನ ಸುಮಾರು 13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್ ಆಗಿದೆ. ಹೀಗಾಗಿ ರೀಟೇಲ್ ವರ್ಗದ ಹೂಡಿಕೆದಾರರಿಗೆ ಈ ಬೆಳವಣಿಗೆ ದೊಡ್ಡ ಪೆಟ್ಟು ಕೊಟ್ಟಿದ್ದು, ಆರ್ಥಿಕ ಸಂಕಷ್ಟ ಕೂಡ ಎದುರಾಗುವ ಮುನ್ಸೂಚನೆ ಇದು ಎನ್ನುತ್ತಿದ್ದಾರೆ ತಜ್ಞರು.
ಕಚ್ಚಾತೈಲ ಬೆಲೆಯಲ್ಲಿ ಭಾರಿ ಏರಿಕೆ
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಪ್ರಮುಖವಾಗಿ ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳು ಭಾರಿ ದೊಡ್ಡ ಅಂತರದ ಕುಸಿತ ಕಂಡಿವೆ. ಶೇಕಡಾ 5 ಕ್ಕಿಂತ ಹೆಚ್ಚು ಅಂತರದ ಕುಸಿತ ಕಂಡ ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳು ಹೂಡಿಕೆದಾರರ ಎದೆಯಲ್ಲಿ ತಲ್ಲಣ ಎಬ್ಬಿಸಿದ್ದು, ಹಾಗೇ ಇನ್ನೂ ಹಲವು ಪ್ರಮುಖ ಷೇರುಗಳು ಕೂಡ ಕುಸಿತ ಕಂಡುಬಿಟ್ಟವು. ಈ ಮೂಲಕ ಭಾರತೀಯ ಷೇರುಪೇಟೆ ಈಗ ಸಂಕಷ್ಟದಲ್ಲಿ ನರಳುವಂತೆ ಆಗಿದೆ, ಒಂದು ಕಡೆ ಇರಾನ್ ಯುದ್ಧದ ಪರಿಣಾಮ ಸಂಕಷ್ಟ ಎದುರಾಗಿದೆ. ಹಾಗೇ ಈ ಸಮಯದಲ್ಲೇ ಕಚ್ಚಾತೈಲ ಬೆಲೆ ಕೂಡ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದ್ದು, ಸುಮಾರು 111 ಡಾಲರ್ ಪ್ರತಿ ಬ್ಯಾರಲ್ಗೆ ತಲುಪಿದೆ ಕಚ್ಚಾತೈಲ ಬೆಲೆ. ಅಮೆರಿಕದ ಷೇರು ಮಾರುಕಟ್ಟೆ ಕೂಡ ಈಗ ಆತಂಕದ ಪರಿಸ್ಥಿತಿಗೆ ತಲುಪಿದ್ದು, ಸತತವಾಗಿ ಕುಸಿತ ಕಾಣುತ್ತಿದೆ ಅಮೆರಿಕ ಷೇರುಪೇಟೆ. ಭಾರತದಲ್ಲೂ ಇದೇ ರೀತಿಯ ತಲ್ಲಣ ಏರ್ಪಟ್ಟಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/business/stock-market-news-on-19-march-of-2026-and-explore-why-the-share-market-is-on-discussion-now-447651.html. xn--babytilbehr-pgb.com does not claim ownership of this content. All rights remain with the original publisher.
