ಬಾಳೆಹಣ್ಣು ತಿನ್ನುವ ಸರಿಯಾದ ಕ್ರಮ ಯಾವುದು? ಈ ಸಣ್ಣ ತಪ್ಪು ನಿಮ್ಮ ಆರೋಗ್ಯವನ್ನೇ ಹಾಳು ಮಾಡಬಹುದು | Banana Guide! Don’t Make This Mistake While Eating it, These Health Issues Need Extra Care

Karnataka

oi-Shiddalingesh S

ಬಾಳೆಹಣ್ಣುಗಳನ್ನು ಆರೋಗ್ಯಕರ ಮತ್ತು ಶಕ್ತಿದಾಯಕ ಹಣ್ಣು ಎಂದು ಹೇಳಲಾಗುತ್ತದೆ. ಕಡಿಮೆ ಬೆಲೆಯಲ್ಲಿ ಸುಲಭವಾಗಿ ದೊರೆಯುವ ಈ ಹಣ್ಣು ದೇಹಕ್ಕೆ ತಕ್ಷಣ ಶಕ್ತಿಯನ್ನು ನೀಡುವ ಗುಣ ಹೊಂದಿದೆ. ಆನಾರೋಗ್ಯ ಅಥವಾ ಸ್ನಾಯು ಶಕ್ತಿ ದೌರ್ಬಲ್ಯ ಸಮಸ್ಯೆಗಳು ಉಂಟಾದಾಗ ಬಾಳೆಹಣ್ಣು ಸೇವಿಸಿ. ಇದು ದೇಹದಲ್ಲಿ ಶಕ್ತಿ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಹಲವು ತಜ್ಞರು ಹೇಳುತ್ತಾರೆ.

ಆದರೆ, ಈ ಬಾಳೆಹಣ್ಣು ಎಲ್ಲರಿಗೂ ಸೂಕ್ತವಲ್ಲ. ಕೆಲವು ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿರುವವರು ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು ಎಂದು ಹಲವು ಆರೋಗ್ಯ ತಜ್ಙರು ಸಲಹೆಯಾಗಿದೆ.

ಆರೋಗ್ಯದಲ್ಲಿ ಆಗುವ ಪ್ರಯೋಜನಗಳು

ಬಾಳೆಹಣ್ಣುಗಳಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳು ಹೆಚ್ಚಾಗಿರುತ್ತದೆ. ಇದು ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ದೇಹದ ಎಲೆಕ್ಟ್ರೊಲೈಟ್ ಸಮತೂಲನವನ್ನು ಕಾಪಾಡಿ ಹೃದಯದ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಕಾರಿ ಆಗಬಲ್ಲದು ಎಂದು ತಜ್ಙರು ಹೇಳುತ್ತಾರೆ.

Banana Guide

ಕೆಲವು ಆರೋಗ್ಯ ಸಮಸ್ಯೆಗಳಿರುವವರು ಬಾಳೆಹಣ್ಣನ್ನು ಮಿತವಾಗಿ ಸೇವನೆ ಮಾಡಬೇಕು. ಅಲರ್ಜಿ ಸಮಸ್ಯೆ, ಮಧುಮೇಹ ರೋಗಿಗಳು, ಮೈಗ್ರೇನ್, ಮೂತ್ರಪಿಂಡದ ಸಮಸ್ಯೆಗಳು, ಆಸ್ತಮಾ, ಜೀರ್ಣಕ್ರಿಯೆಯಂತಹ ಆರೋಗ್ಯ ಸಮಸ್ಯೆ ಇರುವವರು ಬಾಳೆಹಣ್ಣುಗಳನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.

ಹೆಚ್ಚು ಸೇವಿಸಿದರೆ ಏನಾಗುತ್ತದೆ?

ಅತಿಯಾಗಿ ಬಾಳೆಹಣ್ಣು ತಿನ್ನುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆಯಿದೆ. ಇದರಲ್ಲಿ ನೈಸರ್ಗಿಕ ಸಕ್ಕರೆ ಇರುವುದರಿಂದ ಮಧುಮೇಹಿಗಳಿಗೆ ಇದು ಸೂಕ್ತವಲ್ಲ. ಜೊತೆಗೆ ಗ್ಯಾಸ್ಟ್ರಿಕ್, ಉಬ್ಬರ ಮತ್ತು ಜೀರ್ಣ ಸಮಸ್ಯೆಗಳು ಉಂಟಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ದೇಹದಲ್ಲಿ ಕ್ಯಾಲೊರಿಗಳು ಹೆಚ್ಚಾಗಿ ತೂಕ ನಿಯಂತ್ರಣ ಕಷ್ಟವಾಗಬಹುದು. ವಿಶೇಷವಾಗಿ ಡಯಟ್ ಅನುಸರಿಸುವವರು ಬಾಳೆಹಣ್ಣಿನ ಪ್ರಮಾಣವನ್ನು ನಿಯಂತ್ರಿಸುವುದು ಅಗತ್ಯ.

ಖಾಲಿ ಹೊಟ್ಟೆಯಲ್ಲಿ ತಿನ್ನಬೇಡಿ

ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವಿಸುವುದರಿಂದ ದೇಹದಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಮಟ್ಟ ಹೆಚ್ಚಾಗಬಹುದು. ಇದರಿಂದ ವಾಂತಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದೇ ರೀತಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಕೆಲವರಿಗೆ ಅಜೀರ್ಣ ಅಥವಾ ಅಸ್ವಸ್ಥತೆ ಕಾಣಿಸಬಹುದು. ಆದ್ದರಿಂದ, ಬಾಳೆಹಣ್ಣುಗಳನ್ನು ಆಹಾರ ಜೊತೆಗೆ ಅಥವಾ ಊಟದ ನಂತರ ಸೇವಿಸುವುದು ಉತ್ತಮ.

ಯಾವ ಸಮಯದಲ್ಲಿ ತಿನ್ನುವುದು ಉತ್ತಮ?

ಪೊಟ್ಯಾಸಿಯಮ್ ಮತ್ತು ಮೆಗ್ನೇಸಿಯಮ್ ಪೋಷಕಾಂಶಗಳ ಸಂಪೂರ್ಣ ಲಾಭ ಪಡೆಯಲು ಬಾಳೆಹಣ್ಣುಗಳನ್ನು ಮಧ್ಯಾಹ್ನ ಅಥವಾ ಸಂಜೆ ಸಮಯದಲ್ಲಿ ತಿನ್ನುವುದು ಸೂಕ್ತ ಎಂದು ತಜ್ಞರು ಹೇಳುತ್ತಾರೆ. ವ್ಯಾಯಾಮದ ಮೊದಲು ಅಥವಾ ನಂತರ ತಿನ್ನುವುದರಿಂದ ದೇಹಕ್ಕೆ ತಕ್ಷಣ ಶಕ್ತಿ ದೊರೆಯುತ್ತದೆ. ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮವಾದರೂ ಎಲ್ಲರಿಗೂ ಒಂದೇ ರೀತಿಯಲ್ಲಿ ಅನುಕೂಲಕರವಾಗುವುದಿಲ್ಲ. ಆರೋಗ್ಯ ಸಮಸ್ಯೆಗಳಿರುವವರು ವೈದ್ಯರ ಸಲಹೆಯೊಂದಿಗೆ ಮಾತ್ರ ಇದನ್ನು ಸೇವಿಸುವುದು ಸೂಕ್ತ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/banana-guide-don-t-make-this-mistake-while-eating-it-these-health-issues-need-extra-care-447657.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo