Rashmika Mandanna: ಪುಟ್ಟ ಅಭಿಮಾನಿಗೆ ಮನೆಯಲ್ಲೇ ಭರ್ಜರಿ ಔತಣ: ಕೊಟ್ಟ ಮಾತಿನಂತೆ ನಡೆದುಕೊಂಡ ರಶ್ಮಿಕಾ-ವಿಜಯ್ | Rashmika Mandanna Vijay Deverakonda Host Young Fan at Hyderabad Home Fulfil Promise After Wedding

Entertainment

oi-Manohara M

ಹೈದರಾಬಾದ್: ತೆಲುಗು ಚಿತ್ರರಂಗದ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ನಂತರ ನೀಡಿದ್ದ ಮೊದಲ ಭರವಸೆಯನ್ನು ಈಡೇರಿಸುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ತಮ್ಮ ಮದುವೆಗೆ ಆಹ್ವಾನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಪುಟ್ಟ ಅಭಿಮಾನಿಯನ್ನು ಹೈದರಾಬಾದ್‌ನ ತಮ್ಮ ನಿವಾಸಕ್ಕೆ ಆಹ್ವಾನಿಸಿ, ದಂಪತಿ ಪ್ರೀತಿಯಿಂದ ಊಟ ಉಣಬಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ವಿಜಯ್ ಮತ್ತು ರಶ್ಮಿಕಾ ವಿವಾಹವಾದಾಗ, ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಬಾಲಕಿಯೊಬ್ಬಳ ವಿಡಿಯೋ ವೈರಲ್ ಆಗಿತ್ತು. “ನನ್ನನ್ನು ಯಾಕೆ ಮದುವೆಗೆ ಕರೆಯಲಿಲ್ಲ? ನನಗೆ ಸ್ವೀಟ್ಸ್ ಮತ್ತು ಊಟ ಬೇಕು” ಎಂದು ಆಕೆ ಮುದ್ದಾಗಿ ಪ್ರಶ್ನಿಸಿದ್ದಳು. ಈ ವಿಡಿಯೋಗೆ ಸ್ವತಃ ವಿಜಯ್ ದೇವರಕೊಂಡ ಅವರು, “ಬುಜ್ಜಿ ತಲ್ಲಿ (ಪುಟ್ಟ ತಾಯಿ), ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ. ನಿನಗೆ ಇಷ್ಟವಾದ ಅಡುಗೆ ಮಾಡಿಸುತ್ತೇನೆ” ಎಂದು ಕಮೆಂಟ್ ಮಾಡುವ ಮೂಲಕ ಭರವಸೆ ನೀಡಿದ್ದರು.

Rashmika Mandanna

ಇಡೀ ಕುಟುಂಬಕ್ಕೆ ಭೋಜನಕೂಟ

ಕೊಟ್ಟ ಮಾತಿನಂತೆ ವಿಜಯ್ ಮತ್ತು ರಶ್ಮಿಕಾ ಆ ಬಾಲಕಿ ಹಾಗೂ ಆಕೆಯ ಕುಟುಂಬವನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಈ ಭೇಟಿಯ ಸುಂದರ ಕ್ಷಣಗಳನ್ನು ಬಾಲಕಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ವಿಡಿಯೋದಲ್ಲಿ ವಿಜಯ್ ಬಾಲಕಿಯನ್ನು ಎತ್ತಿಕೊಂಡು ಮುದ್ದಾಡುತ್ತಿರುವುದು ಮತ್ತು ಆಕೆ “ನನ್ನನ್ನು ಮದುವೆಗೆ ಯಾಕೆ ಕರೆಯಲಿಲ್ಲ?” ಎಂದು ಮತ್ತೆ ಪ್ರಶ್ನಿಸುತ್ತಿರುವುದು ಕಂಡುಬಂದಿದೆ.

ರಶ್ಮಿಕಾ ಮಂದಣ್ಣ ಅವರು ಬಾಲಕಿಗೆ ಲಡ್ಡು ನೀಡಿ, ಸ್ವತಃ ಅನ್ನ ತಿನ್ನಿಸಿ ಸಿಹಿ ಮುತ್ತು ನೀಡಿದ್ದಾರೆ. “ನಾವೀಗ ಫ್ರೆಂಡ್ಸ್ ಅಲ್ವಾ?” ಎಂದು ಬಾಲಕಿ ಕೇಳಿದಾಗ, ನವದಂಪತಿ ನಗುನಗುತ್ತಾ ಒಪ್ಪಿಕೊಂಡಿದ್ದಾರೆ. “ರೀಲ್ ಟು ರಿಯಲ್.. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರನ್ನು ಅವರ ಮನೆಯಲ್ಲೇ ಭೇಟಿಯಾಗಿದ್ದು ನನ್ನ ಜೀವನದ ಮರೆಯಲಾಗದ ಕ್ಷಣ. ಅವರು ನಮ್ಮನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು” ಎಂದು ಬಾಲಕಿ ಸಂಭ್ರಮದಿಂದ ಬರೆದುಕೊಂಡಿದ್ದಾಳೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಈ ಜೋಡಿಯ ಸರಳತೆಗೆ ಫಿದಾ ಆಗಿದ್ದಾರೆ.

ಕೆಲವು ದಿನಗಳ ಹಿಂದೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ನಂತರ, ನನ್ನನ್ನೇಕೆ ಮದುವೆಗೆ ಕರೆಯಲಿಲ್ಲ ಎಂದು ಬಾಲಕಿ ವಿಡಿಯೋ ಹಾಕಿದ್ದಳು. ಈ ವಿಡಿಯೋ ನೋಡಿದ ವಿಜಯ್ ದೇವರಕೊಂಡ, “ನಿನ್ನನ್ನು ಮನೆಗೆ ಲಂಚ್‌ಗೆ ಕರೆಯುತ್ತೇನೆ, ನಿನಗೆ ಇಷ್ಟವಾದ ಊಟ ಮತ್ತು ಸಿಹಿ ಹೇಳು” ಎಂದು ಕಾಮೆಂಟ್ ಮಾಡಿದ್ದರು. ರಶ್ಮಿಕಾ ಕೂಡ ವಿಶೇಷ ಗಿಫ್ಟ್ ನೀಡುವುದಾಗಿ ಮಾತು ಕೊಟ್ಟಿದ್ದರು. ಈಗ ಅವರು ಕೊಟ್ಟ ಮಾತಿನಂತೆ ಬಾಲಕಿ ಮತ್ತು ಆಕೆಯ ಕುಟುಂಬವನ್ನು ಮನೆಗೆ ಆಹ್ವಾನಿಸಿ ಆತ್ಮೀಯವಾಗಿ ಆತಿಥ್ಯ ನೀಡಿದ್ದಾರೆ. ಮದುವೆಗೆ ಆಹ್ವಾನ ನೀಡಲಿಲ್ಲ ಎಂದು ಮುದ್ದಾಗಿ ಬೇಸರ ವ್ಯಕ್ತಪಡಿಸಿದ್ದ ಬಾಲಕಿ ಈಗ ಈ ಜೋಡಿಯನ್ನು ಅವರ ಮನೆಗೆ ಭೇಟಿ ನೀಡಿ, ಅವರ ಜೊತೆ ಊಟ ಮಾಡುವ ಅವಕಾಶ ಪಡೆದಿದ್ದಾಳೆ.

Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-vijay-deverakonda-host-young-fan-at-hyderabad-home-fulfil-promise-after-wedding-447903.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo