Strait of Hormuz: ಹಾರ್ಮುಜ್ ಜಲಸಂಧಿ ಉದ್ವಿಗ್ನತೆ: ಇರಾನ್ ಕ್ರಮ ಖಂಡಿಸಿ 22 ದೇಶಗಳ ನಾಯಕರಿಂದ ಜಂಟಿ ಹೇಳಿಕೆ ಬಿಡುಗಡೆ | Strait of Hormuz Tension 22 Countries Condemn Iran Joint Statement Released global energy supply

International

oi-Manohara M

Strait of Hormuz tension: ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಯುನೈಟೆಡ್ ಕಿಂಗ್‌ಡಮ್ (ಯುಕೆ), ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಕೆನಡಾ ಸೇರಿದಂತೆ ಒಟ್ಟು 22 ದೇಶಗಳ ನಾಯಕರು ಸಂಯುಕ್ತ ಹೇಳಿಕೆ ಬಿಡುಗಡೆ ಮಾಡಿ ಇರಾನ್ ಕ್ರಮಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.

ಜಂಟಿ ಹೇಳಿಕೆಯಲ್ಲಿ, ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ನಿರಾಯುಧ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಗಳು, ತೈಲ ಮತ್ತು ಅನಿಲ ಸ್ಥಾವರ ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆದ ದಾಳಿಗಳು ಹಾಗೂ ಹಾರ್ಮುಜ್ ಜಲಸಂಧಿಯನ್ನು ಇರಾನ್ ಪಡೆಗಳು ತಡೆದಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

Strait of Hormuz

ಈ ಬೆಳವಣಿಗೆಗಳು ಜಾಗತಿಕ ಇಂಧನ ಸರಪಳಿ ಮತ್ತು ವಾಣಿಜ್ಯ ಸಾಗಣೆಗೆ ದೊಡ್ಡ ಹೊಡೆತ ನೀಡಲಿದ್ದು, ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅಪಾಯ ಉಂಟುಮಾಡುತ್ತದೆ ಎಂದು ದೇಶಗಳು ಎಚ್ಚರಿಕೆ ನೀಡಿವೆ. ತಕ್ಷಣವೇ ದಾಳಿ, ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಿಲ್ಲಿಸಿ, ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಬಾರದು ಎಂದು ಇರಾನ್‌ಗೆ ಆಗ್ರಹಿಸಿದ್ದಾರೆ.

ಅಂತರರಾಷ್ಟ್ರೀಯ ಕಾನೂನು ಪ್ರಕಾರ ಸಮುದ್ರ ಮಾರ್ಗಗಳಲ್ಲಿ ಮುಕ್ತ ಸಂಚಾರ (Freedom of Navigation) ಒಂದು ಮೂಲಭೂತ ಹಕ್ಕು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಜಾಗತಿಕ ಇಂಧನ ಮಾರುಕಟ್ಟೆ ಸ್ಥಿರಗೊಳಿಸಲು ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ ಕೈಗೊಂಡಿರುವ ತೈಲ ಸಂಗ್ರಹ ಬಿಡುಗಡೆ ನಿರ್ಧಾರವನ್ನು 22 ದೇಶಗಳು ಸ್ವಾಗತಿಸಿದ್ದಾರೆ.

ಸುರಕ್ಷಿತ ಹಡಗು ಸಂಚಾರಕ್ಕೆ ಕ್ರಮ

ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಹಡಗು ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ತಾವು ಸಿದ್ಧರಾಗಿದ್ದೇವೆ ಎಂದೂ ದೇಶಗಳು ಹೇಳಿವೆ. ಇಂಧನ ಕೊರತೆಯಿಂದ ಹೆಚ್ಚು ತೊಂದರೆ ಅನುಭವಿಸುವ ದೇಶಗಳಿಗೆ ಸಂಯುಕ್ತ ರಾಷ್ಟ್ರಗಳ ಮೂಲಕ ಹಾಗೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೂಲಕ ಸಹಾಯ ನೀಡುವುದಾಗಿ ತಿಳಿಸಿದ್ದಾರೆ. ಹಾರ್ಮುಜ್ ಜಲಸಂಧಿ ಉದ್ವಿಗ್ನತೆ ಈಗ ಜಾಗತಿಕ ಮಟ್ಟದ ಸಮಸ್ಯೆಯಾಗಿ ಪರಿಣಮಿಸಿದ್ದು, ಜಾಗತಿಕ ಇಂಧನ ಸರಬರಾಜು, ವಾಣಿಜ್ಯ ಹಾಗೂ ಅಂತರರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಜಂಟಿ ಹೇಳಿಕೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಯಾವೆಲ್ಲ ದೇಶಗಳಿಂದ ಖಂಡನೆ?

ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್, ಜಪಾನ್, ಕೆನಡಾ, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್, ಡೆನ್ಮಾರ್ಕ್, ಲಾಟ್ವಿಯಾ, ಸ್ಲೊವೇನಿಯಾ, ಎಸ್ಟೋನಿಯಾ, ನಾರ್ವೆ, ಸ್ವೀಡನ್, ಫಿನ್‌ಲ್ಯಾಂಡ್, ಚೆಕಿಯಾ, ರೊಮೇನಿಯಾ, ಬಹ್ರೇನ್, ಲಿಥುವೇನಿಯಾ ಮತ್ತು ಆಸ್ಟ್ರೇಲಿಯಾದ ನಾಯಕರು ಹಾರ್ಮುಜ್ ಜಲಸಂಧಿಯ ಬಗ್ಗೆ ಈ ಜಂಟಿ ಹೇಳಿಕೆ ಹೊರಡಿಸಿದ್ದಾರೆ. ಜಾಗತಿಕ ಇಂಧನ ಸರಬರಾಜು ಸರಪಳಿಗೆ ಅಡ್ಡಿಪಡಿಸುವುದು ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಸಂಚಕಾರ ತರುತ್ತದೆ. ಈ ಹಿನ್ನೆಲೆಯಲ್ಲಿ ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾವು ಕರೆ ನೀಡುತ್ತೇವೆ ಎಂದಿದ್ದಾರೆ.

ಜಲಸಂಧಿಯಲ್ಲಿ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಅಂತರಾಷ್ಟ್ರೀಯ ಇಂಧನ ಸಂಸ್ಥೆಯು (IEA) ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲುಗಳನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ತೈಲ ಉತ್ಪಾದನಾ ರಾಷ್ಟ್ರಗಳೊಂದಿಗೆ ನಾವು ಕೆಲಸ ಮಾಡುತ್ತೇವೆ. ಇದರಿಂದ ತೊಂದರೆಗೊಳಗಾದ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಮತ್ತು ಐಎಫ್‌ಐಗಳ (IFIs) ಮೂಲಕ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/strait-of-hormuz-tension-22-countries-condemn-iran-joint-statement-released-global-energy-supply-447907.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo