ಗಾಢ ನಿದ್ರೆಗೆ ಜಾರಲು ಇಲ್ಲಿವೆ ಸುಲಭ ಉಪಾಯಗಳು: ಇಂದೇ ಪ್ರಯತ್ನಿಸಿ | Good Sleep Tips: Trouble Sleeping at Night? Simple Foods and Healthy Habits for Deep, Restful Sleep

Karnataka

oi-Shiddalingesh S

ಇಂದಿನ ವೇಗವಾದ ಜೀವನಶೈಲಿಯಲ್ಲಿ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒತ್ತಡ, ಅತಿಯಾದ ಮೊಬೈಲ್‌ ಬಳಕೆ ಮತ್ತು ದೈಹಿಕ ವ್ಯಾಯಾಮದ ಕೊರತೆ ಇದರ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಹೇಳುತ್ತಾರೆ. ಇದರ ಜೊತೆಗೆ ನಾವು ತೆಗೆದುಕೊಳ್ಳುವ ಆಹಾರವೂ ಕೂಡ ನಿದ್ರೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ತಜ್ಞರ ಪ್ರಕಾರ ಕೆಲವು ಆಹಾರ ಪದಾರ್ಥಗಳು ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನಿದ್ರಾಹೀನತೆ ಸಮಸ್ಯೆಯನ್ನು ಕಡಿಮೆ ಮಾಡಬಹುದು ಮತ್ತು ಶಾಂತಿಯುತ ನಿದ್ರೆ ಪಡೆಯಬಹುದು.

Good Sleep Tips

ಬಾದಾಮಿ ಉತ್ತಮ ನಿದ್ರೆಗೆ ತುಂಬಾ ಸಹಾಯಕ

ಬಾದಾಮಿಯಲ್ಲಿ ಮ್ಯಾಗ್ನೀಷಿಯಮ್‌ ಸಮೃದ್ಧವಾಗಿದ್ದು ಇದು ದೇಹವನ್ನು ನಿಯಂತ್ರಣಕ್ಕೆ ತರುತ್ತದೆ ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಸಂಜೆ 5 ರಿಂದ 7 ಗಂಟೆಗಳ ನಡುವೆ ನೆನೆಸಿದ ಬಾದಾಮಿಯನ್ನು ತಿನ್ನುವುದು ಉತ್ತಮ. ಇದು ರಾತ್ರಿ ಮಧ್ಯೆ ಎಚ್ಚರವಾಗುವುದನ್ನು ಕಡಿಮೆ ಮಾಡಿ ಸರಿಯಾಗಿ ನಿದ್ರೆ ಮಾಡಲು ಸಹಕಾರಿಯಾಗುತ್ತದೆ.

ಬಾಳೆಹಣ್ಣು ಇದು ಸಹಜ ನಿದ್ರೆಯ ಸ್ನೇಹಿತ

ಬಾಳೆಹಣ್ಣು ಕೂಡ ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಊಟದ ನಂತರ ಅಥವಾ ಮಲಗುವ ಮುನ್ನ ಬಾಳೆಹಣ್ಣು ಸೇವಿಸಿದರೆ ದೇಹಕ್ಕೆ ವಿಶ್ರಾಂತಿ ದೊರೆಯುತ್ತದೆ ಮತ್ತು ದೇಹದ ದಣಿವನ್ನು ದೂರ ಮಾಡುತ್ತದೆ.

ಹಾಲು ಮತ್ತು ಅರಿಶಿಣ

ಮಲಗುವ ಮೊದಲು ತುಸು ಬೆಚ್ಚಗಿನ ಹಾಲಿಗೆ ಅರಿಶಿಣ ಸೇರಿಸಿ ಕುಡಿಯುವುದು ಉತ್ತಮ. ಇದರಿಂದ ದೇಹಕ್ಕೆ ಆರಾಮ ಸಿಗುತ್ತದೆ ಮತ್ತು ನಿದ್ರೆ ಸುಲಭವಾಗುತ್ತದೆ. ಇದಕ್ಕೆ ಸ್ವಲ್ಪ ಜಾಯಿಕಾಯಿ ಪುಡಿ ಸೇರಿಸಿದರೆ ಇನ್ನಷ್ಟು ಲಾಭಕರ ಎಂದು ತಜ್ಞರು ಸಲಹೆ ನೀಡುತ್ತಾರೆ.

ಚೆರಿ ಹಣ್ಣು

ಚೆರಿ ಹಣ್ಣುಗಳು ಹುಳಿಯಾಗಿರುತ್ತದೆ ಹಾಗೂ ದೇಹವನ್ನು ತಂಪಾಗಿಡುತ್ತವೆ ಇದು ಮೆಲಟೋನಿನ್ ಉತ್ಪಾದನೆಯನ್ನು ಕೂಡ ಹೆಚ್ಚಿಸುತ್ತವೆ. ಸಂಜೆ ವೇಳೆಯಲ್ಲಿ ತಾಜಾ ಚೆರಿ ಹಣ್ಣುಗಳನ್ನು ಸೇವಿಸುವುದರಿಂದ ರಾತ್ರಿ ಸರಿಯಾಗಿ ನಿದ್ರೆ ಬರುತ್ತದೆ.

ಜೀವನಶೈಲಿ ಬದಲಾವಣೆ

ಆಹಾರದ ಜೊತೆಗೆ ಜೀವನಶೈಲಿ ಸಹ ಬದಲಾವಣೆ ಮಾಡಿಕೊಳ್ಳವುದು ಮುಖ್ಯವಾಗಿದೆ. ರಾತ್ರಿ ವೇಳೆ ಮೊಬೈಲ್ ಬಳಕೆ ಕಡಿಮೆ ಮಾಡುವುದು, ಕೆಫೀನ್ ಸೇವನೆ ನಿಲ್ಲಿಸುವುದು, ತಡ ರಾತ್ರಿ ಭಾರವಾದ ಆಹಾರ ಊಟವನ್ನು ಮಾಡದೆ ಇರುವುದು ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.

ಪ್ರತಿ ದಿನ ಸರಿಯಾದ ಸಮಯಕ್ಕೆ ಮಲಗುವುದು ಮತ್ತು ಸರಿಯಾದ ಸಮಯಕ್ಕೆ ಎದ್ದೇಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದರೆ ನಿದ್ರೆಯ ಸಮಸ್ಯೆಯನ್ನು ಸಹಜವಾಗಿ ನಿವಾರಿಸಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/good-sleep-tips-trouble-sleeping-at-night-simple-foods-and-healthy-habits-for-deep-restful-sleep-447893.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo