Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ | Vande Bharat Express: Revised Timings for Bengaluru-Kalaburagi and Yesvantpur-Kacheguda Trains

Karnataka

oi-Shankrappa Parangi

ಬೆಂಗಳೂರು: ಭಾರತದ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು (Vande Bharat Express Train) ಕರ್ನಾಟಕದಲ್ಲೂ ಸೇವೆ ನೀಡುತ್ತಿವೆ. ದೇಶದ ಅನೇಕ ನಗರಗಳ ಮಧ್ಯ ವೇಗದ ಸಾರಿಗೆ ಸಂಪರ್ಕ ಕೊಂಡಿಯಾಗಿವೆ. ಈ ರೈಲು ಸಾರಿಗೆ ಸೇವೆ ಪ್ರಯಾಣಿಕರಲ್ಲಿ ತ್ವರಿತವಾಗಿ ಜನಪ್ರಿಯತೆ ಪಡೆದಿವೆ. ಇದೀಗ ಕರ್ನಾಟಕದ ವಂದೇ ಭಾರತ್ ಪ್ರಯಾಣಿಕರಿಗೆ ಮಹತ್ವದ ಅಪ್ಡೇಟ್ ನೀಡಲಾಗಿದೆ. ರಾಜ್ಯದ ನಾಲ್ಕು ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು, ಹೊಸ ವೇಳಾಪಟ್ಟಿ ಅನ್ವಯ ಪ್ರಯಾಣ ಮಾಡಬೇಕಿದೆ.

ಪರಿಷ್ಕರಣೆ ಗೊಂಡ ನಾಲ್ಕು ವಂದೇ ಭಾರತ್ ರೈಲುಗಳು

1. ಕಾಚೆಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20703)
2. ಯಶವಂತಪುರ-ಕಾಚೆಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20704)
3. ಕಲಬುರಗಿ- ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22231)
4. ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22232)

Vande Bharat Express

ರೈಲಿನ ಪರಿಷ್ಕೃತ ಸಮಯಗಳು ಹೀಗಿವೆ

ಕಾಚೆಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20703) ಸದ್ಯ ಮಧ್ಯಾಹ್ನ 3.55 ಕ್ಕೆ ಹಿಂದೂಪುರ ತಲುಪಲಿದೆ. ಮೊದಲು ಮಧ್ಯಾಹ್ನ 3.48 ಗಂಟೆಗೆ ತಲುಪುತ್ತಿತ್ತು.

ಅದೇ ರೀತಿ ಯಶವಂತಪುರ-ಕಾಚೆಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (20704) ಹಿಂದೂಪುರವನ್ನು ಮಧ್ಯಾಹ್ನ 12.08 ಕ್ಕೆ ತಲುಪುತ್ತಿತ್ತು. ಪರಿಷ್ಕೃತ ಸಮಯದಲ್ಲಿ ಈ ಎರಡನೇ ರೈಲು ಮಧ್ಯಾಹ್ನ 12.17 ಕ್ಕೆ ತಲುಪುತ್ತದೆ.

ಕಲಬುರಗಿ- ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22231) ರೈಲು ಮಾರ್ಗದ ಎರಡು ನಿಲ್ದಾಣಗಳ ಆಗಮನದ ಸಮಯ ಬದಲಾಗಿದೆ. ರೈಲು ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯವನ್ನು ಬೆಳಿಗ್ಗೆ 11.13 ಕ್ಕೆ ತಲುಪಲಿದೆ, ಈ ಮೊದಲು ಬೆಳಗ್ಗೆ 11.00 ನಿಲ್ದಾಣಕ್ಕೆ ಬರುತ್ತದೆ. ಇನ್ನೂ ಯಲಹಂಕ ನಿಲ್ದಾಣಕ್ಕೆ ಮಧ್ಯಾಹ್ನ 12.28ರ ಬದಲಾಗಿ, ಮಧ್ಯಾಹ್ನ 12.58ಕ್ಕೆ ಆಗಮಿಸಲಿದೆ.

ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22232) ರೈಲು ಗುರುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಕಾರ್ಯಾಚರಣೆ ಮಾಡಲಿದೆ. ಪರಿಷ್ಕೃತ ವೇಳಾಪಟ್ಟಿಗಳು ಪ್ರಮುಖ ನಿಲ್ದಾಣಗಳಲ್ಲಿ ಆಗಮಿಸಿ ತೆರಳುತ್ತದೆ.

ವಂದೇ ಭಾರತ್ ರೈಲಿನ ಕುರಿತು

ಪ್ರಯಾಣಿಕರಿಗೆ ಐಷಾರಾಮಿ ಮತ್ತು ಆರಾಮದಾಯಕ ಸೇವೆ, ಅನುಭವ ನೀಡುವ ರೈಲು ಇದಾಗಿದೆ. ಕರ್ನಾಟಕದಲ್ಲಿ ಒಟ್ಟು 12 ರೈಲುಗಳು ಸೇರಿ ಭಾರತಾದ್ಯಂತ ಒಟ್ಟು 164 ವಂದೇ ಭಾರತ್ ರೈಲುಗಳು ನಿತ್ಯ ಸಂಚಾರ ಸೇವೆ ನೀಡುತ್ತಿವೆ. ಅನುಕೂಲತೆ ಆಧಾರತದಲ್ಲಿ ಈ ರೈಲುಗಳ ಬೋಗಿ ಹೆಚ್ಚಳ, ಸಮಯ ಪರಿಷ್ಕರಣೆ ಮಾಡಲಾಗುತ್ತದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/vande-bharat-express-revised-timings-for-bengaluru-kalaburagi-and-yesvantpur-kacheguda-trains-447883.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo