Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? | Gold- Silver Price Today March 22: Record Drop in Silver Prices; Gold Rates Stable in Bengaluru

Business

oi-Shankrappa Parangi

Gold Price Today: ಮಾರ್ಚ್ ತಿಂಗಳಿನಲ್ಲಿ ದಾಖಲೆ ಮಟ್ಟದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ ಆಗಿದೆ. ಕಳೆದ ಒಂದು ವಾರದಲ್ಲಿ ಒಂದೇ ದಿನ ಮಾತ್ರವೇ ಈ ಲೋಹಗಳ ದರ ಏರಿಕೆ ಆಗಿದ್ದು, ಉಳಿದಂತೆ ಕಳೆದ ನಾಲ್ಕು ದಿನಗಳಿಂದ ಸತತವಾಗಿ ದರ ಇಳಿಕೆ ಆಗಿದೆ. ಇಂದು ಭಾನುವಾರ 22 ಕ್ಯಾರಟ್ ಒಂದು ಗ್ರಾಂ ಚಿನ್ನಕ್ಕೆ 13,380 ರೂ. ಮತ್ತು 24 ಕ್ಯಾರಟ್ 14,597 ರೂ.ಗೆ ಇಳಿಕೆ ಆಗಿದೆ. ಯುದ್ಧಗಳು ಸೇರಿ ಜಾಗತಿಕ ಬೆಳವಣಿಗೆ ನಡುವೆಯೂ ಚಿನ್ನ-ಬೆಳ್ಳಿ ದರ ತೀವ್ರವಾಗಿ ಕುಸಿದಿವೆ.

ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ನಾನಾ ಮಾರುಕಟ್ಟೆಗಳಲ್ಲಿ ಈ ಲೋಹಗಳ ದರವು ಸದ್ಯಕ್ಕೆ ಹೆಚ್ಚಾಗುವ ಮುನ್ಸೂಚನೆ ಇಲ್ಲ. ಕಳೆದ ವಾರ 300 ರೂಪಾಯಿಯಷ್ಟು ಹೆಚ್ಚಾಗಿದ್ದು ಬಿಟ್ಟರೆ ಮತ್ತೆ ಹೆಚ್ಚಾಗದೇ ಇಳಿಕೆಯ ಹಾದಿಯೇ ಹಿಡಿದಿದೆ. ನೆನ್ನೆ ಶನಿವಾರ (ಮಾ.21) 24ಕ್ಯಾರಟ್ ಒಂದು ಗ್ರಾಂ ಚಿನ್ನಕ್ಕೆ 294 ರೂಪಾಯಿ, 22 ಕ್ಯಾರಟ್ ಒಂದು ಗ್ರಾಂ 275 ರೂಪಾಯಿ ಇಳಿಕೆ ಆಗಿತ್ತು. 18 ಕ್ಯಾರಟ್‌ನ ಒಂದು ಗ್ರಾಂ ಬಂಗಾರಕ್ಕೆ 10,948 ರೂಪಾಯಿ ಇದೆ. ಇಂದು ಭಾನುವಾರ ಚಿನ್ನ ಬೆಳ್ಳಿ ದರದಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

Gold- Silver Price Today March 22

ಬೆಳ್ಳಿ ದರದಲ್ಲಿ ಭಾರೀ ಬದಲಾವಣೆ

ಮಾರ್ಚ್ 2ರಂದು ಒಂದು ಕೆಜಿಗೆ 3,15,000 ರೂಪಾಯಿ ಇತ್ತು. ಮಾರ್ಚ್‌ 4ಕ್ಕೆ 2,85,000 ರೂ.ಗೆ ಇಳಿಯಿತು. ಅಲ್ಲಿಂದ ಹತ್ತು ದಿನಕ್ಕೆ (ಮಾ.16) 2,70,000 ರೂ.ಗೆ ಕುಸಿಯಿತು. ಮೊನ್ನೆ ಮಾರ್ಚ್ 20ರಂದು ಶುಕ್ರವಾರ 2,55,000ಗೆ ಇಳಿಯಿತು. ಇಂದು ಮಾರ್ಚ್ 22ರಂದು 2,45,000 ರೂ.ಗೆ ಇಳಿದಿದ್ದು, ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ನಗರವಾರು 22ಕೆ 10 ಗ್ರಾಂ ಚಿನ್ನದ ಬೆಲೆ

ದೆಹಲಿ: 1,33,950 ರೂಪಾಯಿ

ಮುಂಬೈ: 1,33,800

ಚೆನ್ನೈ: 1,36,800

ಬೆಂಗಳೂರು: 1,33,800

ಕೊಲ್ಕತ್ತ: 1,33,800

ಹೈದರಾಬಾದ್: 1,33,800

ನಗರವಾರು 24ಕೆ 10 ಗ್ರಾಂ ಚಿನ್ನದ ಬೆಲೆ

ದೆಹಲಿ: 1,46, 120 ರೂಪಾಯಿ

ಮುಂಬೈ: 1,45,970 ರೂಪಾಯಿ

ಚೆನ್ನೈ: 1,48, 580 ರೂಪಾಯಿ

ಬೆಂಗಳೂರು: 1,45,970 ರೂಪಾಯಿ

ಕೊಲ್ಕತ್ತ: 1,45,970 ರೂಪಾಯಿ

ಹೈದರಾಬಾದ್: 1,45,970 ರೂಪಾಯಿ

ಇಂದಿನ ಬೆಳ್ಳಿ ದರ

ಬೆಳ್ಳಿ ಒಂದು ಗ್ರಾಂ: 245 ರೂಪಾಯಿ

ಬೆಳ್ಳಿ ಒಂದು ಕೆಜಿ”: 2,45,000 ರೂಪಾಯಿ

Disclaimer: This content was automatically imported from a third-party source via RSS feed. The original source is: https://kannada.oneindia.com/news/business/gold-silver-price-today-march-22-record-drop-in-silver-prices-gold-rates-stable-in-bengaluru-447943.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo