ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ | Abdul Basit Sparks Outrage with Provocative Remarks Targeting New Delhi and Mumbai: Huge Viral

India

oi-Madhusudhan KR

ಪಾಕಿಸ್ತಾನದ ಮಾಜಿ ಹೈಕಮಿಷನರ್ ಅಬ್ದುಲ್ ಬಾಸಿತ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಅತ್ಯಂತ ಬೇಜವಾಬ್ದಾರಿಯುತ ಮತ್ತು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಅಮೆರಿಕವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಭಾರತದ ನವದೆಹಲಿ ಮತ್ತು ಮುಂಬೈ ನಗರಗಳ ಮೇಲೆ ದಾಳಿ ಮಾಡುವುದು ಪಾಕಿಸ್ತಾನದ ಸಹಜ ಆಯ್ಕೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ವಿಡಿಯೋ ಚರ್ಚೆಯೊಂದರಲ್ಲಿ ಮಾತನಾಡಿದ ಬಾಸಿತ್, “ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಒಂದು ವೇಳೆ ಅಮೆರಿಕವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ನಮಗೆ ಭಾರತದ ಮುಂಬೈ ಮತ್ತು ನವದೆಹಲಿ ಮೇಲೆ ದಾಳಿ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಅಮೆರಿಕ ನಮ್ಮ ಕ್ಷಿಪಣಿ ವ್ಯಾಪ್ತಿಗೆ ಸಿಗದಿದ್ದರೆ, ನಾವು ಭಾರತದ ಮಹಾನಗರಗಳನ್ನೇ ಗುರಿಯಾಗಿಸುತ್ತೇವೆ,” ಎಂದು ಹೇಳಿದ್ದಾರೆ.

Abdul Basit Sparks Outrage with Provocative Remarks Targeting New Delhi and Mumbai Huge Viral

ಇಸ್ರೇಲ್ ಅಥವಾ ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡಲು ಸಾಧ್ಯವಾಗದಿದ್ದಲ್ಲಿ, ಭಾರತದ ಮೇಲೆ ಬಾಂಬ್ ಹಾಕುವುದು ಅನಿವಾರ್ಯ ಎಂಬ ತರ್ಕಹೀನ ಮಾತನ್ನು ಅವರು ಹೇಳಿದ್ದಾರೆ. 2014 ರಿಂದ 2017ರವರೆಗೆ ಭಾರತದಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿಯೇ ಇಂತಹ ಬೇಜವಾಬ್ದಾರಿಯುತ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಅಬ್ದುಲ್ ಬಾಸಿತ್ ವಿರುದ್ಧ ಭುಗಿಲೆದ್ದ ಆಕ್ರೋಶ

ಅಬ್ದುಲ್ ಬಾಸಿತ್ ಅವರ ಈ ಮಾತುಗಳು ಅವರ ಸಂಕುಚಿತ ಮನೋಭಾವ ಮತ್ತು ಹತಾಶೆಯನ್ನು ಎತ್ತಿ ತೋರಿಸುತ್ತವೆ ಎನ್ನುವ ಆಕ್ರೋಶಗಳು ವ್ಯಕ್ತವಾಗಿವೆ. ಸಂಬಂಧವೇ ಇಲ್ಲದ ವಿಚಾರದಲ್ಲಿ ಭಾರತದ ನಾಗರಿಕರನ್ನು ಗುರಿಯಾಗಿಸುವ ಬೆದರಿಕೆ ಹಾಕಿರುವುದು ಜಾಗತಿಕ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ರಾಯಭಾರಿಯಾಗಿ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಇಷ್ಟು ಕೆಳಮಟ್ಟದ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ ಅಂತಲೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ವ್ಯಕ್ತವಾಗಿವೆ

ಪಾಕಿಸ್ತಾನದ ನ್ಯೂಸ್ ಚಾನೆಲ್‌ವೊಂದಲ್ಲಿ ನಡೆದ ಸಂವಾದದಲ್ಲಿ ಅಬ್ದುಲ್ ಬಾಸಿತ್ ಅವರು ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತುಳಸಿ ಗಬ್ಬಾರ್ಡ್ ಅವರ “ಪಾಕಿಸ್ತಾನ ವಿರೋಧಿ” ದೃಷ್ಟಿಕೋನ ಯಾವಾಗಲೂ ಮುನ್ನೆಲೆಗೆ ಬರುತ್ತದೆ. ಅವರು ಮೂಲತಃ ಭಾರತೀಯ ಮೂಲದವರಾದ್ದರಿಂದ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಬಾಸಿತ್ ಆರೋಪಿಸಿದ್ದಾರೆ.

ತುಳಸಿ ಗಬ್ಬಾರ್ಡ್ ಅವರು ಅಮೆರಿಕದ ಸಮೋವನ್ ಮೂಲದವರಾಗಿದ್ದು, ಹಿಂದೂ ಧರ್ಮವನ್ನು ಅನುಸರಿಸುತ್ತಾರೆಯೇ ಹೊರತು ಅವರು ಭಾರತೀಯ ಮೂಲದವರಲ್ಲ ಎಂಬುದು ಇಲ್ಲಿ ಗಮನಾರ್ಹ ವಿಚಾರಚಾಗಿದೆ. “ಪಾಕಿಸ್ತಾನದ ಸೇನಾ ಸನ್ನದ್ಧತೆ ಕೇವಲ ಭಾರತವನ್ನು ಗಮನದಲ್ಲಿಟ್ಟುಕೊಂಡಿದೆ. ತುಳಸಿ ಗಬ್ಬಾರ್ಡ್ ಅವರಿಗೆ ಪಾಕಿಸ್ತಾನದ ಕ್ಷಿಪಣಿಗಳು ಕಾಣಿಸುತ್ತವೆ, ಆದರೆ ಭಾರತದ ಕ್ಷಿಪಣಿಗಳು ಕಾಣಿಸುವುದಿಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಅಮೆರಿಕ-ಭಾರತ ಸಂಬಂಧದ ಕುರಿತು ಅಬ್ದುಲ್ ಹೇಳಿದ್ದೇನು?

“ಭಾರತವು ಅಮೆರಿಕದ ಕಾರ್ಯತಂತ್ರದ ಪಾಲುದಾರ. ನಾವು ಪಾಕಿಸ್ತಾನ ಮತ್ತು ಅಮೆರಿಕದ ನಡುವೆ ಬಲವಾದ ಸಂಬಂಧವಿದೆ ಎಂದು ಭ್ರಮೆಯಲ್ಲಿರುತ್ತೇವೆ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಕೆಲವು ವಿಷಯಗಳು ಸುಧಾರಿಸಿರುವುದು ನಿಜ, ಆದರೆ ದೀರ್ಘಾವಧಿಯಲ್ಲಿ ಅಮೆರಿಕ ನಮಗೆ ಎಂದಿಗೂ ಕಾರ್ಯತಂತ್ರದ ಪಾಲುದಾರನಾಗುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು” ಎಂದು ಬಾಸಿತ್ ಎಚ್ಚರಿಸಿದ್ದಾರೆ.

ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವು ಪಾಕಿಸ್ತಾನ ಮತ್ತು ಚೀನಾದ ನಡುವೆ ಇರುವಂತಹ ಗಾಢವಾದ ಕಾರ್ಯತಂತ್ರದ ಸಂಬಂಧದಂತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಅಧ್ಯಕ್ಷ ಟ್ರಂಪ್ ಅವರಿಂದ ಸಾಧ್ಯವಾದಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಿ, ಆದರೆ ನಾವು ಅವರ ಕಾರ್ಯತಂತ್ರದ ಪಾಲುದಾರರಾಗಿದ್ದೇವೆ ಎಂದು ಭಾವಿಸಬೇಡಿ. ಅಮೆರಿಕವು ಭಾರತದ ಅಗ್ನಿ-5 ಮತ್ತು ಅಗ್ನಿ-6 ಕ್ಷಿಪಣಿಗಳ ಬಗ್ಗೆ ಪ್ರಸ್ತಾಪ ಮಾಡದಿರುವುದು ಕೇವಲ ಆಕಸ್ಮಿಕ ಅಥವಾ ತಪ್ಪು ಎಂದು ತಿಳಿಯಬೇಡಿ. ಅವರು ಭಾರತವನ್ನು ನೋಡುವ ದೃಷ್ಟಿಕೋನವೇ ಬೇರೆ, ಪಾಕಿಸ್ತಾನವನ್ನು ನೋಡುವ ದೃಷ್ಟಿಕೋನವೇ ಬೇರೆ” ಎಂದು ಅವರು ಹೇಳಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/abdul-basit-sparks-outrage-with-provocative-remarks-targeting-new-delhi-and-mumbai-huge-viral-447963.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo