
Sports
oi-Madhusudhan KR
RCB IPL 2026 Ticket: ಬೆಂಗಳೂರಿನಲ್ಲಿ ಮತ್ತೆ ಕ್ರಿಕೆಟ್ ಹಬ್ಬದ ಸಂಭ್ರಮ ಶುರುವಾಗುತ್ತಿದೆ. ಬಹುನಿರೀಕ್ಷಿತ ಐಪಿಎಲ್ 2026ರ ಉದ್ಘಾಟನಾ ಪಂದ್ಯಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಂದಿನಿಂದ (ಮಾರ್ಚ್ 24) ಅಧಿಕೃತವಾಗಿ ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭವಾಗಿದೆ.
ಮಾರ್ಚ್ 28ರಂದು ಎಂ.ಚಿನ್ನಸ್ವಾಮಿ ಅಂಗಳದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಮೂಲಕ 19ನೇ ಆವೃತ್ತಿಯ ಟೂರ್ನಿಗೆ ಚಾಲನೆ ಸಿಗಲಿದೆ.

ಟಿಕೆಟ್ ಬುಕ್ ಮಾಡುವುದು ಹೇಗೆ?
ಕೇವಲ ಆರ್ಸಿಬಿಯ ಅಧಿಕೃತ ವೆಬ್ಸೈಟ್ ಅಥವಾ ಆರ್ಸಿಬಿ ಆ್ಯಪ್ (Official RCB App)ನಲ್ಲಿ ಮಾತ್ರ ಟಿಕೆಟ್ ಖರೀದಿಸಿ. ಬೇರೆ ಯಾವುದೇ ಅನಧಿಕೃತ ಸೈಟ್ಗಳಲ್ಲಿ ಟಿಕೆಟ್ ಖರೀದಿಸಿ ಮೋಸ ಹೋಗದಂತೆ ಆರ್ಸಿಬಿ ಫ್ರಾಂಚೈಸಿ ಅಭಿಮಾನಿಗಳಿಗೆ ಎಚ್ಚರಿಕೆಯ ಸೂಚನೆಯನ್ನು ನೀಡಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟ ನೋಡಲು ಭಾರಿ ಕ್ರೇಜ್ ಇರುವುದರಿಂದ ಟಿಕೆಟ್ಗಳು ಬೇಗನೆ ಸೋಲ್ಡ್ ಔಟ್ ಆಗುವ ಸಾಧ್ಯತೆಯಿದೆ.
ಪಂದ್ಯದ ದಿನದ ವಿಶೇಷ ಸೌಲಭ್ಯಗಳು
* ಉಚಿತ ಮೆಟ್ರೋ ಪ್ರಯಾಣ: ನೀವು ಪಂದ್ಯದ ಟಿಕೆಟ್ ಹೊಂದಿದ್ದರೆ, ಪಂದ್ಯದ ದಿನದಂದು ಕ್ರೀಡಾಂಗಣಕ್ಕೆ ಬರಲು ಮತ್ತು ಮರಳಲು ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
* ಡಿಜಿಟಲ್ ಕ್ಯೂಆರ್ ಕೋಡ್: ನಿಮ್ಮ ಟಿಕೆಟ್ನಲ್ಲಿ ಗೇಟ್ ಸಂಖ್ಯೆ ಮತ್ತು ಆಸನದ ವಿವರಗಳಿರುತ್ತವೆ. ಆದರೆ, ಮೈದಾನ ಪ್ರವೇಶಿಸಲು ಬೇಕಾದ QR ಕೋಡ್ ಪಂದ್ಯದ ದಿನದಂದು ಗೇಟ್ ತೆರೆಯುವ ಕೆಲವು ಗಂಟೆಗಳ ಮೊದಲು ಮಾತ್ರ ನಿಮ್ಮ ಆ್ಯಪ್ನಲ್ಲಿ ಆಕ್ಟಿವೇಟ್ ಆಗಿರಲಿದೆ.
ಪಂದ್ಯ ನೋಡಲು ಬರುವವರು ಕೇವಲ ಕಬ್ಬನ್ ರೋಡ್, ಲಿಂಕ್ ರೋಡ್ ಮತ್ತು ಎಂಜಿ ರೋಡ್ ಪ್ರವೇಶ ದ್ವಾರಗಳ ಮೂಲಕ ಮಾತ್ರ ಬರಲು ಅವಕಾಶವಿದೆ. ಕ್ರೀಡಾಂಗಣದಲ್ಲಿ ಯಾವುದೇ ಗೊಂದಲವಿಲ್ಲದೆ ನಿಮ್ಮ ಆಸನ ತಲುಪಲು ಟಿಕೆಟ್ನಲ್ಲಿ ನೀಡಿರುವ ನಿರ್ಗಮನ ಮತ್ತು ಪ್ರವೇಶ ಗೇಟ್ ಸಂಖ್ಯೆಗಳನ್ನು ಮೊದಲೇ ಗಮನಿಸಿಕೊಳ್ಳಿ. ಇನ್ನೂ ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ಕಾರಣದಿಂದ ಸದ್ಯಕ್ಕೆ ಮೊದಲ ಹಂತದ ವೇಳಾಪಟ್ಟಿ ಮಾತ್ರ ಪ್ರಕಟವಾಗಿದ್ದು, ಆರ್ಸಿಬಿ ಒಟ್ಟು 4 ಪಂದ್ಯಗಳನ್ನು ಆಡಲಿದೆ.
𝗥𝗖𝗕 𝘃𝘀 𝗦𝗥𝗛: 𝗧𝗜𝗖𝗞𝗘𝗧𝗦 𝗚𝗢 𝗢𝗡 𝗦𝗔𝗟𝗘 𝗧𝗢𝗗𝗔𝗬 (𝟮𝟰𝘁𝗵 𝗠𝗮𝗿𝗰𝗵) ❤️
Your favourite team is back home and we can’t wait to play in front of you, 12th Man Army. Important Ticket information below ⬇️
🎟️ Where to buy tickets?
Tickets will be available only… pic.twitter.com/2kFhFPH4IY— Royal Challengers Bengaluru (@RCBTweets) March 24, 2026
ಮೊದಲ ಹಂತದ ಆರ್ಸಿಬಿ ಪಂದ್ಯಗಳು
* ಮಾರ್ಚ್ 28: vs ಸನ್ ರೈಸರ್ಸ್ ಹೈದರಾಬಾದ್ (ಬೆಂಗಳೂರು) – ಸಂಜೆ 7:30
* ಏಪ್ರಿಲ್ 05: vs ಚೆನ್ನೈ ಸೂಪರ್ ಕಿಂಗ್ಸ್ (ಬೆಂಗಳೂರು) – ಸಂಜೆ 7:30
* ಏಪ್ರಿಲ್ 10: vs ರಾಜಸ್ಥಾನ್ ರಾಯಲ್ಸ್ (ಗುವಾಹಟಿ) – ಸಂಜೆ 7:30
* ಏಪ್ರಿಲ್ 12: vs ಮುಂಬೈ ಇಂಡಿಯನ್ಸ್ (ಮುಂಬೈ) – ಸಂಜೆ 7:30
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ipl-2026-opening-match-tickets-go-live-rcb-vs-srh-clash-at-bengaluru-m-chinnaswamy-on-march-28-448175.html. xn--babytilbehr-pgb.com does not claim ownership of this content. All rights remain with the original publisher.
