Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post | Foundation of IT Selection Goes Viral: South Indians Question Linguistic Equality Over North Indian Marksheet

India

oi-Hitesh Y

Viral Post: ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಹೆಚ್ಚಾಗುತ್ತಿದೆ. ದಕ್ಷಿಣ ಭಾರತದ ತಮಿಳುನಾಡು ರಾಜ್ಯವನ್ನು ಹೊರತುಪಡಿಸಿ ಕರ್ನಾಟಕವು ಸೇರಿದಂತೆ ಇನ್ನುಳಿದ ರಾಜ್ಯಗಳು ಹಿಂದಿ ಭಾಷೆಯನ್ನು ತೃತೀಯ ಭಾಷೆಯಾಗಿ ಅಳವಡಿಸಿಕೊಂಡಿವೆ. ಆದರೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ದಕ್ಷಿಣ ಭಾರತದ ಯಾವುದೇ ರಾಜ್ಯದ ಭಾಷೆಯನ್ನೂ ಅಳವಡಿಸಿಕೊಂಡಿಲ್ಲ.

ಇದೀಗ ಉತ್ತರ ಭಾರತೀಯ ವಿದ್ಯಾರ್ಥಿಗಳು Foundation of It ವಿಷಯವನ್ನು ಕಲಿಯುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ದಕ್ಷಿಣ ಭಾರತೀಯರು ಮಾತ್ರ ಹಿಂದಿ ಭಾಷೆಯನ್ನು ಕಲಿಯಬೇಕು. ಆದರೆ, ಉತ್ತರ ಭಾರತೀಯ ವಿದ್ಯಾರ್ಥಿಗಳು ಮಾತ್ರ ಬೇರೆ ಬೇರೆ ಹೊಸ ಆಯ್ಕೆಗಳನ್ನು ಕಲಿತು ಅವಕಾಶಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಏನು ಚರ್ಚೆ ಆಗುತ್ತಿದೆ. ಇಷ್ಟಕ್ಕೂ ವೈರಲ್ ಆಗಿರುವ ಮಾರ್ಕ್ಸ್ ಕಾರ್ಡ್‌ನಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.

Viral Post

ಉತ್ತರ ಭಾರತೀಯರ ಶಿಕ್ಷಣ / ವಿದ್ಯಾಭ್ಯಾಸ ಆಯ್ಕೆಯ ಬಗ್ಗೆ ಇದೀಗ ಮತ್ತೆ ಚರ್ಚೆ ಶುರುವಾಗಿದೆ. ಮನೋಜ್ ಲಾಡ್ ಎನ್ನುವವರು ಉತ್ತರ ಭಾರತದ ವಿದ್ಯಾರ್ಥಿಯೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ವೊಂದನ್ನು ರೀಶೇರ್ ಮಾಡಿಕೊಂಡಿದ್ದು, ಉತ್ತರ ಭಾರತೀಯರು ಯಾಕೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳನ್ನು ಕಲಿಯಬೇಕು ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್‌ನಲ್ಲಿ ಏನಿದೆ

ದಕ್ಷಿಣ ಭಾರತದಲ್ಲಿ, ಮಕ್ಕಳು ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಲಿತುಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ ಉತ್ತರ ಭಾರತದಲ್ಲಿ ಮಕ್ಕಳಿಗೆ ಕಲಿಯಲು ಕೇವಲ ಎರಡು ಭಾಷೆಗಳಿವೆ, ಏಕೆ ಇಂತಹ ತಾರತಮ್ಯ. ಉತ್ತರದ ಎಷ್ಟು ರಾಜ್ಯಗಳಲ್ಲಿ 3 ಭಾಷಾ ನಿಯಮವಿದೆಯೇ ಉತ್ತರ ರಾಜ್ಯಗಳು ಸಹ 3 ಭಾಷಾ ನಿಯಮಗಳನ್ನು ಜಾರಿಗೆ ತರಲಿ. ಹೆಚ್ಚಿನ ಜನರು ಉತ್ತಮ ಶಿಕ್ಷಣ, ಉದ್ಯೋಗ ಮತ್ತು ಜೀವನಶೈಲಿಯನ್ನು ಹುಡುಕುತ್ತಾ ದಕ್ಷಿಣ ಭಾರತಕ್ಕೆ ವಲಸೆ ಹೋಗುತ್ತಿದ್ದಾರೆ ಎಂಬ ಅಂಶವನ್ನು ಪರಿಗಣಿಸಿ, ಉತ್ತರ ಭಾರತದ ರಾಜ್ಯಗಳ ಪಠ್ಯಕ್ರಮದಲ್ಲಿ ಯಾವುದೇ ದಕ್ಷಿಣ ಭಾರತೀಯ ಭಾಷೆಗಳನ್ನು ಸೇರಿಸುವುದು ಅರ್ಥಪೂರ್ಣವಾಗಿದೆ. ಆದ್ದರಿಂದ, ಅವರು ನಂತರ ದಕ್ಷಿಣ ಭಾರತಕ್ಕೆ ವಲಸೆ ಹೋದಾಗ, ಭಾಷೆಯ ಕಾರಣದಿಂದಾಗಿ ಯಾವುದೇ ಸಮಸ್ಯೆ ಇರುವುದಿಲ್ಲ.

ಹಿಂದಿ ನಮ್ಮ ರಾಷ್ಟ್ರೀಯ ಭಾಷೆಯಲ್ಲ, ಭಾರತವು ಹಲವಾರು ಅಧಿಕೃತ ಭಾಷೆಗಳನ್ನು ಹೊಂದಿದೆ. ಆದರೆ ಒಂದೇ ಒಂದು ರಾಷ್ಟ್ರೀಯ ಭಾಷೆ ಎನ್ನುವುದು ನಮ್ಮಲ್ಲಿ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಭಾರತದ ಯುವತಿಯೊಬ್ಬರು ಎಲ್ಲರೂ ಪ್ರೌಢಶಾಲಾ ಅಂಕಪಟ್ಟಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ನನ್ನದು ಎಂದು ತಮ್ಮ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನು ಹಂಚಿಕೊಂಡಿದ್ದಾರೆ.

ಇದರಲ್ಲಿ ತ್ರಿಭಾಷೆ ಇಲ್ಲ, Foundation of It ಎನ್ನುವ ಐಚ್ಛಿಕ ಭಾಷೆಯ ಆಯ್ಕೆಯೂ ಇದೆ. ಹೀಗಾಗಿ ದಕ್ಷಿಣ ಭಾರತೀಯರು ಈ ವಿಷಯವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ನಮಗೆ ಮಾತ್ರ ಯಾಕೆ ಹಿಂದಿ ಹೇರಿಕೆ ಎಂದು ಕೇಳಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/foundation-of-it-selection-goes-viral-south-indians-question-linguistic-equality-over-north-indian-448177.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo