
Entertainment
oi-Hitesh Y
Rashmika Mandanna: ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಹನಿಮೂನ್ ಸಂಭ್ರಮದಲ್ಲಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಥಾಯ್ಲೆಂಡ್‌ನಲ್ಲಿ ದಂಪತಿ ಬೀಡುಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಪ್ರವಾಸದಲ್ಲಿ ಅವರ ಆತ್ಮೀಯ ಸ್ನೇಹಿತರು ಸಹ ಸಾಥ್ ಕೊಟ್ಟಿದ್ದಾರೆ. ಇನ್ನು ಇತ್ತೀಚೆಗೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ತಬ್ಬಿಕೊಂಡಿದ್ದ ಫೋಟೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ತಮ್ಮ ಕನಸಿನ ಹನಿಮೂನ್ ಬಗ್ಗೆ ಜೋಡಿ ಅಧಿಕೃತವಾಗಿ ಪೋಸ್ಟ್‌ವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ವಿವಾಹ ಸಂಭ್ರಮವನ್ನು ದೇಶದ ಇನ್ನುಳಿದ ಸೆಲೆಬ್ರಿಟಿಗಳಿಗಿಂತಲೂ ಭಿನ್ನವಾಗಿ ಸಂಭ್ರಮಿಸಿದ್ದರು. ದೇಶದ ಪ್ರಮುಖ ನಗರಗಳಲ್ಲಿ ಫ್ಯಾನ್ಸ್‌ಗಳನ್ನು ಮೀಟ್ ಮಾಡುವುದು, ಅವರಿಗೆ ವಿಶೇಷ ಊಟದ ವ್ಯವಸ್ಥೆ, ಊರಿನವರಿಗೆ ಊಟದ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವಂತಹ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದಾದ ನಂತರ ಅವರು ಹನಿಮೂನ್‌ಗಾಗಿ ಥಾಯ್ಲೆಂಡ್‌ಗೆ ಭೇಟಿ ನೀಡಿದ್ದಾರೆ.

ಹನಿಮೂನ್‌ಗಾಗಿ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಥಾಯ್ಲೆಂಡಿನ ಕೊಹ್ ಸಮುಯಿ ದ್ವೀಪಕ್ಕೆ ತೆರಳಿದ್ದಾರೆ. ಅಲ್ಲಿನ ರೆಸಾರ್ಟ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದು, ಈ ಪ್ರವಾಸದಲ್ಲಿ ಅವರ ಸ್ನೇಹಿತರು ಸಹ ಜೊತೆಗಿದ್ದಾರೆ. ಮದುವೆ ಸಂಭ್ರಮದ ನಂತರ, ನಾವು ಒಂದೆರಡು ದಿನಗಳ ವರೆಗೆ ವಿಶ್ರಾಂತಿ ಪಡೆಯುವುದಕ್ಕೆ ಬಯಸಿದ್ದೆವು. ಶಾಂತವಾದ ಬೆಳಿಗ್ಗೆ, ಮಧ್ಯಾಹ್ನ ಈಜು ಹಾಗೂ ಸಂಜೆ ಟೇಬಲ್ ಟೆನ್ನಿಸ್, ಪೂಲ್ ಹಾಗೂ ಸಿನಿಮಾ ನೋಡುವುದರೊಂದಿಗೆ ಹೆಚ್ಚು ಕಾಲ ಖುಷಿ ಖುಷಿಯಾಗಿದ್ದೆವು. ಕೊಹ್ ಸಮುಯಿಯಲ್ಲಿರುವ ಈ ರೆಸಾರ್ಟ್ ಮನೆಯಂತೆ ಭಾಸವಾಗುತ್ತಿದೆ. ಆ ದಿನಗಳ ಕೆಲವು ಕ್ಷಣಗಳು… ಸ್ನೇಹಿತರೊಂದಿಗೆ ಮತ್ತು ಮನೆ ನಗುವಿನಿಂದ ತುಂಬಿತ್ತು ಎಂದು ರಶ್ಮಿಕಾ ಮಂದಣ್ಣ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
Rashmika Mandanna: ಫೆಬ್ರವರಿ 26ರಂದು ಅದ್ಧೂರಿ ವಿವಾಹ
ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹವು ಫೆಬ್ರವರಿ 26ರಂದು ರಾಜಸ್ಥಾನದ ಉದಯ್‌ಪುರದಲ್ಲಿ ನಡೆದಿತ್ತು. ವಿವಾಹದ ನಂತರ ಅವರು ಹೈದರಾಬಾದ್‌ನಲ್ಲಿ ರಿಸೆಪ್ಷನ್ ಪಾರ್ಟಿ ಆಯೋಜಿಸಿದ್ದರು.
ಮುಂದಿನ 5 ವರ್ಷ ಅವಧಿಗೆ ಇದೇ ರೀತಿ ಇನ್ನಷ್ಟು ದೇಶಗಳನ್ನು ಸುತ್ತಾಡಲು ಪ್ಲ್ಯಾನ್ ಇದೆ ಎಂದು ದಂಪತಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ರೀಲ್‌ವೊಂದರಲ್ಲಿ ಇಬ್ಬರೂ ಮಾತನಾಡಿದ್ದಾರೆ. ಈ ಜೋಡಿ ಕಳೆದ ಸುಂದರ ಕ್ಷಣಗಳ ಝಲಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/rashmika-mandanna-and-vijay-deverakonda-dream-honeymoon-buzz-couple-drops-special-video-fans-excit-448329.html. xn--babytilbehr-pgb.com does not claim ownership of this content. All rights remain with the original publisher.
