IPL 2026: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ ‘ನಮ್ಮ ಮೆಟ್ರೋ’ ಪ್ರಯಾಣ ಉಚಿತ | IPL 2026: Free Namma Metro Ride for Fans: RCB vs SRH Opener at Bengalurru’s M.Chinnaswamy Stadium

Sports

oi-Madhusudhan KR

IPL 2026 Free Metro: ಐಪಿಎಲ್‌ 19 ಸೀಸನ್‌ ಮಾರ್ಚ್‌ 28ರಿಂದ ಆರಂಭವಾಗಲಿದ್ದು, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ತಂಡಗಳು ಮುಖಾಮುಖಿಯಾಗಲಿವೆ. ಇನ್ನೂ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಸಂಚಾರದ ಕಿರಿಕಿರಿ ತಪ್ಪಿಸಲು ಅಧಿಕಾರಿಗಳು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಐಪಿಎಲ್ 2026ರ ಪಂದ್ಯದ ಅಧಿಕೃತ ಟಿಕೆಟ್ ಹೊಂದಿರುವ ಅಭಿಮಾನಿಗಳು ಪಂದ್ಯದ ದಿನದಂದು ‘ನಮ್ಮ ಮೆಟ್ರೋ’ದಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಮೆಟ್ರೋ ನಿಲ್ದಾಣಗಳಲ್ಲಿ ನಿಮ್ಮ ಪಂದ್ಯದ ಟಿಕೆಟ್ ಅನ್ನು ತೋರಿಸುವ ಮೂಲಕ ಯಾವುದೇ ಶುಲ್ಕವಿಲ್ಲದೆ ಪ್ರಯಾಣ ಮಾಡಬಹುದಾಗಿದೆ.

IPL 2026 Free Namma Metro Ride for Fans RCB vs SRH Opener at Bengalurru s M Chinnaswamy Stadium

ಪ್ರಯಾಣಿಕರಿಗೆ ಆಗುವ ಲಾಭಗಳೇನು?

* ಪ್ರಮುಖ ನಿಲ್ದಾಣಗಳು: ಸ್ಟೇಡಿಯಂಗೆ ಹತ್ತಿರವಿರುವ ಎಂ.ಜಿ.ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳು ಅಭಿಮಾನಿಗಳ ಓಡಾಟಕ್ಕೆ ಪ್ರಮುಖ ಪ್ರವೇಶ ಮತ್ತು ನಿರ್ಗಮನ ದ್ವಾರಗಳಾಗಿ ಕಾರ್ಯನಿರ್ವಹಿಸಲಿವೆ.

* ಪಂದ್ಯದ ಸಮಯದಲ್ಲಿ ಕ್ರೀಡಾಂಗಣದ ಸುತ್ತಮುತ್ತ ಇರುವ ವಾಹನ ದಟ್ಟಣೆಯಿಂದ ಅಭಿಮಾನಿಗಳು ಪಾರಾಗಬಹುದು.

* ಹಣ ಉಳಿತಾಯ: ಪಾರ್ಕಿಂಗ್ ಸಮಸ್ಯೆ ಮತ್ತು ದುಬಾರಿ ಟ್ಯಾಕ್ಸಿ ದರಗಳ ಬದಲಿಗೆ ಮೆಟ್ರೋ ಪ್ರಯಾಣ ಉಚಿತವಾಗಿ ಲಭ್ಯವಿರುವುದರಿಂದ ಅಭಿಮಾನಿಗಳಿಗೆ ಆರ್ಥಿಕ ಹೊರೆ ತಪ್ಪಿದಂತಾಗಲಿದೆ.

* ತಡರಾತ್ರಿಯವರೆಗೂ ಮೆಟ್ರೋ ಸೇವೆ: ಸಾಮಾನ್ಯವಾಗಿ ಪಂದ್ಯಗಳು ತಡವಾಗಿ ಮುಗಿಯುವುದರಿಂದ, ಆ ದಿನಗಳಲ್ಲಿ ಮೆಟ್ರೋ ಸಂಚಾರದ ಅವಧಿಯನ್ನು ಕೂಡ ವಿಸ್ತರಣೆ ಮಾಡಲಾಗುತ್ತದೆ ಎನ್ನುವ ಮಾಹಿತಿಯಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 28ರಿಂದ ಏಪ್ರಿಲ್ 12ರ ವರೆಗೆ ಐಪಿಎಲ್ ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ, ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಯಾವುದೇ ಅಡೆತಡೆಯಿಲ್ಲದೆ ಸುಗಮ ಮತ್ತು ಸುಲಭವಾದ ಪ್ರಯಾಣಕ್ಕಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಉಚಿತ ಮೆಟ್ರೋ ಪ್ರಯಾಣದಂತಹ ಕ್ರಮಗಳು ಅಭಿಮಾನಿಗಳು ಸಮಯಕ್ಕೆ ಸರಿಯಾಗಿ ಕ್ರೀಡಾಂಗಣ ತಲುಪಲು ಮತ್ತು ಪಂದ್ಯ ಮುಗಿದ ನಂತರ ಸುರಕ್ಷಿತವಾಗಿ ಮನೆಗೆ ಮರಳಲು ಸಹಕಾರಿ ಆಗಲಿವೆ.

ಯಾರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣ?

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಡುವಿನ ವಿಶೇಷ ಸಹಯೋಗದೊಂದಿಗೆ, ಉಚಿತ ಮೆಟ್ರೋ ಪ್ರಯಾಣದ ಸೌಲಭ್ಯವನ್ನು ನೇರವಾಗಿ ಪಂದ್ಯದ ಟಿಕೆಟ್‌ಗಳೊಂದಿಗೆ ಸಂಯೋಜಿಸಲಾಗಿದೆ. ರಸ್ತೆಗಳಲ್ಲಿ ವಾಹನ ಸಂಚಾರ ದಟ್ಣಣೆ, ಸಮಯಕ್ಕೆ ಸರಿಯಾಗಿ ಕ್ರೀಡಾಂಗಣ ತಲುಪಲು ಈ ವ್ಯವಸ್ಥೆ ತುಂಬಾ ಅನುಕೂಲವಾಗಲಿದೆ.

ಮೆಟ್ರೋದಲ್ಲಿ ಉಚಿತ ಪ್ರಯಾಣಕ್ಕೆ ಪಾಲಿಸಬೇಕಾದ ನಿಯಮಗಳು

* ನೀವು ಪಂದ್ಯದ ದಿನದಂದು ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಲು ನಿಮ್ಮ ಬಳಿ ಆ ದಿನದ ಐಪಿಎಲ್ ಪಂದ್ಯದ ಅಧಿಕೃತ ಟಿಕೆಟ್ ಇರಬೇಕು.

* ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರದಲ್ಲಿರುವ ಸಿಬ್ಬಂದಿ ಅಥವಾ ಎಎಫ್‌ಸಿ ಗೇಟ್‌ಗಳ ಬಳಿ ನಿಮ್ಮ ಪಂದ್ಯದ ಟಿಕೆಟ್ ಅನ್ನು ತೋರಿಸಬೇಕು.

* ನಿಮ್ಮ ಪಂದ್ಯದ ಟಿಕೆಟ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಮೆಟ್ರೋ ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ನೇರವಾಗಿ ಪ್ರವೇಶ ಪಡೆಯುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಸೌಲಭ್ಯವು ಪಂದ್ಯ ನಡೆಯುವ ದಿನದಂದು ಮಾತ್ರ ಲಭ್ಯವಿರುತ್ತದೆ.

* ಪಂದ್ಯಕ್ಕೆ ಕೆಲವು ಗಂಟೆಗಳ ಮೊದಲು ಮತ್ತು ಪಂದ್ಯ ಮುಗಿದ ನಂತರದ ಅವಧಿಯಲ್ಲಿ ಇದು ಅನ್ವಯಿಸುತ್ತದೆ ಎಂದು ತಿಳಿದುಬಂದಿದೆ. ಈ ಕ್ರಮವು ಕೇವಲ ಅಭಿಮಾನಿಗಳಿಗೆ ಆರ್ಥಿಕ ಹೊರೆ ಕಡಿಮೆ ಮಾಡುವುದು ಮಾತ್ರವಲ್ಲದೆ, ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ipl-2026-free-namma-metro-ride-for-fans-rcb-vs-srh-opener-at-bengalurrus-m-chinnaswamy-stadium-448337.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo