ಇಸ್ರೇಲ್-ಅಮೆರಿಕ ಮೇಲೆ ದಾಳಿಗೆ ಬಳಸಿದ ಕ್ಷಿಪಣಿಗಳ ಮೇಲೆ “ಭಾರತೀಯರಿಗೆ ಧನ್ಯವಾದ” ಎಂದು ಬರೆದ ಇರಾನ್‌ | Iran Missiles Carry Thank You Indians Message Amid Attack on Israel United States diplomatic debate

International

oi-Manohara M

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ಉಲ್ಬಣಗೊಂಡಿದ್ದು, ಅಮೆರಿಕ ಮತ್ತು ಇಸ್ರೇಲ್‌ನ ಆಯಕಟ್ಟಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಬೃಹತ್ ಕ್ಷಿಪಣಿ ದಾಳಿ ನಡೆಸಿದೆ. ‘ಆಪರೇಷನ್ ಟ್ರೂ ಪ್ರಾಮಿಸ್ 4’ ಅಡಿಯಲ್ಲಿ ಶುಕ್ರವಾರ ಮುಂಜಾನೆ 83ನೇ ಹಂತದ ಸರಣಿ ದಾಳಿಯನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಯಶಸ್ವಿಯಾಗಿ ಪೂರೈಸಿದೆ. ಈ ದಾಳಿಯ ಬೆನ್ನಲ್ಲೇ ಮುಂಬೈನಲ್ಲಿರುವ ಇರಾನ್ ರಾಯಭಾರ ಕಚೇರಿಯು “ಭಾರತದ ಜನತೆಗೆ ಧನ್ಯವಾದಗಳು” ಎಂಬ ವಿಶೇಷ ಸಂದೇಶವನ್ನು ಹಂಚಿಕೊಂಡಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಸಾಲನ್ನು ಇರಾನ್‌ನ ಕ್ಷಿಪಣಿಗಳ ಮೇಲೂ ಬರೆಯಲಾಗಿದೆ ಎಂದು ತಿಳಿಸಿದೆ.

ಇರಾನ್‌ನ ಏರೋಸ್ಪೇಸ್ ಫೋರ್ಸ್ ತನ್ನ ಎಕ್ಸ್ ಖಾತೆಯಲ್ಲಿ ಭಾರತ, ಸ್ಪೇನ್, ಪಾಕಿಸ್ತಾನ ಮತ್ತು ಜರ್ಮನಿ ದೇಶಗಳ ಜನರಿಗೆ ಕೃತಜ್ಞತೆ ಸಲ್ಲಿಸಿದೆ. ವಿಶೇಷವಾಗಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ತೋರಿದ “ಬೆಂಬಲ ಮತ್ತು ಒಗ್ಗಟ್ಟಿಗೆ” ಈ ದೇಶಗಳ ಜನರಿಗೆ ಇರಾನ್ ಅಭಿನಂದನೆ ಸಲ್ಲಿಸಿದೆ. ಇಸ್ರೇಲ್‌ನ ಅಶ್ಡೋಡ್‌ನಲ್ಲಿರುವ ತೈಲ ಡಿಪೋಗಳು ಹಾಗೂ ಅಮೆರಿಕದ ಅಲ್-ಧಫ್ರಾ ಮತ್ತು ಅಲಿ ಅಲ್-ಸೇಲಂ ವಾಯುನೆಲೆಗಳನ್ನು ಈ 83ನೇ ಹಂತದ ದಾಳಿಯಲ್ಲಿ ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

Iran Missiles

ಈ ದಾಳಿಯ ಸಂದರ್ಭದಲ್ಲಿ ಇರಾನ್ ಒಂದು ವಿಶಿಷ್ಟ ರಾಜತಾಂತ್ರಿಕ ನಡೆಯನ್ನು ಪ್ರದರ್ಶಿಸಿದೆ. ದಾಳಿಗೆ ಬಳಸಲಾದ ಕ್ಷಿಪಣಿಗಳ ಮೇಲೆ “ಧನ್ಯವಾದಗಳು ಭಾರತದ ಜನರೇ” ಎಂದು ಹಸ್ತಪ್ರತಿಯಲ್ಲಿ ಬರೆಯಲಾಗಿತ್ತು. ಮುಂಬೈನಲ್ಲಿರುವ ಇರಾನ್‌ನ ಕೌನ್ಸಿಲೇಟ್ ಜನರಲ್ ಈ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ತಮ್ಮ ದೇಶದ ಹೋರಾಟಕ್ಕೆ ಬೆಂಬಲ ಮತ್ತು ಒಗ್ಗಟ್ಟು ಸೂಚಿಸಿದ ಭಾರತ, ಸ್ಪೇನ್, ಪಾಕಿಸ್ತಾನ ಮತ್ತು ಜರ್ಮನಿಯ ಜನರಿಗೆ ಕೃತಜ್ಞತೆಗಳು” ಎಂದು ತಿಳಿಸಿದೆ.

ದಾಳಿ ಮಾಡಿದ ಜಾಗಗಳು

ಈ 83ನೇ ಹಂತದ ದಾಳಿಯಲ್ಲಿ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಲಾಗಿತ್ತು. ಪ್ರಮುಖವಾಗಿ ಅಶ್ಡೋಡ್‌ನಲ್ಲಿರುವ ತೈಲ ಸಂಗ್ರಹಣಾ ಟ್ಯಾಂಕ್‌ಗಳು ಮತ್ತು ಡಿಪೋಗಳು, ಹಾಗೂ ಮೋದಿನ್ (Modi’in) ವಸಾಹತುವಿನಲ್ಲಿರುವ ಮಿಲಿಟರಿ ಸಿಬ್ಬಂದಿ ಕೇಂದ್ರ. ಅಲ್-ಧಫ್ರಾ ಮತ್ತು ಅಲ್-ಉದೇರಿಯಲ್ಲಿರುವ ಅಮೆರಿಕದ ಮಿಲಿಟರಿ ಬೇಸ್‌ಗಳು. ಅಲಿ ಅಲ್-ಸೇಲಂ ವಾಯುನೆಲೆಯಲ್ಲಿರುವ ಡ್ರೋನ್ ಹ್ಯಾಂಗರ್‌ಗಳು ಮತ್ತು ಶೇಖರಣಾ ಮಳಿಗೆಗಳು. ಶೇಖ್ ಇಸಾ ಬೇಸ್‌ನಲ್ಲಿರುವ ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆಯ ದುರಸ್ತಿ ಘಟಕ ಮತ್ತು ಅಮೆರಿಕನ್ ಯುದ್ಧ ವಿಮಾನಗಳ ಇಂಧನ ಟ್ಯಾಂಕ್‌ಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ.

ಈ ಕಾರ್ಯಾಚರಣೆಯನ್ನು “ಯಾ ಅಬಾ ಅಬ್ದುಲ್ಲಾ ಅಲ್-ಹುಸೇನ್” ಎಂಬ ಹೆಸರಿನೊಂದಿಗೆ ನಡೆಸಲಾಗಿದೆ. ಇದರಲ್ಲಿ ದೀರ್ಘ ಮತ್ತು ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು, ಘನ ಮತ್ತು ದ್ರವ ಇಂಧನ ಚಾಲಿತ ಕ್ಷಿಪಣಿಗಳು, ಹಾಗೂ ಆತ್ಮಹತ್ಯಾ ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಇರಾನ್ ತಿಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 6ರವರೆಗೆ ಇರಾನ್‌ನ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರೂ, ಇತ್ತ ಇರಾನ್ ತನ್ನ ದಾಳಿಯ ಸರಣಿಯನ್ನು ಮುಂದುವರಿಸಿದೆ. ಇರಾನ್ ವಿದೇಶಾಂಗ ಸಚಿವರು, ಶತ್ರು ರಾಷ್ಟ್ರಗಳ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವುದನ್ನು ತಡೆಯುವ ಕಾನೂನುಬದ್ಧ ಹಕ್ಕು ನಮಗಿದೆ ಎಂದು ಎಚ್ಚರಿಸಿದ್ದಾರೆ.

ದಾಳಿಗೆ ಏನೆಲ್ಲ ಬಳಕೆ?

ಶೇಖ್ ಇಸಾ ವಾಯುನೆಲೆಯಲ್ಲಿರುವ ಅಮೆರಿಕದ ಹೆಮ್ಮೆಯ ‘ಪೇಟ್ರಿಯಾಟ್ ಕ್ಷಿಪಣಿ ವ್ಯವಸ್ಥೆ’ಯ ದುರಸ್ತಿ ಮತ್ತು ನಿರ್ವಹಣಾ ಹ್ಯಾಂಗರ್‌ಗಳ ಮೇಲೆ ದಾಳಿ ಮಾಡಲಾಗಿದೆ. ಅಮೆರಿಕನ್ ಫೈಟರ್ ಜೆಟ್ ಮತ್ತು ಯುದ್ಧ ವಿಮಾನಗಳಿಗೆ ಇಂಧನ ಪೂರೈಸುವ ಬೃಹತ್ ಟ್ಯಾಂಕ್‌ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಅಶ್ಡೋಡ್‌ನ ತೈಲ ಡಿಪೋ, ಮೋದಿನ್ ವಸಾಹತುವಿನ ಮಿಲಿಟರಿ ಕೇಂದ್ರ ಹಾಗೂ ಅಮೆರಿಕದ ಮಾಹಿತಿ ವಿನಿಮಯ ಕೇಂದ್ರಗಳ ಮೇಲೆ ನಿಖರ ದಾಳಿ ನಡೆಸಲಾಗಿದೆ. ಈ 83ನೇ ಹಂತದ ಕಾರ್ಯಾಚರಣೆಯಲ್ಲಿ ಇರಾನ್ ತನ್ನ ಶಸ್ತ್ರಾಸ್ತ್ರ ಬಲವನ್ನು ಪ್ರದರ್ಶಿಸಿದೆ. ದೀರ್ಘ ಮತ್ತು ಮಧ್ಯಮ ವ್ಯಾಪ್ತಿಯ ಘನ ಮತ್ತು ದ್ರವ ಇಂಧನ ಚಾಲಿತ ಕ್ಷಿಪಣಿಗಳನ್ನು ಬಳಸಲಾಗಿದೆ.

ಮಲ್ಟಿ-ವಾರ್‌ಹೆಡ್ (ಒಂದೇ ಕ್ಷಿಪಣಿಯಲ್ಲಿ ಹಲವು ಬಾಂಬ್‌ಗಳು) ಮತ್ತು ನಿಖರ ಗುರಿ ತಲುಪುವ ಸಾಮರ್ಥ್ಯವಿರುವ ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ. ಶತ್ರುಗಳ ರಾಡಾರ್‌ಗೆ ಸಿಗದಂತೆ ದಾಳಿ ಮಾಡುವ ‘ಸುಸೈಡ್ ಡ್ರೋನ್’ ಮತ್ತು ದೀರ್ಘಕಾಲ ಹಾರಾಟ ನಡೆಸುವ ‘ಲೋಯಿಟರಿಂಗ್’ ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ. ದಾಳಿಯಲ್ಲಿ ಬಳಸಲಾದ ಕ್ಷಿಪಣಿಗಳ ಮೇಲೆ “ಧನ್ಯವಾದಗಳು ಭಾರತದ ಜನರೇ” ಎಂದು ಬರೆಯುವ ಮೂಲಕ ಇರಾನ್ ಭಾರತೀಯರ ಬೆಂಬಲವನ್ನು ಸ್ಮರಿಸಿದೆ. ಇದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/international/iran-missiles-carry-thank-you-indians-message-amid-attack-on-israel-united-states-diplomatic-debate-448531.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo