RCB Playing 11 Prediction: ಎಸ್‌ಆರ್‌ಎಚ್‌ ವಿರುದ್ಧ ಆರ್‌ಸಿಬಿ ಪ್ಲೇಯಿಂಗ್ 11 | RCB Playing 11 Prediction vs SRH, IPL 2026: Probable Line-ups, Key Players and Team Analysis

Sports

oi-Madhusudhan KR

RCB Playing 11 Prediction: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಐಪಿಎಲ್‌ 19ನೇ ಸೀಸನ್‌ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿಯು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಹಾಗಾದ್ರೆ, ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2025ರಲ್ಲಿ ಚೊಚ್ಚಲ ಐಪಿಎಲ್‌ ಟ್ರೋಫಿಗೆ ಮುತ್ತಿಟ್ಟಿದ್ದು, ಈ ಬಾರಿಯೂ ಕೂಡ ಚಾಂಪಿಯನ್‌ ಆಗುವ ಭರವಸೆಯಲ್ಲಿದೆ. ಬಲಿಷ್ಠ ಆಟಗಾರರನ್ನು ಹೊಂದಿರುವ ಆರ್‌ಸಿಬಿ ಐಪಿಎಲ್‌ 2026 ಉದ್ಘಾಟನಾ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ಸೆಣಸಲಿದೆ. ಹಾಗೆಯೇ ಎಸ್‌ಆರ್‌ಎಚ್‌ ಸಹ ಈ ಪಂದ್ಯವನ್ನು ಗೆಲ್ಲಲೇಬೇಕೆಂಬ ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿದೆ.

RCB Playing 11 Prediction vs SRH IPL 2026 Probable Line-ups Key Players and Team Analysis

ಆರ್‌ಸಿಬಿಯಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಏನು ಕೊರತೆ ಇಲ್ಲ. ಒಬ್ಬರು ತಪ್ಪಿದರೆ ಮತ್ತೊಬ್ಬರು ರನ್‌ ಸುರಿಮಳೆ ಸುರಿಸುವ ದಾಂಡಿಗರಿದ್ದಾರೆ. ಆದರೆ, ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬೌಲರ್ ಯಶ್ ದಯಾಳ್ ಪಂದ್ಯದಿಂದ ಹೊರಗುಳಿದಿರುವುದು ಮತ್ತು ಜೋಶ್ ಹ್ಯಾಜಲ್‌ವುಡ್ ಇನ್ನೂ ಸಂಪೂರ್ಣ ಫಿಟ್ನೆಸ್ ಆಗದಿರುವುದು ಆರ್‌ಸಿಬಿಯ ವೇಗದ ಬೌಲಿಂಗ್ ವಿಭಾಗಕ್ಕೆ ಹೊಡೆತ ಬಿದ್ದಂತಾಗಿದೆ. ರನ್‌ ಹೊಳೆ ಹರಿಯುವ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಇಬ್ಬರು ಮಾರಕ ಬೌಲರ್‌ಗಳ ಅನುಪಸ್ಥಿತಿಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಭುವಿಗೆ ಸಾಥ್ ನೀಡಬಲ್ಲ ವೇಗಿಗಳು

ಹಾಗಂತ, ಆರ್‌ಸಿಬಿ ಇದಕ್ಕೆ ಪರ್ಯಾಯ ದಾರಿಗಳನ್ನು ಹುಡುಕಿಕೊಂಡಿದೆ. ಈ ಇಬ್ಬರು ವೇಗಿಗಳು ಅನುಪಸ್ಥಿತಿ ಹಿನ್ನೆಲೆ ವೇಗದ ಬೌಲಿಂಗ್ ವಿಭಾಗದ ಸಂಪೂರ್ಣ ಜವಾಬ್ದಾರಿ ಭುವನೇಶ್ವರ್ ಕುಮಾರ್ ಹೆಗಲೇರಿದೆ. ಯುವ ವೇಗಿಯಾಗಿರುವ ರಸಿಖ್ ಸಲಾಂ ಕಳೆದ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇವರು ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.

ನ್ಯೂಜಿಲೆಂಡ್‌ನ ವೇಗಿ ಜೇಕಬ್‌ ಡಫಿ ಪವರ್‌ಪ್ಲೇನಲ್ಲಿ ಭುವನೇಶ್ವರ್ ಕುಮಾರ್‌ಗೆ ಉತ್ತಮ ಸಾಥ್ ನೀಡುವ ಸಾಧ್ಯತೆಯಿದೆ. ಇನ್ನೂ ಅಭಿನಂದನ್ ಸಿಂಗ್ ಮತ್ತು ಮಂಗೇಶ್ ಯಾದವ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಥವಾ ತುರ್ತು ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಬಲ್ಲರು. ಅದರಲ್ಲೂ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಚಿಕ್ಕದಾಗಿರುವುದರಿಂದ ಇಲ್ಲಿ ಸ್ಪಿನ್ನರ್‌ಗಳ ಪಾತ್ರ ಬಹಳ ದೊಡ್ಡದು.

ಎದುರಾಳಿ ಬ್ಯಾಟರ್‌ಗಳನ್ನ ಕಾಡುವ ಸ್ಪಿನ್ನರ್‌ಗಳು

ಲೆಗ್ ಸ್ಪಿನ್ನರ್ ಆಗಿರುವ ಸುಯೇಶ್ ಶರ್ಮಾ ಆರ್‌ಸಿಬಿಯ ಮುಖ್ಯ ಸ್ಪಿನ್ ಅಸ್ತ್ರವಾಗಿದ್ದು, ಇವರ ಗೂಗ್ಲಿ ದಾಳಿಯನ್ನು ಎದುರಿಸುವುದು ಬ್ಯಾಟರ್‌ಗಳಿಗೆ ಕಷ್ಟವಾಗಲಿದೆ. ಮತ್ತೊಂದೆಡೆ, ಅನುಭವಿ ಎಡಗೈ ಸ್ಪಿನ್ನರ್ ಆಗಿರುವ ಕೃನಾಲ್ ಪಾಂಡ್ಯ ಕೇವಲ ರನ್ ನಿಯಂತ್ರಿಸುವುದು ಮಾತ್ರವಲ್ಲದೆ, ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲರು. ಇವರು ತಂಡದ ಮುಖ್ಯ ಆಲ್‌ರೌಂಡರ್ ಆಗಿದ್ದಾರೆ.

ಇನ್ನೂ ಸನ್ ರೈಸರ್ಸ್ ಹೈದರಾಬಾದ್ ತಂಡ ಕೂಡ ಬೌಲಿಂಗ್‌ ವಿಭಾಗದಲ್ಲಿ ಸಮಸ್ಯೆ ಎದುರಿಸುತ್ತಿದೆ. ಕೂಡ ಸಮಸ್ಯೆಗಳಿವೆ. ತಂಡವು ಮತ್ತೊಮ್ಮೆ ಬಲಿಷ್ಠ ಬ್ಯಾಟಿಂಗ್ ಲೈನಪ್ ಅನ್ನು ಹೊಂದಿದ್ದರೂ, ನಾಯಕ ಪ್ಯಾಟ್ ಕಮ್ಮಿನ್ಸ್ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾಗಿರುವುದು ಅವರ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇಶಾನ್ ಕಿಶನ್ ಅವರಿಗೆ, ತಂಡದ ಮ್ಯಾನೇಜ್‌ಮೆಂಟ್ ತಾತ್ಕಾಲಿಕ ನಾಯಕನ ಜವಾಬ್ದಾರಿಯನ್ನು ನೀಡಿದೆ. ಅವರು ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್ ಪಡೆ ವಿರುದ್ಧ ತಮ್ಮಲ್ಲಿರುವ ಬೌಲಿಂಗ್ ಆಯ್ಕೆಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದೇ ಇದೀಗ ಕುತೂಹಲದ ವಿಚಾರವಾಗಿದೆ.

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ 11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜೇಕಬ್ ಬೆಥೆಲ್, ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ರಸಿಖ್ ದಾರ್.

ಸನ್ ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್‌ 11: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ನಾಯಕ/ವಿ.ಕೀ.), ಹೆನ್ರಿಚ್ ಕ್ಲಾಸೆನ್, ಲಿಯಾಮ್ ಲಿವಿಂಗ್‌ಸ್ಟೋನ್, ನಿತೀಶ್ ಕುಮಾರ್ ರೆಡ್ಡಿ, ಅನಿಕೇತ್ ವರ್ಮಾ, ಹರ್ಷ್ ದುಬೆ, ಜಯದೇವ್ ಉನದ್ಕತ್, ಹರ್ಷಲ್ ಪಟೇಲ್, ಜೀಶನ್ ಅನ್ಸಾರಿ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rcb-playing-11-prediction-vs-srh-ipl-2026-probable-line-ups-key-players-and-team-analysis-448581.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo