RCB: ಆರ್‌ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ ‘ಆಫರ್’ ಪೋಸ್ಟರ್ ವೈರಲ್‌ | Bengaluru Auto Driver Offers Free Rides to RCB Jersey Fans Ahead of IPL 2026 Opener against SRH

Sports

oi-Madhusudhan KR

IPL 2026 RCB: ಐಪಿಎಲ್‌ 2026ನೇ ಆವೃತ್ತಿ ಇನ್ನೂ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಎಂ.ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು ಆರ್‌ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ ಎಂದು ಬರೆದುಕೊಂಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಬಹು ನಿರೀಕ್ಷಿತ ಹಣಾಹಣಿಯೊಂದಿಗೆ ಐಪಿಎಲ್ 19ನೇ ಸೀಸನ್ ಆರಂಭವಾಗುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಅಭಿಮಾನಿಗಳ ಹುಚ್ಚು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಿಶೇಷವಾಗಿ ಆರ್‌ಸಿಬಿಗೆ ಅಪಾರ ಬೆಂಬಲವಿರುವ ಬೆಂಗಳೂರಿನಲ್ಲಿ ಈ ಉತ್ಸಾಹ ಮುಗಿಲು ಮುಟ್ಟಿದೆ.

Bengaluru Auto Driver Offers Free Rides to RCB Jersey Fans Ahead of IPL 2026 Opener against SRH

‘ಆರ್‌ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ’

ಬೆಂಗಳೂರಿನ ಆಟೋ ಚಾಲಕರೊಬ್ಬರು ಆರ್‌ಸಿಬಿ ಮೇಲಿನ ಅಭಿಮಾನವನ್ನು ಎತ್ತಿ ಹಿಡಿಯುವ ವಿಶಿಷ್ಟ ಕಾರ್ಯಕ್ಕೆ ಮುಂದಾಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಪಂದ್ಯದ ದಿನದಂದು ಆರ್‌ಸಿಬಿ ಜೆರ್ಸಿ ಧರಿಸಿದ ಯಾರೇ ಆದರೂ ಅವರಿಗೆ ತಮ್ಮ ಆಟೋದಲ್ಲಿ ಉಚಿತ ಪ್ರಯಾಣ ನೀಡುವುದಾಗಿ ಅವರು ತಮ್ಮ ಆಟೋದಲ್ಲಿ ಕೈಬರಹದ ಚೀಟಿಯೊಂದನ್ನು ಅಂಟಿಸಿ ಗಮನ ಸೆಳೆದಿದ್ದಾರೆ.

ಮಹಿಕಾ ಜಾಧವ್ ಎಂಬ ಹೆಸರಿನ ಟ್ವಿಟ್‌ರ್ ಖಾತೆಯಲ್ಲಿ ಈ ಕೈಬರಹ ಫೋಟೋವನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಎಂಬ ಕ್ರೀಡೆ ಹೇಗೆ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ ಮತ್ತು ಪ್ರತಿ ವರ್ಷ ಐಪಿಎಲ್ ಆ ಉತ್ಸಾಹವನ್ನು ಹೇಗೆ ಮರುಕಳಿಸುತ್ತದೆ ಎಂಬುದರ ಕುರಿತು ಅವರು ಬರೆದಿದ್ದಾರೆ. ಅದರಲ್ಲೂ ಆರ್‌ಸಿಬಿ ಅಭಿಮಾನಿಗಳ ಅಚಲವಾದ ನಿಷ್ಠೆಯನ್ನು ಅವರು ಎತ್ತಿ ತೋರಿಸಿದ್ದು, ಪ್ರತಿ ಸೀಸನ್‌ನಲ್ಲೂ ಬದಲಾಗದ ಅವರ ನಂಬಿಕೆಯು “ಈ ಸಲ ಕಪ್ ನಮ್ದೇ” ಎಂಬ ಘೋಷವಾಕ್ಯದಲ್ಲಿ ಅಡಗಿದೆ ಎಂದು ಅವರು ತಿಳಿಸಿದ್ದಾರೆ.

ಉಚಿತ ಪ್ರಯಾಣದ ಕುರಿತು ನೆಟ್ಟಿಗರು ಹೇಳೋದೇನು?

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ದೊಟ್ಟ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಹಲವು ಟ್ವಿಟರ್ ಬಳಕೆದಾರರು ಆಟೋ ಚಾಲಕನ ಉದಾರತೆ ಮತ್ತು ಆರ್‌ಸಿಬಿ ಬೆಂಬಲಿಗರ ಅಪ್ರತಿಮ ಸಮರ್ಪಣಾ ಮನೋಭಾವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ಇದನ್ನು “ನಿಜವಾದ ಅಭಿಮಾನಿಗಳು ಇತರರನ್ನು ಬೆಂಬಲಿಸಲು ತಮ್ಮ ಮಿತಿಯನ್ನು ಮೀರಿ ಶ್ರಮಿಸುತ್ತಾರೆ,” ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು ಕೆಲವರು “ಆರ್‌ಸಿಬಿ ಕೇವಲ ಒಂದು ಕ್ರಿಕೆಟ್ ತಂಡವಲ್ಲ, ಅದು ಇಡೀ ನಗರದ ಜನರನ್ನು ಬೆಸೆಯುವ ಒಂದು ಭಾವನೆ,” ಎಂದು ಬಣ್ಣಿಸಿದ್ದಾರೆ. ಅಲ್ಲದೆ, “ಇಂತಹ ನಿಷ್ಠಾವಂತ ಅಭಿಮಾನಿಗಳಿಗೆ ಸರಿಯಾದ ಮನ್ನಣೆ ಸಿಗುವುದು ಅಪರೂಪ. ಇಂತಹ ಅಭಿಮಾನಿಗಳಿಗೆ ಉಚಿತ ಪಂದ್ಯದ ಟಿಕೆಟ್‌ಗಳು ಅಥವಾ ಆಟಗಾರರೊಂದಿಗೆ ಸಂವಾದ ನಡೆಸುವ ಅವಕಾಶಗಳನ್ನು ನೀಡುವ ಮೂಲಕ ಅವರ ಅಚಲ ನಿಷ್ಠೆಯನ್ನು ಗೌರವಿಸಬೇಕು,” ಅಂತಲೂ ಹೇಳಿದ್ದಾರೆ.

ಮತ್ತೊಬ್ಬರು ‘ತಂಡದ ಪ್ರದರ್ಶನ ಹೇಗೆ ಇರಲಿ ತಮ್ಮ ಉತ್ಸಾಹ ಮಾತ್ರ ಯಾವಾಗಲೂ ಕಡಿಮೆಯಾಗುವುದಿಲ್ಲ. “ಗೆಲ್ಲಲಿ ಅಥವಾ ಸೋಲಲಿ, ನಮ್ಮ ಪ್ರೀತಿ ಮತ್ತು ಕಿಚ್ಚು ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಆಟೋ ಚಾಲಕ ತನ್ನ ಆಟೋದಲ್ಲಿ ಬರೆದುಕೊಂಡಿರುವ ಉಚಿತ ಪ್ರಯಾಣದ ಆಫರ್ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಇದಕ್ಕೆ ಸಾಥ್ ನೀಡುವಂತೆ ಬಹುತೇಕರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/sports/bengaluru-auto-driver-offers-free-rides-to-rcb-jersey-fans-ahead-of-ipl-2026-opener-against-srh-448673.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo