ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral | Daughter Takes Mother to Burj Khalifa For The First Time, Heartwarming Video Goes Viral on Instagram

India

oi-Pragathi S

ದುಬೈ: ಪ್ರತಿಯೊಬ್ಬ ಮಕ್ಕಳಿಗೂ ತಮ್ಮ ಪೋಷಕರ ಆಸೆಗಳನ್ನು ಈಡೇರಿಸುವುದು ಒಂದು ದೊಡ್ಡ ಕನಸಾಗಿರುತ್ತದೆ. ಅದರಲ್ಲೂ ಜೀವನಪೂರ್ತಿ ಮಕ್ಕಳಿಗಾಗಿ ಕಷ್ಟಪಟ್ಟ ತಂದೆ-ತಾಯಿಯನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ದು ಅವರ ಮುಖದಲ್ಲಿ ನಗು ನೋಡುವುದು ನಿಜಕ್ಕೂ ಅದೊಂದು ಅದ್ಭುತ ಅನುಭವ. ಇದೀಗ ಮಗಳೊಬ್ಬಳು ತನ್ನ ತಾಯಿಯನ್ನು ಮೊದಲ ಬಾರಿಗೆ ವಿಶ್ವದ ಅತಿ ಎತ್ತರದ ಕಟ್ಟಡ ದುಬೈನ ‘ಬುರ್ಜ್ ಖಲೀಫಾ’ ನೋಡಲು ಕರೆದೊಯ್ದಿರುವ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ಈ ವಿಡಿಯೋವನ್ನು ವಿನಿತಾ ಕಾರ್ಕಿ (Binita Karki) ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕಿರು ವಿಡಿಯೋದಲ್ಲಿ, ವಿನಿತಾ ತಮ್ಮ ತಾಯಿಯನ್ನು ದುಬೈನ ಪ್ರಸಿದ್ಧ ಡೌನ್‌ಟೌನ್ ಪ್ರದೇಶದಲ್ಲಿರುವ ಬುರ್ಜ್ ಖಲೀಫಾ ಬಳಿ ಕರೆದುಕೊಂಡು ಹೋಗಿರುವುದನ್ನು ಕಾಣಬಹುದು. ಸಾಂಪ್ರದಾಯಿಕ ಸೀರೆಯುಟ್ಟು ಕಂಗೊಳಿಸುತ್ತಿರುವ ತಾಯಿ, ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡವನ್ನು ಅಚ್ಚರಿಯಿಂದ ಹಾಗೂ ಅಷ್ಟೇ ಪ್ರಶಾಂತವಾಗಿ ವೀಕ್ಷಿಸುತ್ತಾ ಹೆಜ್ಜೆ ಹಾಕುತ್ತಿರುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

Daughter

ತಮ್ಮ ತಾಯಿಯ ಈ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಮಗಳು ವಿನಿತಾ, ವಿಡಿಯೋದ ಮೇಲೆ ಒಂದು ಸುಂದರವಾದ ವಾಕ್ಯವನ್ನು ಬರೆದುಕೊಂಡಿದ್ದಾರೆ. “ಪಿಒವಿ (POV): ನಿಮ್ಮ ತಾಯಿ ವಿಶ್ವದ ಅತಿ ಎತ್ತರದ ಕಟ್ಟಡದ ಬಳಿ ತಲುಪಿದ್ದಾರೆ ಮತ್ತು ಅದನ್ನು ನೀವು ಸಾಧ್ಯವಾಗಿಸಿದ್ದೀರಿ” ಎಂದು ಅವರು ಬರೆದುಕೊಂಡಿದ್ದಾರೆ. ಈ ಸಾಲುಗಳು ಪ್ರತಿಯೊಬ್ಬರ ಹೃದಯವನ್ನು ಸ್ಪರ್ಶಿಸುವಂತಿವೆ. ತಮ್ಮ ತಾಯಿಗೆ ಇಂತಹದೊಂದು ಮರೆಯಲಾಗದ ಉಡುಗೊರೆ ನೀಡಿದ ಮಗಳ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬುರ್ಜ್ ಖಲೀಫಾ ಕೇವಲ ಒಂದು ಕಟ್ಟಡವಲ್ಲ, ಅದು ದುಬೈನ ಹೆಮ್ಮೆ. ಸುಮಾರು 828 ಮೀಟರ್‌ಗಿಂತಲೂ ಹೆಚ್ಚು ಎತ್ತರವಿರುವ ಈ ಕಟ್ಟಡವು ಪ್ರಪಂಚದ ಅತಿ ದೊಡ್ಡ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಪ್ರಪಂಚದ ಮೂಲೆ ಮೂಲೆಗಳಿಂದ ಲಕ್ಷಾಂತರ ಪ್ರವಾಸಿಗರು ಇದರ ನೋಡಲು ಮತ್ತು ಸುತ್ತಮುತ್ತಲಿನ ನಗರದ ವಿಹಂಗಮ ನೋಟವನ್ನು ಸವಿಯಲು ಬರುತ್ತಾರೆ. ಇಂತಹ ಅದ್ಭುತವಾದ ತಾಣಕ್ಕೆ ತಮ್ಮ ತಾಯಿಯನ್ನು ಕರೆತರುವ ಮೂಲಕ ಮಗಳು ಸಾರ್ಥಕತೆ ಮೆರೆದಿದ್ದಾರೆ.

ಸಾಮಾನ್ಯವಾಗಿ ವಿದೇಶಿ ಪ್ರವಾಸ ಎಂದರೆ ಯುವಜನತೆ ತಮ್ಮ ಸ್ನೇಹಿತರೊಂದಿಗೆ ಅಥವಾ ಸಂಗಾತಿಯೊಂದಿಗೆ ಹೋಗಲು ಇಷ್ಟಪಡುತ್ತಾರೆ. ಆದರೆ, ತಮ್ಮ ಇಡೀ ಜೀವನವನ್ನು ಕುಟುಂಬದ ಶ್ರೇಯಸ್ಸಿಗಾಗಿ ಮುಡಿಪಾಗಿಟ್ಟ ತಾಯಿಗೆ ಇಂತಹದೊಂದು ಅಂತಾರಾಷ್ಟ್ರೀಯ ಪ್ರವಾಸದ ಅನುಭವವನ್ನು ನೀಡುವುದು ವಿರಳ. ಈ ಹಿನ್ನೆಲೆಯಲ್ಲಿ ವಿನಿತಾ ಕಾರ್ಕಿ ಅವರ ಈ ನಡೆ ಹೆಚ್ಚು ಗಮನ ಸೆಳೆಯುತ್ತಿದೆ. ವಯಸ್ಸಾದ ಕಾಲದಲ್ಲಿ ತಾಯಿಗೆ ಪ್ರಪಂಚದ ಅದ್ಭುತಗಳನ್ನು ತೋರಿಸುವ ಮೂಲಕ, ಪ್ರತಿಯೊಬ್ಬರೂ ತಮ್ಮ ಪೋಷಕರಿಗೆ ಈ ರೀತಿಯ ಸಂತೋಷವನ್ನು ನೀಡಬೇಕು ಎಂಬ ಸಂದೇಶವನ್ನು ಈ ವಿಡಿಯೋ ಸಾರುತ್ತಿದೆ. ಸೀರೆಯಲ್ಲಿ ಕಂಗೊಳಿಸುತ್ತಿರುವ ಆ ತಾಯಿಯ ನಡಿಗೆಯಲ್ಲಿರುವ ಆತ್ಮವಿಶ್ವಾಸ ಮತ್ತು ಕಣ್ಣುಗಳಲ್ಲಿನ ಬೆರಗು ಈ ವಿಡಿಯೋದ ಪ್ರಮುಖ ಆಕರ್ಷಣೆಯಾಗಿದೆ.

ನೆಟ್ಟಿಗರ ಮೆಚ್ಚುಗೆಯ ಮಹಾಪೂರ

ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಹಾಗೂ ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಕಾಮೆಂಟ್ ವಿಭಾಗದಲ್ಲಿ ಬಳಕೆದಾರರು ತಾಯಿ-ಮಗಳ ಈ ಬಾಂಧವ್ಯವನ್ನು ಕೊಂಡಾಡುತ್ತಿದ್ದಾರೆ. “ಇದು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ,” ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು “ಈ ವಿಡಿಯೋ ನನ್ನ ಇಂದಿನ ದಿನವನ್ನು ಸುಂದರವಾಗಿಸಿತು” ಎಂದು ಬರೆದುಕೊಂಡಿದ್ದಾರೆ.

ಹಲವರು ಈ ಕ್ಷಣವನ್ನು “ಅದ್ಭುತ” ಮತ್ತು “ಸ್ಫೂರ್ತಿದಾಯಕ” ಎಂದು ಬಣ್ಣಿಸಿದ್ದಾರೆ. “ನಿಮ್ಮ ತಾಯಿಗೆ ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿರಬಹುದು,” ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, “ದೇವರು ನಿಮಗೆ ಒಳ್ಳೆಯದು ಮಾಡಲಿ ಸಹೋದರಿ,” ಎಂದು ಆಶೀರ್ವದಿಸಿದ್ದಾರೆ. ಒಟ್ಟಾರೆಯಾಗಿ, ಆಧುನಿಕ ಜಗತ್ತಿನಲ್ಲಿ ಪೋಷಕರನ್ನು ಮರೆಯುತ್ತಿರುವ ಕೆಲವರ ನಡುವೆ, ತನ್ನ ತಾಯಿಯ ಮುಖದಲ್ಲಿ ಮಂದಹಾಸ ಮೂಡಿಸಲು ದುಬೈ ಪ್ರವಾಸ ಮಾಡಿಸಿದ ಈ ಮಗಳ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/daughter-takes-mother-to-burj-khalifa-for-the-first-time-heartwarming-video-goes-viral-on-instagram-448711.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo