
Sports
oi-Madhusudhan KR
Anil Kumble Stand: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಸ್ಸಿಎ, ಭಾರತೀಯ ಕ್ರಿಕೆಟ್ ದಿಗ್ಗಜರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರನ್ನು ಸ್ಟ್ಯಾಂಡ್ಗಳಿಗೆ ನಾಮಕರಣ ಮಾಡುವ ಮೂಲಕ ಗೌರವಿಸಿತ್ತು. ಆದರೆ, ಇದೀಗ ಕುಂಬ್ಳೆ ಅವರ ಸ್ಟ್ಯಾಂಡ್ನಲ್ಲಿ ‘ತುದಿ’ ಎಂಬ ಅಕ್ಷರ ಕಂಡುಬಂದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕದ ಕ್ರಿಕೆಟ್ ದಂತಕಥೆಗಳಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಎರಡು ಸ್ಟ್ಯಾಂಡ್ಗಳಿಗೆ ಅವರ ಹೆಸರನ್ನು ನಾಮಕರಣ ಮಾಡಲಾಗಿತ್ತು. ಆದರೆ, ಇತ್ತೀಚೆಗಷ್ಟೇ ನಡೆದ ಐಪಿಎಲ್ 2026ರ ಉದ್ಘಾಟನಾ ಪಂದ್ಯದ ವೇಳೆ ಕುಂಬ್ಳೆ ಅವರ ಹೆಸರಿನ ಸ್ಟ್ಯಾಂಡ್ನಲ್ಲಿ ಕಂಡುಬಂದ ಒಂದು ತಪ್ಪಾದ ಅಕ್ಷರ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಏನಿದು ವಿವಾದ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ಬಂದಿದ್ದ ಸಾವಿರಾರು ಅಭಿಮಾನಿಗಳು ಅನಿಲ್ ಕುಂಬ್ಳೆ ಅವರ ಹೆಸರಿನ ಸ್ಟ್ಯಾಂಡ್ ಅನ್ನು ಗಮನಿಸಿದ್ದಾರೆ. ಅಲ್ಲಿ ಕುಂಬ್ಳೆ ಅವರ ಹೆಸರಿನ ಮುಂದೆ ‘ತುದಿ’ ಎಂಬ ಪದವನ್ನು ಬಳಸಲಾಗಿದೆ. ಸಾಮಾನ್ಯವಾಗಿ ಇಂಗ್ಲಿಷ್ನ ‘End’ (ಉದಾಹರಣೆಗೆ: Pavillion End) ಎಂಬ ಪದಕ್ಕೆ ಕನ್ನಡದಲ್ಲಿ ‘ತುದಿ’ ಎಂದು ಅನುವಾದಿಸಿ ಹಾಕಲಾಗಿದೆ. ಆದರೆ, ಒಬ್ಬ ವ್ಯಕ್ತಿಯ ಹೆಸರಿನ ಮುಂದೆ ಈ ಪದವನ್ನು ಬಳಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೆಎಸ್ಸಿಎ ವಿರುದ್ಧ ಕಿಡಿಕಾರುತ್ತಿದ್ದಾರೆ. “ಅನಿಲ್ ಕುಂಬ್ಳೆ ಅವರಂತಹ ದಿಗ್ಗಜರಿಗೆ ಗೌರವ ನೀಡುವಾಗ ಕನಿಷ್ಠ ಭಾಷಾ ಜ್ಞಾನವಿರಲಿ” ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕುಂಬ್ಳೆ ತುದಿ” ಎಂದು ಬಳಸಿರುವ ಪದ ತಪ್ಪು ಅರ್ಥ ನೀಡುತ್ತದೆ ಮತ್ತು ಇದು ಕನ್ನಡಿಗರ ಭಾವನೆಗೆ ಧಕ್ಕೆ ತಂದಿದೆ ಎಂಬುದು ಅನೇಕರ ವಾದ. ಕ್ರೀಡಾಂಗಣದ ಆವರಣದಲ್ಲಿ ಕನ್ನಡವನ್ನು ಬಳಸುವಾಗ ಇಂತಹ ದೊಡ್ಡ ತಪ್ಪುಗಳು ಆಗಬಾರದಿತ್ತು ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈದಾನದಲ್ಲಿನ ಎಡವಟ್ಟು
ತಕ್ಷಣವೇ ಇದನ್ನು ಸರಿಪಡಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದೆ. ಆರ್ಸಿಬಿ ತಂಡವು ಚಿನ್ನಸ್ವಾಮಿಯಲ್ಲಿ ಗೆಲುವು ಸಾಧಿಸಿ ಸಂಭ್ರಮ ತಂದಿದ್ದರೂ, ಮೈದಾನದಲ್ಲಿನ ಈ ಎಡವಟ್ಟು ಮಾತ್ರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇನ್ನೂ ಅಭಿಮಾನಿಗಳ ಕೋರಿಕೆ ಮೇರೆಗೆ ಕೆಎಸ್ಸಿಎ ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಂಡು ಇದನ್ನು ಸರಿಪಡಿಸುತ್ತದೆಯಾ ಎಂದು ಕಾದುನೋಡಬೇಕಿದೆ.
ತಪ್ಪಾದ ಅರ್ಥ ನೀಡುವ ಪದ ವೈರಲ್
ಮಾರ್ಚ್ 28ರಂದು ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ 19ನೇ ಸೀಸನ್ನ ಉದ್ಘಾಟನಾ ಪಂದ್ಯ ನಡೆಯಿತು. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇನೋ ಎಸ್ಆರ್ಎಚ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಬಳಿಕ ಕ್ರೀಡಾಂಗಣದಲ್ಲಿನ ಅನಿಲ್ ಕುಂಬ್ಳೆ ಹೆಸರಿನ ಸ್ಟ್ಯಾಂಡ್ನಲ್ಲಿ ತಪ್ಪಾದ ಅರ್ಥ ನೀಡುವ ಪದವನ್ನು ವೀಕ್ಷಕರು ಗಮನಿಸಿದ್ದಾರೆ. ಅದರಲ್ಲಿ ಅನಿಲ್ ಕುಂಬ್ಳೆ ತುದಿ ಎಂದು ಬರೆಯಲಾಗಿದ್ದು, ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದು ಸರಿಯಾದ ಅನುವಾದ. ಕನ್ನಡದಲ್ಲಿ ತುದಿ ಅಥವಾ ಕೊನೆ ಅಂದರೆ ಇಂಗ್ಲಿಷ್ ನ ಎಂಡ್. ಅನುವಾದಿಸಿದವರು ಸರಿಯಾಗಿ ಕನ್ನಡ ಗೊತ್ತಿರುವವರು. https://t.co/Xq97PPPcK0
— DP SATISH (@dp_satish) March 29, 2026
ಆರ್ಸಿಬಿ ತಂಡ ಮುನ್ನಡೆಸಿದ್ದ ಅನಿಲ್ ಕುಂಬ್ಳೆ
ಭಾರತೀಯ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಅವರ ಸಾಧನೆಯನ್ನು ಸ್ಮರಿಸಲು ಕೆಎಸ್ಸಿಎ ಈ ನಿರ್ಧಾರ ಮಾಡಿದೆ. ಇಲ್ಲಿ ಅವರು ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಅಲ್ಲದೆ, ಆರ್ಸಿಬಿ ತಂಡದ ಪರ ಕೂಡ ಅವರು ತಂಡವನ್ನು ಮುನ್ನಡೆಸಿದ್ದರು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/anil-kumble-name-controversy-at-bengaluru-m-chinnaswamy-stadium-sparks-fan-outrage-in-social-media-448875.html. xn--babytilbehr-pgb.com does not claim ownership of this content. All rights remain with the original publisher.
