
Sports
oi-Madhusudhan KR
Hardik Pandya: ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಮಾಡಿರುವ ಖರ್ಚು ಮತ್ತು ನೀಡಿರುವ ದುಬಾರಿ ಉಡುಗೊರೆಗಳು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಕೇವಲ 35 ದಿನಗಳ ಅವಧಿಯಲ್ಲಿ ಹಾರ್ದಿಕ್ ಕೋಟ್ಯಂತರ ರೂಪಾಯಿ ಹಣವನ್ನು ವ್ಯಯಿಸಿದ್ದಾರೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಳೆದ ಫೆಬ್ರವರಿಯಲ್ಲಿ ತಮ್ಮ ಪುತ್ರ ಹಾಗೂ ಮಾಜಿ ಪತ್ನಿಗಾಗಿ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಹಾರ್ದಿಕ್ ಸುದ್ದಿಯಾಗಿದ್ದರು. ಮಾರ್ಚ್ 15 ರಂದು ಬರೋಬ್ಬರಿ 12 ಕೋಟಿ ರೂಪಾಯಿ ಬೆಲೆಯ ಫೆರಾರಿ ಕಾರು ಖರೀದಿ ಮಾಡಿದ್ದರು.

ಮಾರ್ಚ್ 25ರಂದು ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿಗೆ ತಲಾ 10 ಲಕ್ಷ ರೂಪಾಯಿ ನೆರವು ನಿಡಿದ್ದರು ಎಂದು ವರದಿಯಾಗಿದೆ. ಇದಾದ ಕೆಲವೇ ದಿನಗಳಲ್ಲಿ, ತಮ್ಮ ಪ್ರೇಯಸಿ ಮಹಿಕಾಗೆ 1.7 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಬೆಂಜ್ ವಿ-ಕ್ಲಾಸ್ ಕಾರನ್ನು ಗಿಫ್ಟ್ ಮಾಡುವ ಮೂಲಕ ಕೇವಲ ಐದು ವಾರಗಳ ಅವಧಿಯಲ್ಲಿ ಸರಿಸುಮಾರು 18 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವ್ಯಯಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಖರ್ಚಿನ ವಿವರಗಳು
* ಮಾಜಿ ಪತ್ನಿ ಮತ್ತು ಮಗನಿಗಾಗಿ ದುಬಾರು ಕಾರು ಗಿಫ್ಟ್
ಫೆಬ್ರವರಿ 22ರಂದು ಹಾರ್ದಿಕ್ ಪಾಂಡ್ಯ ಅವರು ತಮ್ಮ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಮತ್ತು ಮಗ ಅಗಸ್ತ್ಯ ಅವರಿಗಾಗಿ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿದ್ದರೂ ಸಹ, ಮಗನ ಮೇಲಿನ ಪ್ರೀತಿಗಾಗಿ ಅವರು ಈ ದೊಡ್ಡ ಮೊತ್ತ ವ್ಯಯಿಸಿದ್ದಾರೆ ಎನ್ನಲಾಗಿದೆ.
* ಕನಸಿನ ಫೆರಾರಿ ಖರೀದಿಸಿದ ಪಾಂಡ್ಯ
ಮಾರ್ಚ್ 15ರಂದು ಹಾರ್ದಿಕ್ ಮತ್ತೊಂದು ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ. ಬರೋಬ್ಬರಿ 12 ಕೋಟಿ ರೂಪಾಯಿ ಬೆಲೆಯ ಕೆಂಪು ಬಣ್ಣದ ಫೆರಾರಿ ಕಾರನ್ನು ಖರೀದಿಸುವ ಮೂಲಕ ಗಮನ ಸೆಳೆದಿದ್ದಾರೆ.
* ವಾಂಖೆಡೆ ಕ್ರೀಡಾಂಗಣದ ಸಿಬ್ಬಂದಿಗೆ ಆರ್ಥಿಕ ನೆರವು
ಕೇವಲ ಐಷಾರಾಮಿ ಜೀವನ ಮಾತ್ರವಲ್ಲದೆ, ಹಾರ್ದಿಕ್ ತಮ್ಮ ನೆರವಿಗೆ ಧಾವಿಸಿದ ವ್ಯಕ್ತಿಗಳಿಗೆ ಸಹಾಯ ಮಾಡಿ ಉದಾರತೆಯನ್ನೂ ತೋರಿದ್ದಾರೆ. ಮಾರ್ಚ್ 25ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದ 10-11 ಸಿಬ್ಬಂದಿಗೆ ತಲಾ 10 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಮೊತ್ತದ ಬಗ್ಗೆ ಹಾರ್ದಿ ಪಾಂಡ್ಯ ಅವರು ಎಲ್ಲಿಯೂ ಬಹಿರಂಗಪಡಿಸಿಲ್ಲ.
🚨 Hardik Pandya spends too much money in just 35 days 💰
22 Feb – Gifted ₹4 Cr Land Rover Defender to his son & ex-wife
15 Mar – Bought a ₹12 Cr Ferrari
25 Mar – Donated ₹10 lakh each to Wankhede groundsmen
29 Mar – Gifted ₹1.7 Cr Mercedes-Benz V-Class to his girlfriend… pic.twitter.com/PDCXihfqPa
— Sonu (@Cricket_live247) March 29, 2026
ಪ್ರೇಯಸಿಗಾಗಿ ₹1.7 ಕೋಟಿಯ ಮರ್ಸಿಡಿಸ್ ಬೆಂಜ್ ಖರೀದಿ
ಮಾರ್ಚ್ 29 ರಂದು, ಹಾರ್ದಿಕ್ ತಮ್ಮ ಪ್ರೇಯಸಿ ಮಹಿಕಾ ಶರ್ಮಾಗೆ 1.7 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಬೆಂಜ್ ವಿ-ಕ್ಲಾಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಹೇಳುವುದಾದರೆ, ಒಂದು ಅಂದಾಜಿನ ಪ್ರಕಾರ, ಹಾರ್ದಿಕ್ ಪಾಂಡ್ಯ ಕಳೆದ ಐದು ವಾರಗಳಲ್ಲಿ ಸುಮಾರು 18 ರಿಂದ 20 ಕೋಟಿ ರೂಪಾಯಿ ಹಣವನ್ನು ಕಾರುಗಳು ಮತ್ತು ಉಡುಗೊರೆಗಳಿಗಾಗಿ ಖರ್ಚು ಮಾಡಿದ್ದಾರೆ. ಐಪಿಎಲ್ ನಡುವೆಯೇ ಹಾರ್ದಿಕ್ ಅವರ ಈ ವೆಚ್ಚದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/hardik-pandya-spends-18-crore-in-5-weeks-on-luxury-cars-and-gifts-sparks-buzz-in-social-media-448893.html. xn--babytilbehr-pgb.com does not claim ownership of this content. All rights remain with the original publisher.
