
International
oi-Shankrappa Parangi
Iran War Udates: ಕದನ ವಿರಾಮ, ಷರತ್ತಿಗೆ ಒಪ್ಪಿದರೆ ಸಂಧಾನ ಎನ್ನುತ್ತಲೆ ಅಮೆರಿಕ ಮತ್ತು ಇಸ್ರೇಲ್ ಇರಾನಿನ ಮೇಲೆ ಜಂಟಿ ದಾಳಿ ಮುಂದುವರಿಸಿವೆ. ಸದ್ಯಕ್ಕೆ ಮಧ್ಯಪ್ರಾಚ್ಯ ಯುದ್ಧ ಕೊನೆಗೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಇರಾನ್ ಅಕ್ಷರಶಃ ಸ್ಮಶಾನವಾಗಿದೆ. ಇಂದಿಗೆ 32ನೇ ದಿನಕ್ಕೆ ಕಾಲಿಟ್ಟ ಯುದ್ಧದ ಸನ್ನಿವೇಶಗಳು ರಣಭೀಕರವಾಗಿವೆ. ಇಂದು ಮಾರ್ಚ್ 31ರಂದು ಮಂಗಳವಾರ ಇರಾನಿನ ಇಸ್ಫಹಾನ್ನಲ್ಲಿರುವ ಮಿಲಿಟರಿ ವಾಯುನೆಲೆ, ಪ್ರಮುಖ ಶಸ್ತ್ರಾಸ್ತ್ರ ಡಿಪೋದ ಮೇಲೆ ಅಮೆರಿಕಾ ಹಾಗೂ ಇಸ್ರೇಲ್ ಜಂಟಿ ದಾಳಿ ನಡೆಸಿವೆ. ಬೆಳ್ಳಂಬೆಳಗ್ಗೆ ಭಾರಿ ಸ್ಪೋಟದ ಶಬ್ದಕ್ಕೆ ಇರಾನ್ ಜನ ದಂಗಾಗಿದ್ದಾರೆ. ಇರಾನ್ನ ಪರಮಾಣು ಸೌಲಭ್ಯವನ್ನು ಉಡಾಯಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇದರ ಮಧ್ಯೆ ಇರಾನ್ಗೆ ರಷ್ಯಾ ದೇಶವು ಬೆಂಬಲ ನೀಡಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ವಿಚಾರ ಅಮೆರಿಕದ ಕಣ್ಣು ಕೆಂಪಾಗಿಸಿದೆ. ಯುದ್ಧದ ಇಂದಿನ ಅಪ್ಡೇಟ್ ಮತ್ತು ಪ್ರಮುಖಾಂಶಗಳು ಇಲ್ಲಿವೆ.
ಇರಾನ್ vs ಯುಎಸ್-ಇಸ್ರೇಲ್ ಯುದ್ಧದ ಪ್ರಮುಖಾಂಶಗಳು
* ಷರತ್ತು ವಿಧಿಸಿ ಇಸ್ರೇಲ್ ಮತ್ತು ಯುಎಸ್ ಸಂಧಾನ ಮಾತುಕತೆಗೆ ಮೇಲಿಂದ ಮೇಲೆ ಸೂಚನೆ ನೀಡುತ್ತಿವೆ. ಆದರೆ ಇರಾನ್ ಇದಕ್ಕೆ ಒಪ್ಪಿಲ್ಲ. ಈ ಮಾತುಕತೆ ವಿಫಲವಾದರೆ ಶೀಘ್ರದಲ್ಲೇ ಒಪ್ಪಂದಕ್ಕೆ ಬರಲಾಗದಿದ್ದರೆ, ಅದರಲ್ಲೂ ಹಾರ್ಮುಜ್ ಜಲಸಂಧಿ ತೈಲ ಹಡಗುಗಳಿಗೆ ಮುಕ್ತವಾಗದಿದ್ದರೆ ಇರಾನ್ನ ಇಂಧನ ಮೂಲ ಸೌಕರ್ಯ, ತೈಲ ಬಾವಿಗಳು, ಖರ್ಗ್ ದ್ವೀಪದ ಮೇಲೆ ದಾಳಿ ಮಾಡಿ ನಾಶ ಮಾಡುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

* ಮಧ್ಯಪ್ರಾಚ್ಯದಲ್ಲಿನ ಯುದ್ಧದ ಮುಂದುವರಿದ ಪರಿಣಾಮ ಇರಾನ್ನಲ್ಲಿ ಸಾವಿನ ಸಂಖ್ಯೆ 3500 ದಾಟಿದೆ. ಇನ್ನೊಂದೆಡೆ ಟ್ರಂಪ್ ಇರಾನ್ ಜತೆ ಮಾತುಕತೆ ನಡೆಸುವುದಾಗಿ ಹೇಳುತ್ತಿದ್ದಾರೆ. ಇದೆಲ್ಲ ಬೆಳವಣಿಗೆ ಮಧ್ಯದಲ್ಲಿ ದೆಹಲಿಗೆ ಬರಬೇಕಿದ್ದ ಇರಾನ್ ವಿಮಾನದ ಮೇಲೆ ಇರಾನ್ನ ಮಶಾದ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ದಾಳಿ ನಡೆಸಿದ್ದರಿಂದ ವಿಮಾನಕ್ಕೆ ಹಾನಿಯಾಗಿದೆ.
* ಇರಾನ್ ಸಂಧಾನ ಮಾತುಕತೆ ಆಡದೇ ತಾನು ಸಹ ಷರತ್ತು ವಿಧಿಸುತ್ತಿದೆ. ಇತ್ತ ಅಮೆರಿಕಾಇರಾನ್ ಭೂಭಾಗದ ಸುತ್ತಲೂ ಭೂದಾಳಿಗೆ ಸಜ್ಜಾಗುತ್ತಿದೆ, ಸೈನಿಕರನ್ನು ಅಣಿಗೊಳಿಸುತ್ತಿದೆ ಎಂದು ವರದಿ ಆಗಿದೆ. ಯಾವುದೇ ಕ್ಷಣದಲ್ಲೂ ಇನ್ನಷ್ಟು ದಾಳಿಗಳು ಇರಾನ್ ಮೇಲಾಗದಬಹುದು ಎನ್ನಲಾಗಿದೆ. ಇರಾನ್ ಪ್ರತಿದಾಳಿ ಮಾಡಲು, ಯುಎಸ್-ಇಸ್ರೇಲ್ ದಾಳಿ ಎದುರಿಸಲು ಸಿದ್ಧವೆಂದು ಪ್ರತ್ಯುತ್ತರ ಕೊಟ್ಟಿದೆ.
* ಅಮೆರಿಕ ಇರಾನ್ ಮೇಲೆ ಭೂದಾಳಿ ನಡೆಸಿದಲ್ಲಿ ಇರಾನ್ ನೆರವಿಗೆ ರಷ್ಯಾ ಬರಲು ಸಕಲ ಸನ್ನದ್ಧವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ರಷ್ಯಾ ಚೆಚೆನ್ ಹೋರಾಟಗಾರರನ್ನು ಅಖಾಡಕ್ಕೆ ಇಳಿಸುವ ನಿರೀಕ್ಷೆ ಇದೆ. ಈ ಬಗ್ಗೆ ಇರಾನ್ನ ಪ್ರೆಸ್ ಟಿವಿ ವಾಹಿನಿಯ ವರದಿ ಮಾಡಿದ್ದು, ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ದೊರೆಯಬೇಕಿದೆ.
* ಅಮೆರಿಕದ ಸೇನಾ ನೆಲೆಗಳು ವಿಶ್ವದಾದ್ಯಂತ ವಿಸ್ತರಿಸಿದೆ. ವಿಶ್ವದ 70ಕ್ಕೂ ಹೆಚ್ಚು ದೇಶಗಳಲ್ಲಿ 750ಕ್ಕೂ ಅಧಿಕ ಸೇನಾ ನೆಲೆಗಳನ್ನು ಯುಎಸ್ ಹೊಂದಿದೆ. ಈ ನೆಲೆಗಳು 195 ರಾಷ್ಟ್ರಗಳ ಮೇಲೆ ಕಣ್ಗಾವಲು ಇಡುವ ದೃಷ್ಟಿಯಿಂದಲೇ ಯುಎಸ್ ತನ್ನ ಸೇನಾ ಜಾಲವನ್ನು ವಿಶ್ವವ್ಯಾಪಿ ವಿಸ್ತರಣೆ ಮಾಡಿದೆ.
* ದಶಕಗಳ ಹಿಂದೆ ಕ್ಯೂಬಾದಲ್ಲಿ ಮೊದಲ ವಿದೇಶಿ ನೆಲೆ ಸ್ಥಾಪಿಸಿದ್ದ ಅಮೆರಿಕ ಬಳಿಕ ಜಪಾನ್, ಜರ್ಮನಿ, ದಕ್ಷಿಣ ಕೊರಿಯಾ, ಮಧ್ಯಪ್ರಾಚ್ಯ ರಾಷ್ಟ್ರಗಳು ಒಳಗೊಂಡಂತೆ ಅನೇಕ ದೇಶಗಳಲ್ಲಿ ವಿಸ್ತರಣೆ ಮಾಡಿತು. ಕಷ್ಟಕಾಲದಲ್ಲಿ ಮೈತ್ರಿ ರಾಷ್ಟ್ರಗಳಿಗೆ ನೆರವೂ ಆಗುತ್ತವೆ. ವಿರೋಧ ಕಟ್ಟಿಕೊಂಡಾಗ ಎರಗಿ ಬೀಳಲು ಸಿದ್ಧವು ಆಗಿವಂತೆ ನಿರ್ವಹಣೆ ಮಾಡಲಾಗುತ್ತಿತ್ತು ಎಂದು ವರದಿ ಆಗಿದೆ.
* ಇತರ ದೇಶಗಳೊಂದಿಗೆ ಸ್ನೇಹಪರವಾಗಿರುವ ಭಾರತ ರಾಷ್ಟ್ರದಲ್ಲಿ ಅಮೆರಿಕಾಗೆ ಯಾವುದೇ ಸೇನಾನೆಲೆ ಸ್ಥಾಪಿಸಲು ಅವಕಾಶ ನೀಡಲಾಗಿಲ್ಲ. ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸುವ ಭಾರತ ಇಲ್ಲಿನ ಸೇನಾನೆಲೆಗಳು ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾರ್ಯ ಕೈಗೊಂಡಿಲ್ಲ. ಭೂಭಾಗದ ಮೇಲೆ ಸ್ವತಂತ್ರ ಹಿಡಿದ ಇರುವಂತೆ ನೋಡಿಕೊಂಡಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/iran-war-update-day-32-us-and-israel-launch-joint-airstrikes-on-isfahan-military-base-know-more-449001.html. xn--babytilbehr-pgb.com does not claim ownership of this content. All rights remain with the original publisher.
