
India
oi-Shiddalingesh S
ಪ್ರಪಂಚದ ಅಗ್ರಸ್ಥಾನದ ಕಂಪನಿಗಳನ್ನು ಮುನ್ನಡೆಸುತ್ತಿರುವ ಅನೇಕ ಭಾರತೀಯ ಮೂಲದ ನಾಯಕರು ಐಐಟಿಯಿಂದ ಪದವೀಯನ್ನು ಪಡೆದವರಲ್ಲ ಎಂಬುದು ಗಮನಾರ್ಹ ಸಂಗತಿ. ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ಮತ್ತು ಅಡೋಬ್‌ನ ಶಾಂತನು ನಾರಾಯಣ್ ಅವರಂತಹ ನಾಯಕರು ವಿಭಿನ್ನ ಶೈಕ್ಷಣಿಕ ಹಿನ್ನೆಲೆಯಿಂದ ಬಂದವರಾಗಿದ್ದು, ಜಾಗತಿಕ ಮಟ್ಟದಲ್ಲಿ ಯಶಸ್ಸು ಸಾಧಿಸಿದ್ದಾರೆ.
ಐಐಟಿ ಶಿಕ್ಷಣವು ಅತ್ಯಂತ ಪ್ರತಿಷ್ಠಿತವಾದುದಾದರೂ ಉನ್ನತ ಹುದ್ದೆಗಳಿಗೆ ಹೋಗುವ ಏಕೈಕ ದಾರಿಯಲ್ಲ ಎಂಬುದನ್ನು ಈ ನಾಯಕರುಗಳು ತೋರಿಸಿದ್ದಾರೆ. ತಂತ್ರಜ್ಞಾನ, ಬ್ಯಾಂಕಿಂಗ್, ಫ್ಯಾಷನ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿ ಇವರ ಸಾಧನೆ ಗಮನಾರ್ಹವಾಗಿದೆ.

ಐಐಟಿ ಪದವೀಧರರಲ್ಲದ ಪ್ರಭಾವಿ ಭಾರತೀಯ ಸಿಇಒಗಳು
1. ಸತ್ಯ ನಾಡೆಲ್ಲಾ (ಮೈಕ್ರೋಸಾಫ್ಟ್)
ಹೈದರಾಬಾದ್‌ನಲ್ಲಿ ಜನಿಸಿದ ಸತ್ಯ ನಾಡೆಲ್ಲಾ, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ ಅಮೆರಿಕದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಇಂದು ಮೈಕ್ರೋಸಾಫ್ಟ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2. ಶಾಂತನು ನಾರಾಯಣ್ (CEO, ಅಡೋಬ್)
ಶಾಂತನು ನಾರಾಯಣ್ ಹೈದರಾಬಾದ್ ಮೂಲದವರು. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದ ಅವರು 2007ರಿಂದ ಅಡೋಬ್‌ನ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
3. ಸಿಎಸ್ ವೆಂಕಟಕೃಷ್ಣನ್ (ಬಾರ್ಕ್ಲೇಸ್ ಬ್ಯಾಂಕ್)
ಮೈಸೂರು ಮೂಲದ ಸಿಎಸ್ ವೆಂಕಟಕೃಷ್ಣನ್, ಎಂಐಟಿಯಿಂದ ಉನ್ನತ ಪದವಿಗಳನ್ನು ಪಡೆದು ಪ್ರಸ್ತುತ ಬಾರ್ಕ್ಲೇಸ್ ಬ್ಯಾಂಕ್‌ನ ಸಿಇಒ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
4. ಲೀನಾ ನಾಯರ್ (ಶನೆಲ್)
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜನಿಸಿದ ಲೀನಾ ನಾಯರ್, XLRI ಜಮ್ಶೆಡ್‌ಪುರದಿಂದ ಎಂಬಿಎ ಪದವಿ ಮಾಡಿ, ಶನೆಲ್ ನಲ್ಲಿ ಜಾಗತಿಕ ಸಿಇಒ ಆಗಿ ನೇಮಕಗೊಂಡಿದ್ದಾರೆ.
5. ಸಂಜಯ್ ಮೆಹ್ರೋತ್ರಾ (ಮೈಕ್ರಾನ್ ಟೆಕ್ನಾಲಜಿ)
ಕಾನ್ಪುರ ಮೂಲದ ಸಂಜಯ್ ಮೆಹ್ರೋತ್ರಾ, ಇವರು ಪ್ರಸಿದ್ಢ ಫ್ಲಾಷ್ ಮೆಮೊರಿ ಕಂಪನಿ ಸ್ಯಾನ್ ಡಿಸ್ಕ್ ಸಹ ಸಂಸ್ಥಾಪಕರಾಗಿದ್ದು ಪ್ರಸ್ತುತ, ಮೈಕ್ರಾನ್ ಟೆಕ್ನಾಲಜಿಯ ಸಹ-ಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಅವರು ಬಿಟ್ಸ್ (ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ) ಪಿಲಾನಿಯಿಂದ ಅಮೆರಿಕಕ್ಕೆ ತೆರಳಿ ತಮ್ಮ ವೃತ್ತಿಜೀವನವನ್ನು ನಿರ್ಮಿಸಿಕೊಂಡಿದ್ದಾರೆ.
ಐಐಟಿ ಪದವಿ ಇಲ್ಲದೇ ಕೂಡ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಈ ಅಪ್ರತಿಮ ನಾಯಕರು ಸ್ಪಷ್ಟ ಉದಾಹರಣೆ ಆಗಿದ್ದಾರೆ. ಪ್ರತಿಭೆ, ಪರಿಶ್ರಮ ಮತ್ತು ಸರಿಯಾದ ಅವಕಾಶಗಳು ಇದ್ದರೆ ಯಾವುದೇ ಶೈಕ್ಷಣಿಕ ಹಿನ್ನೆಲೆಯವರೂ ಯಶಸ್ಸು ಸಾಧಿಸಬಹುದು.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/top-5-indian-origin-ceo-who-didn-t-study-at-iit-from-satya-nadella-to-shantanu-narayen-stories-449077.html. xn--babytilbehr-pgb.com does not claim ownership of this content. All rights remain with the original publisher.
