ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್‍‌ಸಿಬಿ! | IPL 2026 Points Table: RR Leads with Massive NRR; RCB and MI Secure Early Wins in Season Opener

Sports

oi-Shankrappa Parangi

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ ತಿಂಗಳಾಂತ್ಯದಿಂದ ಶುರುವಾಗಿದೆ. ಹಲವಾರು ತಂಡಗಳ ಪೈಕಿ ಈಗಾಗಲೇ ಒಟ್ಟು ಹತ್ತು ತಂಡಗಳು ಕಣಕ್ಕಿಳಿದು ಶೌರ್ಯ ಪ್ರದರ್ಶಿಸಿವೆ. ಅದರಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು (RCB) ಸೇರಿ ವಿವಿಧ ತಂಡಗಳು ಗೆಲುವು ತಮ್ಮದಾಗಿಸಿಕೊಂಡಿವೆ. ಆದರೆ ಉಳಿದ ತಂಡಗಳು ಮೊದಲ ಗೆಲುವಿಗೆ ತವಕಿಸುತ್ತಿವೆ. ಗೆದ್ದ ತಂಡಗಳ ಸೇರಿದಂತೆ ಯಾವ ಕ್ರಿಕೆಟ್ ತಂಡಗಳು ಆರೇಂಜ್ ಮತ್ತು ಪರ್ಪಲ್ ಕ್ಯಾಪ್‌ನಲ್ಲಿ ಯಾವ ಸ್ಥಾನದಲ್ಲಿವೆ ಎಂಬ ಮಾಹಿತಿ ಇಲ್ಲಿದೆ.

ಇಂದು ಗುರುವಾರ ಐಪಿಎಲ್‌ ಲೀಗ್ ಹಂತದಲ್ಲಿ ತಂಡಗಳು ತಮ್ಮ ಎರಡನೇ ಆಟವನ್ನು ಆಡಿವೆ. ಅಂಕಪಟ್ಟಿಯಲ್ಲಿ ಈವರೆಗೆ, ರಾಯಲ್ ಚಾಲೇಂಜರ್ಸ್ ಬೆಂಗಳೂರು (RCB), ರಾಜಸ್ಥಾನ್ ರಾಯಲ್ಸ್ (RR), ದೆಹಲಿ ಕ್ಯಾಪಿಟಲ್ಸ್ (DC) ಪಂಜಾಬ್ ಕಿಂಗ್ಸ್ (PBKS) ಹಾಗೂ ಮುಂಬೈ ಇಂಡಿಯನ್ಸ್ (MI) ತಂಡಗಳು ಈವರೆಗೆ ಒಂದೊಂದು ಪಂದ್ಯ ಗೆದ್ದಿವೆ.

IPL 2026 Points Table

ರಾಜಸ್ಥಾನ್ ರಾಯಲ್ಸ್ ಅಬ್ಬರ, ಟಾಪ್‌ನಲ್ಲಿ ರನ್‌ರೇಟ್

ಮೊನ್ನೆಯಷ್ಟೇ ಚೆನ್ನೈ ಸೂಪರ್‍‌ ಕಿಂಗ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ತಂಡ ಮಣಿಸಿ ಗೆಲುವು ತನ್ನದಾಗಿಸಿಕೊಂಡಿತು. ಇದರಿಂದ ಸಿಎಸ್‌ಕೆಗೆ ಮೊದಲ ಆಟದಲ್ಲಿ ಸೋಲ ಕಾಣುವಂತಾಯಿತು. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ರನ್ ರೇಟ್ 4.171 ಇದ್ದು, ಟಾಪ್ ಸ್ಥಾನದಲ್ಲಿದೆ. ಆರ್‍‌ಸಿಬಿ ಎರಡನೇ ಸ್ಥಾನದಲ್ಲಿದ್ದು, ದೆಹಲಿ ಕ್ಯಾಪಿಟಲ್ಸ್ ನಂತರದ ಸ್ಥಾನದಲ್ಲಿದೆ. ಇನ್ನೂ ನಾಲ್ಕನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಇದ್ದು, ಪಂಜಾಬ್ ಐದನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ಲಕ್ನೋ ಸೂಪರ್‌ ಜೈಂಟ್ಸ್‌, ಸನ್‌ರೈಸರ್ಸ್‌ ಹೈದರಾಬಾದ್, ಗುಜರಾತ್ ಟೈಟಾನ್ಸ್‌, ಕೋಲ್ಕತ್ತ ನೈಟ್‌ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಮೊದಲ ಗೆಲುವಿಗೆ ಹಾತೊರೆಯುತ್ತಿವೆ. ಮುಂಬೈ ಇಂಡಿಯನ್ಸ್ ತಂಡದ ರಯಾನ್ ರಿಕಲ್ಟನ್ ಅವರು ಆರೆಂಜ್ ಕ್ಯಾಪ್ ರೇಸಿನಲ್ಲಿ ಮೊದಲಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಜೇಕಬ್ ಅವರು ಪರ್ಪಲ್ ಕ್ಯಾಪ್ ರೇಸಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಹೆಚ್ಚು ರನ್ ಗಳಿಸಿದ ಆಟಗಾರರು

ಐಪಿಎಲ್ ಮೊದಲ ಪಂದ್ಯಾವಳಿಗಳಲ್ಲೇ ಅತೀ ಹೆಚ್ಚು ರನ್‌ ಗಳಿಸಿದವರ ಸಾಲಿನಲ್ಲಿ ಮುಂಬೈ ಇಂಡಿಯ್ಸನ್ ತಂಡದ ರಯಾನ್‌ ರಿಕಲ್ಟನ್- 81 ರನ್‌, ಎಸ್‌ಆರ್‌ಎಚ್‌ ಬ ಇಶಾನ್‌ ಕಿಶನ್‌- 80 ರನ್‌, ಎಂಐ ತಮಡದ ರೋಹಿತ್ ಶರ್ಮಾ-78 ರನ್‌, ಪಂಜಾಬ್ ಕಿಂಗ್ಸ್‌ನ ಕೂಪರ್ ಕಾನೋಲಿ 72 ರನ್ ಹಾಗೂ ದೆಹಲಿ ಕ್ಯಾಪಿಟಲ್ಸ್‌ನ‌ ಸಮೀರ್ ರಿಜ್ವಿ ಅವರು 70 ರನ್‌ ಗಳಿಸಿ ಕೊನೆ ಸ್ಥಾನದಲ್ಲಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/ipl-2026-points-table-rr-leads-with-massive-nrr-rcb-and-mi-secure-early-wins-in-season-opener-449233.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo