
Entertainment
oi-Hitesh Y
Adah Sharma: ಸೋಷಿಯಲ್ ಮೀಡಿಯಾದಲ್ಲಿ ಕೆಲವರು ನಟಿಮಣಿಯರಿಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದು, ಅಸಭ್ಯ ಪ್ರಶ್ನೆಗಳನ್ನು ಕೇಳುವುದು ಹಾಗೂ ಟ್ರೋಲ್ ಮಾಡುವುದು ಈಗಲೂ ಮುಂದುವರಿದಿದೆ. ಈ ರೀತಿ ಮಾಡುವವರಿಗೆ ಕೆಲವು ನಟಿಯರು ಸರಿಯಾಗಿ ತಿರುಗೇಟು ನೀಡುವುದು ಇದೆ. ಇದೀಗ ಅಸಭ್ಯವಾಗಿ ವರ್ತನೆ ಮಾಡಿದ ನೆಟ್ಟಿಗನೊಬ್ಬನಿಗೆ ಬಾಲಿವುಡ್ ಮತ್ತು ದಕ್ಷಿಣ ಭಾರತದ ಜನಪ್ರಿಯ ನಟಿ ಅದಾ ಶರ್ಮಾ ಸದಾ ಅವರು ಮುಟ್ಟಿ ನೋಡಿಕೊಳ್ಳುವಂತೆ ರಿಪ್ಲೈ ಕೊಟ್ಟಿದ್ದಾರೆ.
ಬಾಲಿವುಡ್ ಮತ್ತು ದಕ್ಷಿಣ ಭಾರತದ ಜನಪ್ರಿಯ ನಟಿ ಆಗಿರುವ ಅದಾ ಶರ್ಮಾ ಅವರು ದಿ ಕೇರಳ ಸ್ಟೋರಿ ಸಿನಿಮಾದ ಭರ್ಜರಿ ಸಕ್ಸಸ್‌ನ ನಂತರ ಭಾರೀ ಬ್ಯುಸಿಯಾಗಿದ್ದಾರೆ. ಅಲ್ಲದೆ ಅವರ ಸಿನಿಮಾದ ಯಶಸ್ಸಿನ ನಂತರ ಜನಪ್ರಿಯತೆ ದೇಶದಾದ್ಯಂತ ಹೆಚ್ಚಳವಾಗಿದೆ. ಇನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು, ಆಗ್ಗಾಗೆ ಕೆಲವೊಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಕೆಲವು ನೆಟ್ಟಿಗರು ಕೆಟ್ಟ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದರಲ್ಲೂ ಒಬ್ಬ ನೆಟ್ಟಿಗ ನಿಮ್ಮ ಸೈಜ್ ಎಷ್ಟು ಎಂದು ಕೇಳಿದ್ದು, ನಟಿ ಕೆಂಡಾಮಂಡಲರಾಗಿದ್ದಾರೆ.

ಇನ್ನು ಕರ್ನಾಟಕದಲ್ಲೂ ನಟಿಯರಿಗೆ ಹಾಗೂ ಕೆಲವು ಸೆಲೆಬ್ರಿಟಿಗಳಿಗೆ ತಪ್ಪಾದ / ಅಸಭ್ಯ ಕಾಮೆಂಟ್‌ಗಳು ಬರುತ್ತಿದ್ದವು. ಈ ರೀತಿಯ ಕೆಟ್ಟ ಕಾಮೆಂಟ್‌ಗಳಿಗೆ ನಟಿಯಾದ ರಮ್ಯಾ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ತಿರುಗಿ ಬಿದ್ದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರ ವಿರುದ್ಧ ಸ್ಯಾಂಡಲ್‌ವುಡ್ ಕ್ವಿನ್ ನಟಿ ರಮ್ಯಾ ಹಾಗೂ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ರೀತಿ ದೂರು ನೀಡಿದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಇದೇ ಮಾದರಿಯಲ್ಲಿ ಭಾರತದ ವಿವಿಧ ಭಾಗದ ನಟಿಯರು ಸಹ ತಮ್ಮದೇ ಶೈಲಿಯಲ್ಲಿ ಈ ಟ್ರೋಲ್‌ಗಳನ್ನು ಡೀಲ್ ಮಾಡುತ್ತಿದ್ದಾರೆ
ಅಸಭ್ಯ ಪ್ರಶ್ನೆಗೆ ನಟಿ ಅದಾ ಶರ್ಮಾ ತಿರುಗೇಟು
ಇನ್ನು ಈಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಅದಾ ಶರ್ಮಾ ಆಸ್ಕ್ ಮಿ ಎನಿಥಿಂಗ್ / ಏನಾದರೂ ಕೇಳಿ ಎನ್ನುವ ಸೆಷನ್ ನಡೆಸಿದ್ದರು. ಸಹಜವಾಗಿ ಸೆಲೆಬ್ರಿಟಿಗಳು ಹಾಗೂ ನಟಿಯರು, ನಟರು ಹಾಗೂ ಕಿರುತೆರೆಯಲ್ಲಿ ಇರುವವರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ಸಹ ಈ ರೀತಿಯ ಸೆಷನ್‌ಗಳನ್ನು ನಡೆಸುವುದು ಇದೆ. ಆದರೆ ಈ ಸೆಷನ್‌ಗೆ ನೆಟ್ಟಿಗನೊಬ್ಬ ನಿಮ್ಮ ಸೈಜ್ ಎಷ್ಟು ಎಂದು ಅಸಭ್ಯವಾಗಿ ಹಾಗೂ ಮುಜುಗರಕ್ಕೆ ಒಳಗಾಗುವಂತೆ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ಅದಾ ಶರ್ಮಾ ಅವರು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. ಸಾಮಾನ್ಯವಾಗಿ ಈ ರೀತಿಯ ಕಾಮೆಂಟ್‌ಗಳನ್ನು ಕೆಲವರು ನಿರ್ಲಕ್ಷಿಸುವುದು ಇದೆ. ಆದರೆ ಅದಾ ಶರ್ಮಾ ಅವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಅದಾ ಶರ್ಮಾ ಕೊಟ್ಟ ರಿಪ್ಲೈ ಏನು
ಇನ್ನು ಅದಾ ಶರ್ಮಾ ಅವರು ನೆಟ್ಟಿಗನಿಗೆ ಮುಟ್ಟಿ ನೋಡಿಕೊಳ್ಳುವಂತೆ ರಿಪ್ಲೈ ಕೊಟ್ಟಿದ್ದಾರೆ. ಅಸಭ್ಯವಾಗಿ ಪ್ರಶ್ನೆ ಮಾಡಿದವನಿಗೆ ಅದಾ ಶರ್ಮಾ ನನ್ನ ಚಪ್ಪಲಿಯ ಸೈಜ್ 9 ಅಂತ ಹೇಳಿದ್ದಾರೆ. ನಟಿಯ ಈ ಬೋಲ್ಡ್ ನಡೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/adah-sharma-slams-troll-with-bold-reply-after-rude-size-question-on-social-media-449277.html. xn--babytilbehr-pgb.com does not claim ownership of this content. All rights remain with the original publisher.
