ಸಿಎಸ್‌ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್‌ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ | Devdutt Padikkal Reveals Secret Behind His Explosive Batting Ahead of RCB vs CSK IPL 2026 Clash

Sports

oi-Madhusudhan KR

Devdutt Padikkal: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಏಪ್ರಿಲ್‌ 5) ನಡೆಯುವ ಐಪಿಎಲ್‌ 2026 ಪಂದ್ಯದಲ್ಲಿ ಆರ್‌ಸಿಬಿಯು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೂ ಮುನ್ನ ತಮ್ಮ ಆಕ್ರಮಣಕಾರಿ ಆಟದ ಹಿಂದಿನ ಹರಸ್ಯದ ಬಗ್ಗೆ ಕನ್ನಡಿಗ ದೇವದತ್ ಪಡಿಕ್ಕಲ್ ಅಚ್ಚರಿ ಮಾಹಿತಿಯನ್ನು ರಿವೀಲ್ ಮಾಡಿ ಗಮನ ಸೆಳದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ದೇವದತ್ ಪಡಿಕ್ಕಲ್, ಈ ಬಾರಿಯ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 26 ಎಸೆತಗಳಲ್ಲಿ 61 ರನ್ ಸಿಡಿಸಿದ ನಂತರ, ತಮ್ಮ ಆಕ್ರಮಣಕಾರಿ ಆಟದ ಹಿಂದಿನ ರಹಸ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ.

Devdutt Padikkal Reveals Secret Behind His Explosive Batting Ahead of RCB vs CSK IPL 2026 Clash

ಆಕ್ರಮಣಕಾರಿ ಬ್ಯಾಟಿಂಗ್ ಹಿಂದಿನ ರಹಸ್ಯ ರಿವೀಲ್

“ಕೇವಲ ತಾಂತ್ರಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಬದಲಾಗಿದ್ದೇನೆ. ನಾನು ಇಷ್ಟು ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಬಲ್ಲೆ ಎಂಬ ನಂಬಿಕೆಯನ್ನು ಮೊದಲು ನನ್ನಲ್ಲಿ ಬೆಳೆಸಿಕೊಳ್ಳಬೇಕಿತ್ತು. ಸದಾ ಒಂದೇ ಶೈಲಿಯಲ್ಲಿ ಆಡುತ್ತಾ ಬೆಳೆದ ನನಗೆ, ಈ ಬದಲಾವಣೆ ಸುಲಭವಾಗಿರಲಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು “ಈ ಆಕ್ರಮಣಕಾರಿ ಆಟದ ಹಿಂದೆ ಮುಖ್ಯ ಕೋಚ್ ಆಂಡಿ ಫ್ಲವರ್, ಮೊ ಬೊಬಾಟ್ ಮತ್ತು ದಿನೇಶ್ ಕಾರ್ತಿಕ್ ಅವರ ಶ್ರಮವಿದೆ. ಬ್ಯಾಟಿಂಗ್ ಮಾಡುವಾಗ ದೇಹದ ಸಮತೋಲನ ಮತ್ತು ಚೆಂಡನ್ನು ಎದುರಿಸುವ ಮುನ್ನ ಯಾವ ರೀತಿಯಲ್ಲಿ ರೆಡಿಯಾಗಿರಬೇಕು ಎಂಬ ಬಗ್ಗೆ ಕಳೆದ ಎರಡು ವರ್ಷಗಳಿಂದ ಅವರಿಂದ ಕಲಿತುಕೊಂಡಿದ್ದೇನೆ” ಎಂದು ಪಡಿಕ್ಕಲ್ ಸ್ಫೋಟಕ ಮಾಹಿತಿ ರಿವೀಲ್ ಮಾಡಿದ್ದಾರೆ.

ಕನ್ನಡಿಗನಿಗೆ ಬೆನ್ನೆಲುಬಾಗಿರುವುದು ಯಾರು?

“ಆರ್‌ಸಿಬಿ ತಂಡದಲ್ಲಿ ತಮ್ಮ ಪಾತ್ರವೇನು ಎಂಬ ಬಗ್ಗೆ ಈಗ ಸ್ಪಷ್ಟತೆಯಿದೆ. ಆರಂಭಿಕರಾಗಿ ಉತ್ತಮವಾಗಿ ಆಡುವುದು ಮತ್ತು ಮಧ್ಯಮ ಓವರ್‌ಗಳಲ್ಲಿ ರನ್ ವೇಗ ತಗ್ಗದಂತೆ ನೋಡಿಕೊಳ್ಳುವುದು ನನ್ನ ಮುಖ್ಯ ಗುರಿಯಾಗಿದೆ. ಇದರಿಂದ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ರನ್ ಗಳಿಸಿರುವುದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಭಾರತ ತಂಡದ ಪರ ಆಡುವುದು ತಮ್ಮ ಅಂತಿಮ ಗುರಿಯಾಗಿದ್ದು, ಪ್ರಸ್ತುತ ನಿಯಂತ್ರಣದಲ್ಲಿರುವ ವಿಷಯಗಳ ಮೇಲೆ ಮಾತ್ರ ಗಮನ ಹರಿಸುತ್ತಿದ್ದೇನೆ,” ಎಂದು ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ, ಶಾಂತ ಸ್ವಭಾವದ ಬ್ಯಾಟರ್ ಎನಿಸಿಕೊಂಡಿದ್ದ ಪಡಿಕ್ಕಲ್, ಈಗ ಟಿ20 ಕ್ರಿಕೆಟ್‌ಗೆ ತಕ್ಕಂತೆ ಒಬ್ಬ ಸ್ಪೋಟಕ ಆಟಗಾರನಾಗಿ ಹೊರಹೊಮ್ಮುತ್ತಿರುವುದು ಕಂಡುಬರುತ್ತಿದೆ. ಅದರಲ್ಲೂ ಅವರು ಕನ್ನಡಿಗರಾಗಿರುವುದು ಮತ್ತೊಂದು ವಿಶೇಷವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/devdutt-padikkal-reveals-secret-behind-his-explosive-batting-ahead-of-rcb-vs-csk-ipl-2026-clash-449435.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo