First Rail: ದಶಕ ಪೂರೈಸಿದ ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲು; ಅದರ ಸಂಚಾರ ವೇಗ, ಮಾರ್ಗದ ವಿವರ | Gatimaan Express Train Completes 10 Years: India’s First Semi-High-Speed Train’s Decade of Excellence

India

oi-Shankrappa Parangi

ದಶಕದ ಹಿಂದೆ ಅಂದಿನ ರೈಲ್ವೆ ಸಚಿವ ಸುರೇಶ್ ಪ್ರಭಾಕರ್ ಪ್ರಭು ಅವರು ದೆಹಲಿಯ ಹಜರತ್ ನಿಜಾಮುದ್ದೀನ್ (NZM) ರೈಲ್ವೆ ನಿಲ್ದಾಣದಿಂದ ಉದ್ಘಾಟಿಸಿದ್ದ ‘ಭಾರತದ ಮೊದಲ ಸೆಮಿ-ಹೈ-ಸ್ಪೀಡ್ ರೈಲು’ ಇಂದು ಭಾನುವಾರ ಏಪ್ರಿಲ್ 5ಕ್ಕೆ 10 ವರ್ಷ ಪೂರೈಸಿದೆ. ಸದ್ಯ ಉತ್ತರ ರೈಲ್ವೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಈ ರೈಲಿನ ಮಾರ್ಗ, ವೇಗ ಎಷ್ಟಿದೆ, ಇನ್ನಿತರ ವಿವರ ಇಲ್ಲಿದೆ.

‘ಗತಿಮಾನ್ ಎಕ್ಸ್‌ಪ್ರೆಸ್’ ಹೆಸರಿನ ರೈಲು ಭಾರತದ ಮೊದಲ ಸೆಮಿ-ಹೈ-ಸ್ಪೀಡ್ ರೈಲು ಆಗಿ ಹತ್ತು ವರ್ಷಗಳ ಹಿಂದೆ ಸೇವೆ ಆರಂಭಿಸಿತ್ತು. ಹಜರತ್ ನಿಜಾಮುದ್ದೀನ್ (NZM) ಮತ್ತು ಆಗ್ರಾ ಕ್ಯಾಂಟ್ ನಡುವೆ ಸಂಚಾರ ಶುರು ಮಾಡಿತ್ತು. ನಂತರ ಅದರ ಸೇವೆಯನ್ನು 2018 ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಬುಂದೇಲ್‌ಖಂಡ್ ವರೆಗೂ ವಿಸ್ತರಣೆ ಮಾಡಲಾಯಿತು. ಸದ್ಯ ಈ ರೈಲು ವಿರಂಗನ ಲಕ್ಷ್ಮಿಬಾಯಿ ಝಾನ್ಸಿ ಜಂಕ್ಷನ್ ವರೆಗೆ ಸೇವೆ ನೀಡುತ್ತಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Gatimaan Express Train

ಗ್ವಾಲಿಯರ್ ಮತ್ತು ಝಾನ್ಸಿ ಮತ್ತು ಸುತ್ತಮುತ್ತಲಿನ ವಿವಿಧ ಪ್ರವಾಸಿ ತಾಣಗಳಿಗೆ ಈ ರೈಲು ಮಹತ್ವದ ಸೇವೆ ನೀಡುತ್ತಿತ್ತು. ಪ್ರವಾಸಿಗರ ಸಂಚಾರ ಸುಗಮ ಗೊಳಿಸಿದ ಕೀರ್ತಿ ಈ ರೈಲಿಗೂ ಸಲ್ಲಿಸುತ್ತದೆ. ಪ್ರತಿ ಗಂಟೆಗೆ ಗರಿಷ್ಠ 160 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಶಕ್ತಿ ಇದಕ್ಕಿದೆ.

ಗತಿಮಾನ್ ಎಕ್ಸ್‌ಪ್ರೆಸ್ ರೈಲು ನಿಲ್ದಾಣಗಳು, ರೈಲು ಸಂಖ್ಯೆ

ಹಜರತ್ ನಿಜಾಮುದ್ದೀನ್ ಮತ್ತು ವಿರಂಗನ ಲಕ್ಷ್ಮಿಬಾಯಿ ಝಾನ್ಸಿ ಮಧ್ಯದ ಮಾರ್ಗದಲ್ಲಿ ಸಂಚರಿಸುವ ಈ ರೈಲು (12050/12049) ಎರಡು ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ. ಆಗ್ರಾ ಕ್ಯಾಂಟ್ ಮತ್ತು ಗ್ವಾಲಿಯರ್ ನಿಲ್ದಾಣದಲ್ಲಿ ನಿಲ್ಲುತ್ತದೆ. ವಾರದಲ್ಲಿ ಒಂದು ದಿನ (ಶುಕ್ರವಾರ) ಬಿಟ್ಟು ಉಳಿದೆಲ್ಲ ದಿನಗಳು ಸೇವೆ ನೀಡುವ ರೈಲಾಗಿದೆ.

ಗತಿಮಾನ್ ಎಕ್ಸ್‌ಪ್ರೆಸ್ ರೈಲು ಎರಡು ಎಕ್ಸಿಕ್ಯುಟಿವ್ ಎಸಿ ಚೇರ್ ಕಾರ್ ಮತ್ತು ಎಂಟು ಎಸಿ ಚೇರ್ ಕಾರ್ ಕೋಚ್‌ಗಳನ್ನು ಹೊಂದಿದ್ದು, 5500 ಎಚ್‌ಪಿ ಎಲೆಕ್ಟ್ರಿಕ್ ಲೋಕೋಮೋಟಿವ್‌ ಎಂಜಿನ್‌ನಿಂದ ಸಂಚರಿಸುತ್ತದೆ. ಕೋಚ್‌ಗಳಲ್ಲಿ ಬಯೋ ಟಾಯ್ಲೆಟ್‌ಗಳನ್ನು ಅಳವಡಿಸಲಾಗಿದೆ. ಈ ರೈಲನ್ನು ರೈಲ್ ಕೋಚ್ ಫ್ಯಾಕ್ಟರಿ (RCF) ತಯಾರಿಸಿದೆ. ವಿಭಿನ್ನ ಬಣ್ಣಗಳಿಂದ ರೈಲು ಕೋಚ್‌ಗಳ ಹೊರಭಾಗ ಸಿಂಗರಿಸಲಾಗಿದೆ. ಒಳಾಂಗಣದಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ದಶಕದಿಂದಲೂ ಕೋಟ್ಯಾಂತರ ಪ್ರಯಾಣಿಕರಿಗೆ ಆರಾಮದಾಯಕ ಸೇವೆ ನೀಡುತ್ತಾ ಬಂದಿದೆ.

ಹಜರತ್ ನಿಜಾಮುದ್ದೀನ್ (ಎನ್‌ಜೆಡ್‌ಎಂ) ಮತ್ತು ವಿರಂಗನ ಲಕ್ಷ್ಮಿಬಾಯಿ ಝಾನ್ಸಿ ಜಂಕ್ಷನ್ ವರೆಗೆ ಚೇರ್ ಕಾರ್ ನಲ್ಲಿ ಚಲಿಸಲು ಒಬ್ಬರಿಗೆ ಟಿಕೆಟ್ 1,140 ರೂ., ಅದೇ ಎಕ್ಸಿಕ್ಯೂಟಿವ್ ಕ್ಲಾಸ್ ದರ 2,300 ರೂ. ಇದೆ. ಇವತ್ತಿಗೂ ಈ ಭಾಗದ ಪ್ರಯಾಣಿಕರ ಪ್ರಮುಖ ರೈಲು ಇದಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/gatimaan-express-train-completes-10-years-india-s-first-semi-high-speed-train-s-decade-of-excellenc-449455.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo