Highway Toll Rules: ಏ.10ರಿಂದ ಫಾಸ್ಟ್ಯಾಗ್, ಯಪಿಐ ಪಾವತಿಸದಿದ್ದರೆ ಹೆಚ್ಚುವರಿ ದಂಡ ಕಟ್ಟಲು ಸಜ್ಜಾಗಿ | New Highway Toll Rules 2026: Cash Banned from April 10; FASTag and UPI Only Modes Allowed, Know more

India

oi-Shankrappa Parangi

ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಟೋಲ್ ಶುಲ್ಕ ಸಂಗ್ರಹ ನಿಯಮದಲ್ಲಿ ಬದಲಾವಣೆ ಆಗಲಿದೆ. ಇದೇ ಏಪ್ರಿಲ್ 10ರಿಂದ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಇವುಗಳನ್ನು ವಾಹನ ಸವಾರರು ತಿಳಿಯಬೇಕಿದೆ. ಹೆದ್ದಾರಿ ಟೋಲ್‌ ಪ್ಲಾಜಾಗಳಲ್ಲಿ ಶುಲ್ಕವನ್ನು ನಗದು ರೂಪದಲ್ಲಿ ಹಣ ಸ್ವೀಕರಿಸುವುದಿಲ್ಲ. ಬದಲಾಗಿ ಫ್ಯಾಸ್ಟ್ಯಾಗ್ ಬಿಟ್ಟರೆ ಯುಪಿಐ ಮೂಲಕ ಮಾತ್ರವೇ ಪಾವತಿಸಬೇಕು ಎಂಬ ಹೊಸ ನಿಯಮ ಜಾರಿ ಆಗಲಿದೆ. ಒಂದು ವೇಳೆ ಈ ಎರಡು ಆಯ್ಕೆಗಳು ಇಲ್ಲದಿದ್ದರೆ ಏನು ಮಾಡಬೇಕು? ಎಂಬ ಮಾಹಿತಿ ಮುಂದಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಏಪ್ರಿಲ್ 10 ರಿಂದ ಟೋಲ್ ಪ್ಲಾಜಾಗಳ ಮೂಲಕ ಹಾದುಹೋಗುವ ವಿಧಾನದಲ್ಲಿ ಪ್ರಮುಖ ಬದಲಾವಣೆ ತರಲಿದೆ. ಯಾವುದೇ ರಾಷ್ಟ್ರೀಯ ಹೆದ್ದಾರಿ ಟೋಲ್ ಬೂತ್‌ಗಳಲ್ಲಿ ನಗದು ಪಾವತಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಘೋಷಿಸಿದೆ. ಸದಾ ಫಾಸ್ಟ್ಯಾಗ್ ರೀಚಾರ್ಜ್‌‌ ಮಾಡಿಕೊಂಡಿರಬೇಕು. ಏಕೆಂದರೆ ಟೋಲ್ ಪಾವತಿ ಕೇವಲ ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಮಾತ್ರವೇ ಸ್ವೀಕರಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

New Highway Toll Rules 2026

ಈ ಬದಲಾವಣೆ ಏಕೆ?

ನಗದು ಪಾವತಿ ವೇಳೆ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುತ್ತವೆ. ಈ ಬದಲಾವಣೆಯಿಂದ ವಿಳಂಬ ತಡೆಬಹುದು. ಹೆಚ್ಚು ಸಮಯವಿಲ್ಲದೇ ತ್ವರಿತವಾಗಿ ಹೆದ್ದಾರಿ ಸಂಚಾರ ಸಾಧ್ಯವಾಗುತ್ತದೆ. ಮುಖ್ಯವಾಗಿ ಲಕ್ಷಾಂತರ ಪ್ರಯಾಣಿಕರಿಗೆ ಜನನಿಬಿಡ ಕಾರಿಡಾರ್‌ಗಳಲ್ಲಿ ವೇಗದ ಪ್ರಯಾಣ ಸಾಧ್ಯವಾಗುತ್ತದೆ.

ನೀವು ಹೈವೇ ಮೂಲಕ ಸಂಚರಿಸುವಾಗ ಫಾಸ್ಟ್‌ಟ್ಯಾಗ್ ಹೊಂದಿಲ್ಲದಿದ್ದರೆ ನೀವು ಡಿಜಿಟಲ್ ಪೇಮೆಂಟ್ (ಯುಪಿಐ) ಮೂಲಕ ಪಾವತಿಸಬಹುದು. ಈ ಎರಡು ಆಯ್ಕೆ ಇಲ್ಲದಿದ್ದರೆ ನೀವು ಪಾವತಿಸಬೇಕಾದ ಶುಲ್ಕದ ಮೇಲೆ (ನಿಗದಿತ ಶುಲ್ಕ) ಶೇ.25ರಷ್ಟು ಹೆಚ್ಚುವರಿ ಶುಲ್ಕ ಕಟ್ಟಬೇಕಾಗುತ್ತದೆ. ಇದಕ್ಕೆ ನೀವು ಸಿದ್ದವಿದ್ದರೆ ಸೂಚಿತ ಎರಡು ವಿಧಾನ ಹೊರತುಪಡಿಸಿ ನಗದು ಪಾವತಿ ಮಾಡಬಹುದೆಂದು ಸಚಿವಾಲಯ ತಿಳಿಸಿದೆ.

ದಂಡ ವಿಧಿಸುವ ಹೊಸ ಟೋಲ್ ನಿಯಮಗಳು

ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳ (2008) ನಿಯಮ 14ರಡಿ ನೀವು ಡಿಜಿಟಲ್ ಪೇಮೆಂಟ್ ಮಾಡದಿದ್ದರೆ ನಿಮಗೆ ರಸ್ತೆ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಅಂತಲೂ ವರದಿ ಆಗಿವೆ. ಒಂದು ವೇಳೆ ಡಿಜಿಟಲ್ ಮೂಲಕ ಪಾವತಿಸದಿದ್ದರೆ, ಟೋಲ್ ತಪ್ಪಿಸಿ ಸಂಚಾರ ಮಾಡಿದರೂ ಸಹಿತ ಅಂತಹ ಚಾಲಕರಿಗೆ ಇ-ನೋಟಿಸ್ ಜಾರಿಯಾಗಲಿದೆ. ನೋಟಿಸ್ ಸ್ವೀಕರಿಸಿದ ಮೂರು ದಿನಗಳಲ್ಲಿ ಪಾವತಿಸದಿದ್ದರೆ ದಂಡದ ಮೊತ್ತ ಹೆಚ್ಚಲಿದೆ ಅಂತಲೂ ಸಚಿವಾಲಯ ಎಚ್ಚರಿಸಿದೆ.

ಸರ್ಕಾರಿ ಅಧಿಕಾರಿಗಳಿಗೆ ಏನಿದೆ ನಿಯಮ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ಸರ್ಕಾರಿ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಹಾಗೂ ಇನ್ನಿತರ ಸರ್ಕಾರಿ ವ್ಯಾಪ್ತಿಯ ಮತ್ತು ಇತರರು ವ್ಯಕ್ತಿಗಳು ವೈಯಕ್ತಿಕ ಉದ್ದೇಶಗಳಿಗಾಗಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವಾಗ ಗುರುತಿನ ಚೀಟಿ ಹೊಂದಿರಬೇಕು. ಅದನ್ನು ತೋರಿಸುವ ಮೂಲಕ ಟೋಲ್ ಪಾವತಿ ತಪ್ಪಿಸಬಹುದು. ಅಧಿಕೃತವಾಗಿ ಅರ್ಹತೆ ಪಡೆದ ವಾಹನಗಳಿಗೆ ಮಾತ್ರ ಟೋಲ್ ವಿನಾಯಿತಿ ಇರುತ್ತದೆ. ಇದರೊಂದಿಗೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ಪಡೆಯಬಹುದು.

ಹೆದ್ದಾರಿ ಸವಾರರಿಗೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ವ್ಯವಸ್ಥೆ ಮುಂದುವರಿಯುತ್ತಿದೆ. ಇದನ್ನು ಪಡೆದ ಸವಾರರು ಯಾವುದೇ ರಾಷ್ಟ್ರೀಯ ಹೆದ್ದಾರಿ ಟೋಲ್ ಮೂಲಕ ಹೆಚ್ಚುವರಿ ಹಣವನ್ನು ಪಾವತಿಸದೆ ಎಷ್ಟು ಬಾರಿ ಬೇಕಾದರೂ ಸಂಚಾರ ಮಾಡಬಹುದಾಗಿದೆ. ದೆಹಲಿ ಮತ್ತು ಆಗ್ರಾದಂತಹ ನಗರಗಳ ನಡುವೆ ಒಂದೇ ಸುತ್ತಿನ ಪ್ರಯಾಣಕ್ಕೆ 500 ರೂ.ಗೂ ಅಧಿಕ ವೆಚ್ಚವಾಗಲಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/new-highway-toll-rules-2026-cash-banned-from-april-10-fastag-and-upi-only-modes-allowed-know-more-449571.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo