ಆರ್‌ಸಿಬಿ ಪಾಲಿಗೆ ವರದಾನವಾದ ಒಂದೇ ಒಂದು ನೋ-ಬಾಲ್ | RCB Crush CSK by 43 Runs in IPL 2026 as Tim David’s Explosive Knock Turns Game After Crucial No-Ball

Sports

oi-Madhusudhan KR

ಐಪಿಎಲ್‌ 2026ರ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲಿನ ಹಾದಿ ಹಿಡಿದಿದೆ. ಭಾನುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಿಎಸ್‌ಕೆ ವಿರುದ್ಧ 43 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಚೆನ್ನೈ ಸತತ ಮೂರು ಸೋಲುಗಳು ಕಂಡಿದ್ದು, ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಅಲಂಕರಿಸಿದೆ.

ಟೀಮ್ ಡೇವಿಡ್ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 70 ರನ್ ಗಳಿಸಿದರು. ಈ ಮೂಲಕ ಅವರು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸಿಎಸ್‌ಕೆ ತಂಡದ ಪತನಕ್ಕೆ ಕಾರಣರಾದರು. ಹೀಗೆ ಮತ್ತೊಮ್ಮೆ ಸಿಎಸ್‌ಕೆ ಬೌಲರ್‌ಗಳು ಮತ್ತು ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು.

RCB Crush CSK by 43 Runs in IPL 2026 as Tim David s Explosive Knock Turns Game After Crucial No-Ball

ಬೃಹತ್ ಮೊತ್ತ ಪೇರಿಸಿದ ಆರ್‌ಸಿಬಿ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಟೀಮ್ ಡೇವಿಡ್ ಅವರ ಜೊತೆಗೆ ದೇವದತ್ ಪಡಿಕ್ಕಲ್ 29 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ನೊಂದಿಗೆ 50 ರನ್ (ಅರ್ಧಶತಕ) ಸಿಡಿಸಿ ಮಿಂಚಿದರು.

ಆರ್‌ಸಿಬಿ ಪರ ಅಬ್ಬರಿಸಿ ಆಟಗಾರರು

ಉಳಿದಂತೆ ರಜತ್ ಪಾಟಿದಾರ್ ಅಜೇಯ 48, ಫಿಲ್ ಸಾಲ್ಟ್ 46, ಮತ್ತು ವಿರಾಟ್ ಕೊಹ್ಲಿ 28 ರನ್‌ಗಳ ಕಾಣಿಕೆ ನೀಡಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಬೌಲಿಂಗ್‌ನಲ್ಲಿ ಅನ್ಶುಲ್ ಕಾಂಬೋಜ್, ಜೇಮಿ ಓವರ್‌ಟನ್ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು. ಆದರೂ ಕೊನೆವರೆಗೂ ಮೈದಾನದಲ್ಲಿ ನಿಂತ ರಜತ್ ಪಾಟಿದಾರ್ ಹಾಗೂ ಟಿಮ್ ಡೆವಿಡ್‌ ರನ್‌ಗಳ ಹೊಳೆಯನ್ನೇ ಹರಿಸಿ ತಂಡದ ಮೊತ್ತವನ್ನು 250ಕ್ಕೆ ಮುಟ್ಟಿಸಿದರು.

ಆರ್‌ಸಿಬಿ ವಿರುದ್ಧ ಸಿಎಸ್‌ಕೆ ಹೀನಾಯ ಸೋಲು

ಆರ್‌ಸಿಬಿ ನೀಡಿದ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, 19.3 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿತು. ಸಿಎಸ್‌ಕೆ ಪರ ಸರ್ಫರಾಜ್ ಖಾನ್ 50 ರನ್‌ (ಅರ್ಧಶತಕ) ಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದರೆ, ಪ್ರಶಾಂತ್ ವೀರ್ 43, ಮತ್ತು ಜೇಮಿ ಓವರ್‌ಟನ್ 37 ರನ್ ಕಲೆಹಾಕಿದರು. ಉಳಿದವರು 20 ರನ್‌ ದಾಟಿಸಲಿಲ್ಲ. ಆರ್‌ಸಿಬಿ ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಪಡೆದು ಮಿಂಚಿದರೆ, ಜಾಕೋಬ್ ಡಫಿ, ಕೃನಾಲ್ ಪಾಂಡ್ಯ ಮತ್ತು ಅಭಿನಂದನ ಸಿಂಗ್ ತಲಾ ಎರಡು ವಿಕೆಟ್ ಉರುಳಿಸಿದರು. ಸುಯಾಶ್ ಶರ್ಮಾ ಒಂದು ವಿಕೆಟ್ ಕಬಳಿಸಿದರು.

ಸಿಎಸ್‌ಕೆ ಎಡವಿದ್ದು ಎಲ್ಲಿ?

ಅನ್ಶುಲ್ ಕಾಂಬೋಜ್ ಎಸೆದ ನೋ-ಬಾಲ್ ಈ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಅವರು ಎಸೆದ 18ನೇ ಓವರ್‌ನ ಐದನೇ ಎಸೆತಕ್ಕೆ ಅಪಾಯಕಾರಿ ಬ್ಯಾಟರ್ ಟೀಮ್ ಡೇವಿಡ್ ಕ್ಲೀನ್ ಬೋಲ್ಡ್ ಆಗಿದ್ದರು. ಆದರೆ ಅದು ನೋ-ಬಾಲ್ ಆಗಿದ್ದರಿಂದ ಅವರಿಗೆ ಜೀನದಾನ ಸಿಕ್ಕಂತಾಯಿತು. ಅದೇ ಸಮಯಕ್ಕೆ ಅವರು ಕೇವಲ 28 ರನ್ ಗಳಿಸಿದ್ದರು. ಆದರೆ ಈ ಜೀವದಾನದ ಬಳಿಕ ಟೀಮ್ ಡೇವಿಡ್ ಅಬ್ಬರದ ಬ್ಯಾಟಿಂಗ್ ಮಾಡಿ ಸಿಎಸ್‌ಕೆ ಬೌಲರ್‌ಗಳನ್ನು ಚೆಂಡಾಡಿ ತಂಡದ ಮೊತ್ತವನ್ನು 250ಕ್ಕೆ ಕೊಂಡೋಯ್ದರು.

ಒಟ್ಟಿನಲ್ಲಿ ಟಿಮ್ ಡೇವಿಡ್‌ 8 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಪಂದ್ಯದ ದಿಕ್ಕನೇ ಬದಲಿಸಿದರು. ನೋ-ಬಾಲ್ ನಂತರದ ಫ್ರೀ-ಹಿಟ್ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ಡೇವಿಡ್, ಜೇಮಿ ಓವರ್‌ಟನ್ ಎಸೆದ 19ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಮತ್ತು ಒಂದು ಫೋರ್ ಚಚ್ಚಿ ಬರೋಬ್ಬರಿ 30 ರನ್‌ಗಳನ್ನು ಬಾಚಿಕೊಂಡರು. ಕೊನೆಯ ಓವರ್‌ನಲ್ಲಿ ಸಿಕ್ಸರ್‌ ಮತ್ತು ಬೌಂಡರಿಗಳನ್ನು ಬಾರಿಸುವ ಮೂಲಕ ತಂಡಕ್ಕೆ 250 ರನ್‌ಗಳ ಬೃಹತ್ ಮೊತ್ತ ತಂದುಕೊಟ್ಟರು. ಅನ್ಶುಲ್ ಕಾಂಬೋಜ್ ನೋ-ಬಾಲ್ ಹಾಕದಿದ್ದರೆ ಈ ಪಂದ್ಯದ ಪರಿಸ್ಥಿತಿಯೇ ಬೇರೆ ಆಗಿರುತ್ತಿತ್ತು. ಆರ್‌ಸಿಬಿ 220 ರನ್‌ಗಳ ಒಳಗೆ ನಿಯಂತ್ರಿಸಲ್ಪಡುತ್ತಿತ್ತು, ಆಗ ಸಿಎಸ್‌ಕೆಗೆ ಗುರಿ ಬೆನ್ನಟ್ಟುವುದು ಸುಲಭ ಆಗುತ್ತಿತ್ತು. ಒಟ್ಟಿನಲ್ಲಿ ಹೇಳುವುದಾದರೆ, ಒಂದೇ ಒಂದು ನೋ ಬಾಲ್‌ ಆರ್‌ಸಿಬಿ ಗೆಲವಿಗೆ ಪ್ರಮುಖ ಪಾತ್ರವಹಿಸಿತು ಅಂದ್ರೆ ತಪ್ಪಾಗಲಾರದು.

Disclaimer: This content was automatically imported from a third-party source via RSS feed. The original source is: https://kannada.oneindia.com/news/sports/rcb-crush-csk-by-43-runs-in-ipl-2026-as-tim-david-s-explosive-knock-turns-game-after-crucial-no-ball-449607.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo