
India
oi-Shankrappa Parangi
ನವದೆಹಲಿ; ಕೇಂದ್ರ ರೈಲ್ವೆ ಮಂಡಳಿಯು ಸ್ವದೇಶಿಯವಾಗಿ ರೈಲುಗಳ ಉತ್ಪಾದನೆಗೆ ಒತ್ತು ನೀಡುತ್ತಿದೆ. ಈಗಾಗಲೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ತಯಾರಿಸಿ ಹೆಸರುವಾಸಿಯಾದ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಸೆಮಿ-ಹೈ ಸ್ಪೀಡ್ ರೈಲುಗಳ ತಯಾರಿಕೆಯು ರೈಲ್ವೆ ಮಂಡಳಿಯಿಂದ ಅನುಮೋದನೆ ಪಡೆದಿದೆ. ಈ ಮೂಲಕ ಹೊಸ ಹೊಸ ಮಾರ್ಗಗಳಲ್ಲಿ ಗಂಟೆಗೆ 200ಕ್ಕೂ ಅಧಿಕ ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ರೈಲುಗಳ ತಯಾರಿಕೆ ಇನ್ನೆರಡು ವರ್ಷಗಳಲ್ಲಿ ಆಗಲಿವೆ.
ರೈಲ್ವೆ ಮಂಡಳಿಯು ಕಳೆದ ತಿಂಗಳು ಮಾರ್ಚ್ 23ರಂದು ತನ್ನ ಅಧಿಕೃತವಾಗಿ ಆದೇಶದಲ್ಲಿ ಅನುಮೋದನೆ ನೀಡಿದ್ದಾಗಿ ತಿಳಿಸಿತ್ತು. 2027-28 ರ ಹಣಕಾಸು ವರ್ಷದಲ್ಲಿ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ICF) ಎರಡು ಬ್ರಾಡ್ ಗೇಜ್ ಟ್ರೈನ್ಸೆಟ್ ರೇಕ್ಗಳ ತಯಾರಿಸಲಿದೆ. ಈ ಉತ್ಪಾದನೆಗೆ ಅನುಮೋದನೆ ನೀಡಲಾಗಿದೆ ಎಂದು ಆದೇಶದ ಮೂಲಕ ಮಾಹಿತಿ ನೀಡಿದೆ.

16 ಬೋಗಿಗಳ ರೈಲು, ಗರಿಷ್ಠ ವೇಗ 220 ಕಿಮೀ!
ಉದ್ದೇಶಿತ ಈ ಎರಡು ಸೆಮೈ ಹೈ ಸ್ಪೀಡ್ ರೈಲುಗಳು ಒಟ್ಟು 16 ಬೋಗಿಗಳನ್ನು ಹೊಂದಿರಲಿವೆ. ಬ್ರಾಡ್ ಗೇಟ್ ಟ್ರೈನ್ ಸೆಟ್ ಇವಾಗಿರಲಿವೆ. ಈ ರೈಲುಗಳ ವೈಶಿಷ್ಟ್ಯ ನೋಡುವುದಾದರೆ ಪ್ರತಿ ಗಂಟೆಗೆ 220 ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲ ವಿನ್ಯಾಸ ಹೊಂದಿವೆ. ಗರಿಷ್ಠ 200 ಕಿಲೋ ಮಿಟರ್ ಕಾರ್ಯಾಚರಣೆಯ ವೇಗದ ಸಾಮರ್ಥ್ಯ ತಡೆದುಕೊಳ್ಳುವ ಸ್ಟೀಲ್-ಬಾಡಿಯು ಈ ಬೋಗಿಗಳಿಗೆ ಇರಲಿವೆ. ಆ ರೀತಿಯಲ್ಲಿ ಇವುಗಳನ್ನು ತಯಾರಿಸಲು ಕಂಪನಿಗೆ ಸೂಚನೆ ನೀಡಲಾಗಿದೆ. 2028ರಲ್ಲಿ ಈ ಗಟ್ಟಿಮುಟ್ಟಾದ ಹೊಸ ರೈಲುಗಳನ್ನು ಭಾರತೀಯ ರೈಲ್ವೆ ಜಾಲದಲ್ಲಿ ಸೆಮಿ-ಹೈ ಸ್ಪೀಡ್ ಸೇವೆಗೆ ನಿಯೋಜಿಸಲು ಚಿಂತನೆ ನಡೆಸಿದೆ.
ರೈಲ್ವೆ ಮಂಡಳಿಯು ಈ ಅನುಮೋದನೆಯು ದೇಶೀಯವಾಗಿ ಸೆಮಿ-ಹೈ ಸ್ಪೀಡ್ ರೋಲಿಂಗ್ ಸ್ಟಾಕ್ ಉತ್ಪಾದನೆ ವಿಸ್ತರಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ನಗರಗಳ ನಡುವಿನ ರೈಲು ಸಂಚಾರದ ಕಾರ್ಯಕ್ಷಮತೆಯನ್ನು ಸುಧಾರಿಸಲು ವಂದೇ ಭಾರತ್ ಮಾದರಿಯಲ್ಲಿ ಈ ರೈಲುಗಳು ಮೂಲಕ ಸೇವೆ ನೀಡಲು ಭಾರತೀಯ ರೈಲ್ವೆ ಪ್ಲ್ಯಾನ್ ಮಾಡಿಕೊಂಡಿದೆ.
ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ
ದೇಶಾದ್ಯಂತ ವಿವಿಧೆಡೆ ಏಳು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲೂ ಈ ಕಾರಿಡಾರ್ ತಲೆ ಎತ್ತಲಿದೆ. ಈ ಮಾರ್ಗಗಳಲ್ಲಿ ದೇಶಿಯ ಈ ಸೆಮಿ ಹೈಸ್ಪೀಡ್ ರೈಲುಗಳು ಸಂಚರಿಸಬಹುದೆಂದು ಹೇಳಲಾಗುತ್ತಿದೆ.
ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಈಗಾಗಲೇ ವಂದೇ ಭಾರತ್ ರೈಲುಗಳನ್ನು ಯಶಸ್ವಿಯಾಗಿ ನಿರ್ಮಿಸಿ ಜಗತ್ತಿನ ಗಮನ ಸೆಳೆದಿದೆ. ಅದೇ ಕಂಪನಿಗೆ ರೈಲ್ವೆ ಮಂಡಳಿಯು 2027-28ರ ಹಣಕಾಸು ವರ್ಷದಲ್ಲಿ ಎರಡು ಪೂರ್ಣ ಪ್ರಮಾಣದ (ತಲಾ 16 ಬೋಗಿಗಳ) ರೇಕ್ಗಳನ್ನು ತಯಾರಿಸಲು ಒಪ್ಪಿಗೆ ನೀಡಿದೆ. ಇದು ಇದು ಸಂಪೂರ್ಣ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಭಾಗವಾಗಿದೆ.
-

Summer Special Trains: ಮೈಸೂರಿನಿಂದ ವಿಶೇಷ ರೈಲು ಸೇವೆ; ಹುಬ್ಬಳ್ಳಿ, ಬೆಂಗಳೂರಿನ ರೈಲು ಸೇವೆ ವಿಸ್ತರಣೆ
-

ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ!
-

Bengaluru Metro: ನೇರಳೆ- ಹಸಿರು ಮಾರ್ಗದ ಸಂಚಾರ ದಟ್ಟಣೆಗೆ ಮುಕ್ತಿ, ಹೊಸ ರೈಲುಗಳಿಗೆ ಬೋರ್ಡ್ ಅನುಮತಿ
-

Amrit Bharat Express 3.0: ಹೊಸ ವಿನ್ಯಾಸ, ಎಸಿ ಕೋಚ್ ಸಹಿತ ಅಮೃತ್ ಭಾರತ್ ರೈಲು ಸೇವೆ
-

First Rail: ದಶಕ ಪೂರೈಸಿದ ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲು; ಅದರ ಸಂಚಾರ ವೇಗ, ಮಾರ್ಗದ ವಿವರ
-

High Speed Rail: ಬೆಂಗಳೂರು ಸೇರಿ 3 ಹೈಸ್ಪೀಡ್ ರೈಲು ಕಾರಿಡಾರ್ ಡಿಪಿಆರ್ 2027ಕ್ಕೆ ಪೂರ್ಣ, ವಿವರ
-

Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ
-

ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ
-

“ನಾನು ಔಟ್ ಆಗಿದ್ದಕ್ಕೇ ತುಂಬಾ ಖುಷಿಯಾಯ್ತು”: ಸಿಎಸ್ಕೆ ಎದುರು ರನ್ ಮಳೆ ಹರಿಸಿದ ಬಳಿಕ ಪಡಿಕ್ಕಲ್ ಹೀಗಂದಿದ್ದೇಕೆ?
-

2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
-

Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral
-

Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ
-

Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್
-

Gold and Silver Rate Today April 5: ಚಿನ್ನ – ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ
-

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ
Disclaimer: This content was automatically imported from a third-party source via RSS feed. The original source is: https://kannada.oneindia.com/news/india/semi-high-speed-rails-railway-board-approves-manufactur-200-kmph-semi-high-speed-trains-fy-2027-28-449691.html. xn--babytilbehr-pgb.com does not claim ownership of this content. All rights remain with the original publisher.
