Mohsina Kidwai: ಕೇಂದ್ರ ಮಾಜಿ ಸಚಿವೆ ಮೊಹ್ಸಿನಾ ಕಿದ್ವಾಯಿ ನಿಧನ, ಗಣ್ಯರ ಸಂತಾಪ | Former Union Minister and Senior Congress Leader Mohsina Kidwai Passes Away at 94; Funeral Today

India

oi-Shankrappa Parangi

ನವದೆಹಲಿ: ಕೇಂದ್ರದ ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಮೊಹ್ಸಿನಾ ಕಿದ್ವಾಯಿ (94) ಅವರು ನಿಧನರಾಗಿದ್ದಾರೆ. ಅವರಿಗೆ ಕರ್ನಾಟಕದ ಸಚಿವರು ಸೇರಿದಂತೆ ದೇಶಾದ್ಯಂತ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬುಧವಾರ ಬೆಳಗ್ಗೆ ನೋಯ್ಡಾದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ನಿಝಾಮುದ್ದಿನ್ ನಲ್ಲಿರುವ ದಫನ ಭೂಮಿಯಲ್ಲಿ ಸಂಜೆ 5 ಗಂಟೆಗೆ ಅಂತ್ಯ ಕ್ರಿಯೆ ನೆರವೇರಿಸುವುದಾಗಿ ಮೃತರ ಅವರ ಅಳಿಯ ರಾಝಿ ಉರ್ ರೆಹಮಾನ್ ಕಿದ್ವಾಯಿ ಅವರು ತಿಳಿಸಿದ್ದಾರೆ.

Mohsina Kidwai

ಇವರು ಕಾಂಗ್ರೆಸ್‌ನ ಹಿರಿಯ ನಾಯಕಿಯಾಗಿದ್ದು, ಪಕ್ಷದ ಕಾರ್ಯಾಕಾರಿ ಸಮಿತಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಅಗಲಿಕೆ ಕುರಿತು ಎಐಸಿಸಿ ಪ್ರಧಾನ ಕಾರ್ಯದಶಿ ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯ ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಅನುಭವಿ ನಾಯಕಿಯರಲ್ಲಿ ಒಬ್ಬರು: ಜಿ.ಪರಮೇಶ್ವರ

ಕೇಂದ್ರದ ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಶ್ರೀಮತಿ ಮೊಹ್ಸಿನಾ ಕಿದ್ವಾಯಿ ಅವರ ಅಗಲಿಕೆಯ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಅವರು ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಮತ್ತು ಅನುಭವಿ ನಾಯಕಿಯರಲ್ಲಿ ಒಬ್ಬರು. ಹಲವು ದಶಕಗಳ ಕಾಲ ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಪಕ್ಷ ಸಂಘಟನೆಯ ಬಲಪಡಿಸುವಲ್ಲಿ ಮತ್ತು ಜನಪರ ನೀತಿಗಳನ್ನು ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು ಎಂದು ಅವರ ಕಾರ್ಯ ಸ್ಮರಿಸಿದರು.

ಕೇಂದ್ರ ಸಚಿವೆಯಾಗಿ ವಿವಿಧ ಇಲಾಖೆಗಳ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿ, ವಿಶೇಷವಾಗಿ ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಬಲೀಕರಣದ ಕ್ಷೇತ್ರಗಳಲ್ಲಿ ಮಾಡಿದ ಸೇವೆ ಸದಾ ಸ್ಮರಣೀಯ ಎಂದರು.

ಅವರ ಅಗಲಿಕೆಯು ರಾಜಕೀಯ ಕ್ಷೇತ್ರಕ್ಕೆ ದೊಡ್ಡ ನಷ್ಟ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ. ಅವರ ಕುಟುಂಬವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿ‌ ನೀಡಲಿ‌ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಎಕ್ಸ್ ಪೊಸ್ಟ್ ಮಾಡಿದ್ದಾರೆ.

ರಣದೀಪ್ ಸಿಂಗ್ ಸುರ್ಜೆವಾಲ ಸಂತಾಪ

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು, ‘ಮೊಹ್ಸಿನಾ ಕಿದ್ವಾಯಿ ಅವರನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದೇವೆ. ದೇಶದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅವರ ದೂರದೃಷ್ಟಿ, ಸ್ಥೈರ್ಯ, ಕಟುವಾದ ಸತ್ಯವನ್ನು ಮಾತನಾಡುವ ಸಾಮರ್ಥ್ಯ ಮತ್ತು ಜಾತ್ಯತೀತತೆಯ ಕಾರಣಕ್ಕಾಗಿ ಬದ್ಧತೆಯನ್ನು ಲಕ್ಷಾಂತರ ಜನರು ಮೆಚ್ಚಿದ್ದಾರೆ.

ಮೊಹ್ಸಿನಾ ಕಿದ್ವಾಯಿ ಅವರು ಯಾವಾಗಲೂ ನನ್ನನ್ನು ಅಪಾರ ಪ್ರೀತಿ, ಋಷಿ ಮಾತನಾಡಿಸುತ್ತಿದ್ದರು. ರಾಜಕೀಯ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದರು. ಅವರ ಸಹಜವಾದ ನಗು, ವಿವೇಚನಾಯುಕ್ತ ಮಾತುಗಳು ಇಷ್ಟವಾಗುತ್ತಿದ್ದವು. ಇಂದು ಅವರು ಅಗಲಿದ್ದು, ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ತಿಳಿಸಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/india/former-union-minister-and-senior-congress-leader-mohsina-kidwai-passes-away-at-94-funeral-today-449771.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo