
Karnataka
oi-Shankrappa Parangi
Karnataka By Election 2026: ಕರ್ನಾಟಕದಲ್ಲಿ ಈ ವರ್ಷದ ಉಪಚುನಾವಣೆಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇವೆ. ಕಳೆದ ಎರಡು ವಾರಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಂದ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆದಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರ ತೆರಿಗೆ ಹೊರೆ ಅನುಭವಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ದೂರುತ್ತಲೇ ಬಂದಿದ್ದಾರೆ. ಚುನಾವಣೆ ಫಲಿತಾಂಶ್ ಮತ್ತು ಕಾಂಗ್ರೆಸ್ ಕುರಿತು ಅವರು ಭವಿಷ್ಯ ನುಡಿದಿದ್ದಾರೆ.
‘ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳು ಕೇವಲ ಬೈ-ಎಲೆಕ್ಷನ್ ಅಲ್ಲ…’ ಎಂದು ಅವರು ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ‘ಇದು ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಜನರು ಹೇಳುತ್ತಿರುವ ‘ಟಾಟಾ… ಟಾಟಾ… ಬೈ ಬೈ ಎಲೆಕ್ಷನ್’ ಅಂತಲೂ ಅವರು ಭವಿಷ್ಯ ನುಡಿಸಿದ್ದಾರೆ.

ಸರ್ಕಾರದ ವಿರುದ್ಧ ಜನಾಕ್ರೋಶದ ಅಲೆ ಇದೆ?
ಗುರುವಾರ ಎಕ್ಸ್ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರು ‘ಅನುಕಂಪದ ಅಲೆ’ ಬಗ್ಗೆ ಕನಸು ಕಾಣುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಕಾಣುತ್ತಿರುವುದು ಅನುಕಂಪದ ಅಲೆ ಅಲ್ಲ, ಜನಾಕ್ರೋಶದ ಅಲೆ! ಸಿಎಂ ಸಿದ್ದರಾಮಯ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಕಳೆದ ಮೂರು ವರ್ಷಗಳಾಗಿದೆ. ಈ ಅವಧಿಯಲ್ಲಿ ಏನೆಲ್ಲ ಆಯಿತೆಂದು ಅವರು ಪಟ್ಟಿ ನೀಡಿ ಟೀಕಿಸಿದ್ದಾರೆ.
ಆರ್.ಅಶೋಕ್ ಅವರ ಪ್ರಕಾರ, ‘ಸರ್ಕಾರ ಜನರ ಮೇಲೆ ತೆರಿಗೆ ಭಾರ ಹೇರಿದೆ. ದಿನನಿತ್ಯದ ಬಳಕೆ ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆ ಮಾಡಿದೆ, ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಳ್ಳಿದೆ, ಕನ್ನಡಿಗರನ್ನು ಸಾಲದ ಸುಳಿಗೆ ಸಿಲುಕಿಸಿದ್ದಲ್ಲೇ ರಾಜ್ಯದಲ್ಲಿ ಅಭಿವೃದ್ಧಿಯನ್ನು ಮರೀಚಿಕೆಯಾಗಿಸಿದೆ’ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್‌ಗೆ ಜನ ಬುದ್ಧಿ ಕಲಿಸ್ತಾರೆ; ಭವಿಷ್ಯ
ಒಂದು ಕೈಯಲ್ಲಿ ಗ್ಯಾರಂಟಿ ಕೊಡುವ ನಾಟಕವಾಡಿ, ಇನ್ನೊಂದು ಕೈಯಲ್ಲಿ ತೆರಿಗೆ ಮತ್ತು ಬೆಲೆ ಏರಿಕೆಯಿಂದ ಜನರ ಜೇಬಿಗೆ ಕನ್ನ ಹಾಕುವ ಪಿಕ್ ಪಾಕೆಟ್ ನಡೆಯುತ್ತಿದೆ ಎಂದು ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಲೇವಡಿ ಮಾಡಿದರು. ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಕೇವಲ ಎರಡು ಕ್ಷೇತ್ರಗಳ ಚುನಾವಣೆ ಅಲ್ಲ. ಇದು ದುರಾಡಳಿತ, ಭ್ರಷ್ಟಾಚಾರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಕನ್ನಡಿಗರು ನೀಡಲಿರುವ ಎಚ್ಚರಿಕೆಯ ಗಂಟೆ. ಉಪ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಸರ್ಕಾರವನ್ನು ತಿರಸ್ಕರಿಸಲಿದ್ದಾರೆ, ಸೋಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಜನಸಾಮಾನ್ಯರು ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಕಲಿಸುವ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಜನರಿಂದ ‘ಟಾಟಾ… ಟಾಟಾ… ಬೈ ಬೈ!’ ಎಂದು ಸ್ಪಷ್ಟ ಸಂದೇಶ ಬರುತ್ತದೆ ಎಂದರು. ಈ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
-

ರಾಜ್ಯದ 3,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿ: ‘ಸಿಎಂಗೆ ದೋಸೆ ಮಜಾ, ಮಕ್ಕಳಿಗೆ ಜೀವ ಭಯ’ ಎಂದ ಆರ್. ಅಶೋಕ್
-

ಅಧಿಕಾರ ಬದಲಾವಣೆ; ನನ್ನ-ಸಿಎಂ ಬಿಟ್ಟು ಬೇರೆಯವರ ಮಾತು ಮುಖ್ಯವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ
-

ಬಾಗಲಕೋಟೆಗೆ ಸಿದ್ದರಾಮಯ್ಯ ದ್ರೋಹ ಮಾಡಿದ್ರೆ ಪಕ್ಷ ಮತ್ತೆ ಗೆಲ್ಲುತ್ತಿತ್ತೇ? ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ತಿರುಗೇಟು
-

‘Bagalkot: ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಓಬಿಸಿ ವಿರೋಧಿ ಸರ್ಕಾರವಿದೆ; ಕಾಂಗ್ರೆಸ್‌ಗೆ ನಿಮ್ಮ ಶಕ್ತಿ ತೋರಿಸಿ”
-

ಉಪಚುನಾವಣಾ ಅಖಾಡ ಸಜ್ಜು: ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಮತದಾನ; ಇಂದು ಮನೆ ಮನೆ ಮತಯಾಚನೆ
-

Mohsina Kidwai: ಕೇಂದ್ರ ಮಾಜಿ ಸಚಿವೆ ಮೊಹ್ಸಿನಾ ಕಿದ್ವಾಯಿ ನಿಧನ, ಗಣ್ಯರ ಸಂತಾಪ
-

Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral
-

ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ
-

2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
-

Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್
-

Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: ‘ಬಾಸ್’ ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ
-

ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral
-

ವಾರ ಭವಿಷ್ಯ: ಈ ರಾಶಿಯ ಪ್ರೇಮಿಗಳು ಮತ್ತೆ ಒಂದಾಗುತ್ತಾರೆ! ಸೂರ್ಯನಿಗೆ ಅರ್ಘ್ಯದಿಂದ ಭಾಗ್ಯ ಬದಲಾವಣೆ
-

ಹುಡುಗಿಯರೇ ಎಚ್ಚರ: ಟಾಕ್ಸಿಕ್ ಗಂಡಸರ ಲಕ್ಷಣಗಳಿವು, ಮೆಚ್ಚಿ ಒಲಿದರೆ ಬಲಿಯಾಗುವಿರಿ -ಡಾ ರೂಪಾ ರಾವ್ ಬರಹ
-

Ragi Ambli: ಬೇಸಿಗೆಯ ಬಿಸಿಲಿಗೆ ತಂಪೆರೆಯುವ ‘ರಾಗಿ ಅಂಬಲಿ’; ಮನೆಯಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/karnataka-by-elections-r-ashoka-predicts-bye-bye-to-congress-govt-in-davanagere-and-bagalkot-449795.html. xn--babytilbehr-pgb.com does not claim ownership of this content. All rights remain with the original publisher.
