
Karnataka
oi-Madhusudhan KR
Karnataka 2nd PUC Exam Results 2026: ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ. ಹಾಗಾದ್ರೆ ಫಲಿತಾಂಶದಲ್ಲಿ ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEAB) ಇಂದು (ಏಪ್ರಿಲ್ 9, 2026) ಗುರುವಾರ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ವರ್ಷ ಶೇಕಡ 86% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ (ಕಳೆದ ವರ್ಷ ಶೇಕಡ 73.45% ಇತ್ತು).

ಜಿಲ್ಲಾವಾರು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ
* ಉಡುಪಿ – ಶೇಕಡ 93.90
* ದಕ್ಷಿಣ ಕನ್ನಡ – ಶೇಕಡ 93.57
* ಬೆಂಗಳೂರು ದಕ್ಷಿಣ – ಶೇಕಡ 85.36
* ಕೊಡಗು – ಶೇಕಡ 83.84
* ಬೆಂಗಳೂರು ಉತ್ತರ – ಶೇಕಡ 83.31
* ಉತ್ತರ ಕನ್ನಡ ಜಿಲ್ಲೆ – ಶೇಕಡ 82.93
* ಶಿವಮೊಗ್ಗ – ಶೇಕಡ 79.91
* ಬೆಂಗಳೂರು ಗ್ರಾಮಾಂತರ – ಶೇಕಡ 79.70
* ಚಿಕ್ಕಮಗಳೂರು – ಶೇಕಡ 79.56
* ಹಾಸನ – ಶೇಕಡ 77.56
* ಚಿಕ್ಕಬಳ್ಳಾಪುರ – ಶೇಕಡ 75.80
* ಮೈಸೂರು – ಶೇಕಡ 74.30
* ಚಾಮರಾಜನಗರ – ಶೇಕಡ 73.97
* ಮಂಡ್ಯ – ಶೇಕಡ 73.27
* ಬಾಗಲಕೋಟೆ – ಶೇಕಡ 72.83
* ಕೋಲಾರ – 72.45
* ಧಾರವಾಡ – ಶೇಕಡ 72.32
* ತುಮಕೂರು – ಶೇಕಡ 72.02
* ರಾಮನಗರ – ಶೇಕಡ 69.71
* ದಾವಣಗೆರೆ – ಶೇಕಡ 69.45
* ಹಾವೇರಿ – ಶೇಕಡ 76.56
* ಬೀದರ್ – ಶೇಕಡ 67.31
* ಕೊಪ್ಪಳ – ಶೇಕಡ 67.20
* ಚಿಕ್ಕೋಡಿ – ಶೇಕಡ 66.76
* ಗದಗ – ಶೇಕಡ 66.64
* ಬೆಳಗಾವಿ – ಶೇಕಡ 65.37
* ಬಳ್ಳಾರಿ – ಶೇಕಡ 64.41
* ಚಿತ್ರದುರ್ಗ – ಶೇಕಡ 59.87
* ವಿಜಯಪುರ – ಶೇಕಡ 58.81
* ರಾಯಚೂರು – ಶೇಕಡ 58.75
* ಕಲಬುರಗಿ – ಶೇಕಡ 55.70
* ಯಾದಗಿರಿ ಜಿಲ್ಲೆ ಶೇಕಡ 48.45
ಫಲಿತಾಂಶ ನೋಡುವ ವಿಧಾನಗಳು
ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಗುರುವಾರ ಪ್ರಕಟ ಮಾಡಲಾಗಿದೆ. ವಿದ್ಯಾರ್ಥಿಗಳು ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ https://karresults.nic.in ವೆಬ್‌ಸೂಟ್ ಮೂಲಕ ರಿಸಲ್ಟ್ ವೀಕ್ಷಣೆ ಮಾಡಬಹುದು. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ, Sumbit ಬಟನ್ ಮೇಲೆ ಕ್ಲಿಕ್ ಮಾಡಿ. ಬಳಿಕ ಅಂಕಪಟ್ಟಿ ಕಾಣುತ್ತದೆ. ಅದನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಉಳಿದಂತೆ ಕರ್ನಾಟಕ ಒನ್ ಮೊಬೈಲ್ ಆ್ಯಪ್‌ನಲ್ಲಿ ಸಿಗಲಿದೆ. ವಿದ್ಯಾರ್ಥಿಗಳ ಮೊಬೈಲ್‌ಗೆ ಎಸ್‌ಎಂಸ್ ಮೂಲಕ ಫಲಿತಾಂಶದ ಮಾಹಿತಿ ರವಾನೆ ಆಗುತ್ತದೆ. ಇನ್ನು ಈ ವರ್ಷ ಮೊಟ್ಟ ಮೊದಲ ಬಾರಿ ಡಿಜಿಲಾಕರ್‌ನಲ್ಲೂ https://www.digilocker.govt.inನಲ್ಲೂ ಫಲಿತಾಂಶ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 18ರಿಂದ ಮಾರ್ಚ್ 17ರ ವರೆಗೆ ನಡೆದವು. ಒಟ್ಟು 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು, ಇದರಲ್ಲಿ 5,174 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ವಿಭಾಗವಾರು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ
* ವಿಜ್ಞಾನ (Science)- 2,92,645
* ವಾಣಿಜ್ಯ (Commerce) – 2,11,174
* ಆರ್ಟ್ಸ್ (Arts) – 1,42,982
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/2nd-puc-results-2026-announced-on-april-09-in-karnataka-know-district-wise-results-details-449913.html. xn--babytilbehr-pgb.com does not claim ownership of this content. All rights remain with the original publisher.
