Nuclear Bomb: ಆಗ ಜಪಾನ್‌ಗೆ ಆದ ಗತಿ ಈಗ ಇರಾನ್‌ಗೆ ಬರದಿರಲಿ; ಮತ್ತೆ ಅಣ್ವಸ್ತ್ರ ಭೀತಿ: ರಂಗಸ್ವಾಮಿ ಮೂಕನಹಳ್ಳಿ | Nuclear Bomb Rangaswamy Mookanahalli Warns of Nuclear Threat May Iran Not Face the Fate of Japan

International

oi-Hitesh Y

ಆಗ ಜಪಾನ್‌ಗೆ ಆದ ಗತಿ ಈಗ ಇರಾನ್‌ಗೆ ಬರದಿರಲಿ; ಮತ್ತೆ ಅಣ್ವಸ್ತ್ರ ಭೀತಿಯ ಬಗ್ಗೆ ಲೇಖಕ ಮತ್ತು ಹಣಕಾಸು ತಜ್ಞ ರಂಗಸ್ವಾಮಿ ಮೂಕನಹಳ್ಳಿ ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ಬಹಳ ಅಗ್ರೆಷನ್ ತೋರಿಸುತಿತ್ತು.ಅಮೆರಿಕಾದ ಬೆದರಿಕೆಗಳಿಗೆ ಎಳ್ಳು ಕಾಳಿನ ಬೆಲೆ ನೀಡುತ್ತಿರಲಿಲ್ಲ.ಪುಟಾಣಿ ಜಪಾನ್ ಅಮೇರಿಕಾಕ್ಕೆ ಸೆಡ್ಡು ಹೊಡೆದು ನಿಂತದ್ದು ಎಲ್ಲರಿಗೂ ಗೊತ್ತಿರುವ ವಿಚಾರ.ಆಮೇಲೇನಾಯ್ತು ? ಅಮೇರಿಕಾ ನ್ಯೂಕ್ಲಿಯರ್ ಬಾಂಬ್ ಸಿಡಿಸುವುದರ ಮೂಲಕ ಜಪಾನ್ ದೇಶವನ್ನು ಹಾಳು ಮಾಡುವುದರೊಂದಿಗೆ ಎರಡನೇ ಮಹಾಯುದ್ಧ ಮುಕ್ತಾಯವಾಯ್ತು. ಇವತ್ತಿಗೆ ಮೂರನೇ ಮಹಾಯುದ್ಧ ನಡೆಯುತ್ತಿಲ್ಲ.ಬಟ್ ಜಪಾನ್ ಜಾಗದಲ್ಲಿ ಇರಾನ್ ನಿಂತಿದೆ.ಅದೇ ಅಗ್ರೆಷನ್, ಅದೇ ಸಿಟ್ಟು ,ಸೆಡ್ಡು ! ಮುಂದಿನ ಫಲಿತಾಂಶ? ನನ್ನ ಊಹೆ ಸುಳ್ಳಾಗಲಿ 🙏 ಭಾರತ ಇರಾನಿನಲ್ಲಿರುವ ಭಾರತೀಯರನ್ನು ದೇಶ ತೊರೆಯುವಂತೆ ಕರೆ ನೀಡಿದೆ.

Nuclear Bomb

ನೆಟ್ಟಿಗರು ಹೇಳಿದ್ದೇನು

ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೇಘಾ ಎನ್ನುವವರು, ಈ‌ ಯುದ್ಧ ನಿಲ್ಲಲಿ ಅಂತ ನಾನು ದೇವರಲ್ಲಿ ಪ್ರಾರ್ಥನೆ ಮಾಡ್ತಾ ಇದ್ದಿನಿ. ಏನು ಸಿಗುತ್ತೆ ಒಂದಲ್ಲಾ ಒಂದು ದಿನ ಈ ಭೂಮಿಯಿಂದ ಹೊರಡಬೇಕಲ್ವಾ ಯಾಕೆ ಈ ಯುದ್ಧ , ಅಧಿಕಾರ ದಾಹ, ಎಲ್ಲಾ ದೇಶವನ್ನು ನನ್ನ ಕೈಕೆಳಗೆ ಇಟ್ಕೊತಿನಿ ಅನ್ನೋ ಹಠ . ಒಂದು ತಿಳಿತಿಲ್ಲಾ. ಈ ಯುದ್ಧದಿಂದ ತೊಂದರೆ ಆಗೋದು ಸಾಮನ್ಯ ಜನರಿಗೆ. ಟ್ರಂಪ್‌ಗೆ ನಮ್ಮ ಆಂಜನೇಯ ಒಳ್ಳೆಯ ಬುದ್ಧಿ ಕೊಡ್ಲಿ ಎಂದಿದ್ದಾರೆ.

ದಿನಕರ್ ಎನ್ನುವವರು, ಎಲ್ಲರಿಗೂ ಗಾಬರಿಯಾಗಿದೆ. ಪಕ್ಕದ ದೇಶದವರು ಇದನ್ನು ನೋಡಿ ನಗುತ್ತಿದ್ದಾರೆ. ನನಗೂ ದುಗುಡ ಯಾಕೆಂದರೆ ನಾನು ಸಹ ಇದರ ಪಕ್ಕದ ದೇಶದಲ್ಲಿದ್ದೇನೆ ಎಂದಿದ್ದಾರೆ.

ನ್ಯೂಕ್ಲಿಯರ್ ಬಾಂಬ್ ದಾಳಿ ಎಚ್ಚರಿಕೆ

ಅಮೆರಿಕ ಈಚೆಗೆ ಇರಾನ್‌ಗೆ ಗಂಭೀರವಾದ ಎಚ್ಚರಿಕೆಯನ್ನು ಕೊಟ್ಟಿತ್ತು. ವಿನಾಶಕಾರಿ ಬಾಂಬ್ ದಾಳಿ / ನ್ಯೂಕ್ಲಿಯರ್ ಬಾಂಬ್ ದಾಳಿ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕೊಟ್ಟಿದ್ದರು. ಇದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಇರಾನ್‌ನ ಯುರೇನಿಯಂ ಸಮೃದ್ಧಿ ಕೇಂದ್ರಗಳ ಮೇಲೆ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಕಣ್ಣಿಟ್ಟಿದ್ದು, ಅಣುಬಾಂಬ್ ಮಾದರಿಯ ದಾಳಿ ನಡೆಸುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/nuclear-bomb-rangaswamy-mookanahalli-warns-of-nuclear-threat-may-iran-not-face-the-fate-of-japan-449979.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo